ಬೆಂಗಳೂರು : PSI Recruitment Scam : ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಬಹುದೊಡ್ಡ ಬೇಟೆಯನ್ನು ಮಾಡಿದ್ದಾರೆ. ನಾಲ್ಕು ದಿನಗಳ ಕಾಲ ಹಿರಿಯ ಐಪಿಎಸ್ ಅಧಿಕಾರಿ ಎಡಿಜಿಪಿ ಅಮೃತ್ ಪೌಲ್ರನ್ನು ವಿಚಾರಣೆಗೆ ಒಳಪಡಿಸಿದ್ದ ಸಿಐಡಿ ಅಧಿಕಾರಿಗಳು ಇಂದು ಅವರನ್ನು ಬಂಧಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮೃತ್ ಪೌಲ್ರ ಬಂಧನದ ಬಳಿಕ ವೈದ್ಯಕೀಯ ಪರೀಕ್ಷೆಗೆಂದು ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಕರ್ನಾಟಕದ ಇತಿಹಾಸದಲ್ಲಿಯೇ ಎಡಿಜಿಪಿ ಮಟ್ಟದ ಅಧಿಕಾರಿಯನ್ನು ಬಂಧಿಸಿರುವುದು ಇದೇ ಮೊದಲು ಎನ್ನಲಾಗಿದೆ.
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಲಂಚಾವತಾರ ಕೇಳಿ ಬಂದ ಬಳಿಕ ಅಮೃತ್ ಪೌಲ್ ಹೆಸರು ಬೆಳಕಿಗೆ ಬಂದಿತ್ತು. ಪಿಎಸ್ಐ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮೃತ್ ಪೌಲ್ರಿಗೆ ಈ ವಿಚಾರದಲ್ಲಿ ಸರ್ಕಾರ ಮುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶಗಳನ್ನು ನೀಡಿತ್ತು. ಆದರೆ ಇದನ್ನೇ ದುರುಪಯೋಗ ಪಡಿಸಿಕೊಂಡ ಅಮೃತ್ ಪೌಲ್ ತಮ್ಮ ಕಚೇರಿಯಲ್ಲಿಯೇ ಓಎಂಆರ್ ಶೀಟ್ಗಳನ್ನು ತಿದ್ದಿದ್ದಾರೆ ಎಂಬ ಆರೋಪ ಎದುರಾಗಿತ್ತು. ಅಮೃತ್ ಪೌಲ್ ವಿರುದ್ಧ ಅಕ್ರಮ ಬೆಳಕಿಗೆ ಬರುತ್ತಿದ್ದಂತೆಯೇ ಇವರ ವಿರುದ್ಧ ಸಾಕ್ಷ್ಯಗಳನ್ನು ಕಲೆ ಹಾಕಿರುವ ಸಿಐಡಿ ಅಧಿಕಾರಿಗಳು ಅಮೃತ್ ಪೌಲ್ರನ್ನು ಬಂಧಿಸಿದ್ದಾರೆ. 1995ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಅಮೃತ್ ಪೌಲ್ ಮೂಲತಃ ಪಂಜಾಬ್ನವರಾಗಿದ್ದು ಆರೋಪ ಎದುರಾಗುತ್ತಿದ್ದಂತೆಯೇ ಇವರಿಗೆ ಯಾವುದೇ ಹುದ್ದೆಯನ್ನು ನೀಡದೇ ಸರ್ಕಾರವು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿತ್ತು.
ಅಮೃತ್ ಪೌಲ್ ಜೊತೆಯಲ್ಲಿ ನೇಮಕಾತಿ ವಿಭಾಗದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹರ್ಷ, ಸಶಸ್ತ್ರ ಮೀಸಲು ಪಡೆಯ ಸಬ್ ಇನ್ಸ್‌ಪೆಕ್ಟರ್ ಶ್ರೀನಿವಾಸ್, ಹೆಡ್ ಕಾನ್‌ಸ್ಟೇಬಲ್ ಲೋಕೇಶ್, ದ್ವಿತೀಯ ದರ್ಜೆ ಸಹಾಯಕ ಶ್ರೀಧರ್ ಹಾಗೂ ಮಧ್ಯವರ್ತಿಗಳಾದ ಮಂಜುನಾಥ್ ಮತ್ತು ಶರತ್ರನ್ನು ಬಂಧಿಸಲಾಗಿದೆ. ಇವರೆಲ್ಲರೂ ಸ್ಟ್ರಾಂಗ್ ರೂಮ್ನಲ್ಲಿ ಓಎಂಆರ್ ಶೀಟ್ಗಳನ್ನು ತಿದ್ದಿದ್ದರು ಎನ್ನಲಾಗಿದೆ. ಸಂಪೂರ್ಣ ಸ್ಟ್ರಾಂಗ್ ರೂಮ್ನ ನಿಯಂತ್ರಣವು ಎಡಿಜಿಪಿ ಅಮೃತ್ ಪೌಲ್ರ ಕೈಯಲ್ಲೇ ಇತ್ತು. ಈ ಬಗ್ಗೆ ಸೂಕ್ತ ಸಾಕ್ಷ್ಯಗಳು ದೊರಕಿರುವ ಹಿನ್ನೆಲೆಯಲ್ಲಿ ಅಮೃತ್ ಪೌಲ್ರನ್ನು ಬಂಧಿಸಲಾಗಿದೆ.
ಇದನ್ನು ಓದಿ : Actor Swara Bhasker : ನಟಿ ಸ್ವರಾ ಭಾಸ್ಕರ್ಗೆ ಜೀವ ಬೆದರಿಕೆ ಪತ್ರ : ಪೊಲೀಸರಿಂದ ತನಿಖೆ
ಇದನ್ನೂ ಓದಿ : Rohit Sharma batting practice : ಟೀಮ್ ಇಂಡಿಯಾ ಟೆಸ್ಟ್ ಆಡುತ್ತಿರುವ 500 ಮೀ. ದೂರದಲ್ಲೇ ರೋಹಿತ್ ಬ್ಯಾಟಿಂಗ್ ಅಭ್ಯಾಸ
karnataka psi recruitment scam adgp amrit paul arrested by cid