Leena Manimekalai : ಸಿಗರೇಟ್​ ಸೇದಿದಂತೆ ಕಾಳಿ ಮಾತೆಯನ್ನು ಚಿತ್ರಿಸಿದ ನಿರ್ಮಾಪಕಿ : ನೆಟ್ಟಿಗರಿಂದ ವ್ಯಾಪಕ ಆಕ್ರೋಶ

Leena Manimekalai : ಲೇಖಕಿ – ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಕಾಳಿ ದೇವಿಯು ಸಿಗರೇಟ್​ ಸೇದುತ್ತಿರುವಂತೆ ಚಿತ್ರಿಸುವ ವಿವಾದಾತ್ಮಕ ಪೋಸ್ಟರ್​ನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದು ವ್ಯಾಪಕ ವಿರೋಧವನ್ನು ಎದುರಿಸುತ್ತಿದ್ದಾರೆ. ಇವರ ಹೊಸ ಚಿತ್ರ ‘ಕಾಲಿ’ ಸಿನಿಮಾದ ಪೋಸ್ಟರ್ ಇದಾಗಿದೆ. ಇದನ್ನು ಪರ್ಫಾಮೆನ್ಸ್​ ಡಾಕ್ಯೂಮೆಂಟರಿ ಎಂದು ಕರೆಯಲಾಗುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರು #ArrestLeenaManimekalai ಎಂಬ ಟ್ರೆಂಡ್​ ಆರಂಭಿಸಿದ್ದಾರೆ.


ಜುಲೈ 2ರಂದು ಸಿನಿಮಾ ನಿರ್ಮಾಪಕಿ ಲೀನಾ ಮಣಿಮೇಕಲೈ ಈ ರೀತಿಯ ಪೋಸ್ಟರ್​ನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಅಗಾ ಖಾನ್​ ಮ್ಯೂಸಿಯಂನಲ್ಲಿ ಇಂದು ನನ್ನ ಇತ್ತೀಚಿನ ಚಲನಚಿತ್ರದ ಬಿಡುಗಡೆಯನ್ನು ಶೇರ್​ ಮಾಡಲು ನಾನು ಭಾರೀ ಉತ್ಸುಕಳಾಗಿದ್ದೇನೆ. ಈ ಸಿನಿಮಾದ ಆರು ನಿಮಿಷಗಳ ಆಯ್ದ ಭಾಗವಾದ ಕಾಳಿಯನ್ನು ಇಂದು ತೋರಿಸಲಾಗುವುದು ಎಂದು ಬರೆದುಕೊಂಡಿದ್ದಾರೆ. ಅಗಾ ಖಾನ್ ಮ್ಯೂಸಿಯಂನ ರಿದಮ್ಸ್ ಆಫ್​ ಕೆನಡಾದ ಭಾಗವಾಗಿ ಕೆನಡಾ ಸಂಸ್ಕೃತಿಯ ವೈವಿಧ್ಯಮಯ ವಸ್ತ್ರವನ್ನು ಆಚರಿಸುವ ಒಂದು ವಾರದ ಅವಧಿಯ ಉತ್ಸವ. ಉತ್ಸವದ ಸಮಯದಲ್ಲಿ ಈವೆಂಟ್​ ಮತ್ತು ಮ್ಯೂಸಿಯಂನ ಶಾಶ್ವತ ಸಂಗ್ರಹಣೆ ಗ್ಯಾಲರಿಗೆ ಪ್ರವೇಶ ಉಚಿತವಾಗಿದೆ.


ಲೀನಾ ಮಣಿಮೇಕಲೈನ ಪೋಸ್ಟರ್​​ ನೆಟ್ಟಿಗರಿಗೆ ಸುತಾರಾಂ ಇಷ್ಟವಾಗಿಲ್ಲ. ಅನೇಕರು ಈ ಪೋಸ್ಟರ್​ನಿಂದ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರಿದ್ದಾರೆ. ಈ ಪೋಸ್ಟರ್​ನ್ನು ಈ ಕೂಡಲೇ ತೆಗೆಯಬೇಕು ಎಂದು ಒತ್ತಾಯಿಸಿದ್ದಾರೆ. ಈ ಪೋಸ್ಟರ್​ನಲ್ಲಿ ಮಾ ಕಾಳಿ ಸಿಗರೇಟ್​ ಸೇದುತ್ತಿರುವಂತೆ ತೋರಿಸಲಾಗಿದ್ದು ಇದನ್ನು ನೋಡಿ ಸೋಶಿಯಲ್​​ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗ್ತಿದೆ. ಕಾಳಿ ಮಾತೆಯಂತೆ ವೇಷಭೂಷಣ ಧರಿಸಿರುವ ಕಲಾವಿದೆ ಒಂದು ಕೈಯಲ್ಲಿ ತ್ರಿಶೂಲ ಹಾಗೂ ಮತ್ತೊಂದು ಕೈಯಲ್ಲಿ LGBTQ ಸಮುದಾಯದ ಹೆಮ್ಮೆಯ ಧ್ವಜವನ್ನು ಹಿಡಿದಿದ್ದಾರೆ.


ಕಾಳಿ ಸಾಕ್ಷ್ಯಚಿತ್ರದ ಪೋಸ್ಟರ್​ ಕಂಡು ಆಕ್ರೋಶ ವ್ಯಕ್ತಪಡಿಸಿರುವ ನೆಟ್ಟಿಗರು , ಪ್ರತಿದಿನವೂ ಸಮಾಜದಲ್ಲಿ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ಬರುವಂತಹ ಘಟನೆಗಳು ಜರುಗುತ್ತಿವೆ. ಇವರು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ ಎಂದು ಸಿಟ್ಟು ಹೊರ ಹಾಕಿದ್ದಾರೆ. ಮಾತ್ರವಲ್ಲದೇ ಈ ಫೋಟೋಗಳಿಗೆ ಅಮಿತ್​ ಶಾ ಹಾಗೂ ಪ್ರಧಾನಿ ಕಚೇರಿಯನ್ನು ಟ್ಯಾಗ್​ ಮಾಡುವ ಮೂಲಕ ಈ ಫೋಸ್ಟರ್​ ಹಾಗೂ ಸಿನಿಮಾದ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನು ಓದಿ : Eknath Shinde : ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾದ ಏಕನಾಥ್​ ಶಿಂಧೆ ನೇತೃತ್ವದ ‘ಮಹಾ’ ಸರ್ಕಾರ

ಇದನ್ನೂ ಓದಿ : Actor Swara Bhasker : ನಟಿ ಸ್ವರಾ ಭಾಸ್ಕರ್​ಗೆ ಜೀವ ಬೆದರಿಕೆ ಪತ್ರ : ಪೊಲೀಸರಿಂದ ತನಿಖೆ

Leena Manimekalai’s Kaali poster draws ire for ‘hurting religious sentiments’, netizens demand arrest

Comments are closed.