Sidhu Moosewala : ಸಿಧು ಮೂಸೆವಾಲಾ ಹತ್ಯೆ ಪ್ರಕರಣ : ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ ಅಂಕಿತ್​ ತೂರ್​ ಬಂಧನ

ದೆಹಲಿ : Sidhu Moosewala : ಪಂಜಾಬ್​ನ ಕಾಂಗ್ರೆಸ್​ ನಾಯಕ ಹಾಗೂ ಪ್ರಸಿದ್ಧ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ದೆಹಲಿ ಪೊಲೀಸ್​ ವಿಶೇಷ ದಳವು 19 ವರ್ಷದ ಯುವಕನನ್ನು ಭಾನುವಾರ ರಾತ್ರಿ ಬಂಧಿಸಿದೆ. ಈತ ಶೂಟರ್​ಗಳಲ್ಲಿ ಒಬ್ಬನಾಗಿದ್ದು ಆತನ ಸಹಚರರ ಸಮೇತ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಬಂಧಿತ ಆರೋಪಿಗಳನ್ನು ಅಂಕಿತ್​ ತೂರ್​ ಹಾಗೂ ಸಚಿನ್​ ಚೌಧರಿ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಸ್​ ಹತ್ತಲು ಆಗಮಿಸಿದ್ದ ಆರೋಪಿಗಳನ್ನು ನಾವು ಕಾಶ್ಮೀರಿ ಗೇಟ್​ನಲ್ಲಿ ಬಂಧಿಸಿದ್ದೇವೆ. ಆರೋಪಿಗಳಿಂದ ಎರಡು ಪಿಸ್ತೂಲ್​ಗಳು, 19 ಲೈವ್​ ಕಾಟ್ರಿಡ್ಜ್​ಗಳು , ಪಂಜಾಬ್​ ಪೊಲೀಸರ ಮೂರು ಸಮವಸ್ತ್ರಗಳು ಹಾಗೂ ಎರಡು ಮೊಬೈಲ್​​ಗಳು ಜೊತೆ ಡಾಂಗಲ್​​ ಮತ್ತು ಸಿಮ್​ಗಳನ್ನು ವಶಪಡಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.


ಮೇ 29ರಂದು ಪಂಜಾಬ್​ನ ಮಾನ್ಸಾದಲ್ಲಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ ಸಿಧು ಮೂಸೆವಾಲಾ ಮೇಲೆ ಗುಂಡಿನ ದಾಳಿಯನ್ನು ದುಷ್ಕರ್ಮಿಗಳು ನಡೆಸಿದ್ದರು. ಈ ಗುಂಡಿನ ದಾಳಿಯಲ್ಲಿ ಸಿಧು ಮೂಸೆವಾಲಾ ಸ್ಥಳದಲ್ಲೇ ಸಾವನ್ನಪ್ಪಿದ್ದರು. ದರೋಡೆಕೋರರಾದ ಗೋಲ್ಡಿ ಬ್ರಾರ್​ ಹಾಗೂ ಲಾರೆನ್ಸ್​ ಬಿಷ್ಣೋಯಿ ಈ ಕೊಲೆಯ ಹೊಣೆಯನ್ನು ಹೊತ್ತಿದ್ದರು. ಪೊಲೀಸ್​ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಅಕಾಲಿದಳದ ನಾಯಕ ವಿಕ್ಕಿ ಮಿದ್ದುಖೇರಾ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಬ್ರಾರ್​ ಹಾಗೂ ಬಿಷ್ಣೋಯ್​ ಈ ಹತ್ಯೆಯನ್ನು ನಡೆಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.


ಭಾನುವಾರ ಬಂಧನಕ್ಕೊಳಗಾಗಿರುವ ಅಂಕಿತ್​ ತೂರ್​ ಮೂಸೆವಾಲಾ ಹತ್ಯೆಯಲ್ಲಿ ಭಾಗಿಯಾಗಿರುವ ಶೂಟರ್​ಗಳಲ್ಲಿ ಒಬ್ಬನಾಗಿದ್ದಾನೆ. ಈತ ಈ ಹಿಂದೆ ರಾಜಸ್ಥಾನದಲ್ಲಿ ನಡೆದ 2 ಕೊಲೆ ಯತ್ನ ಪ್ರಕರಣಗಳಲ್ಲಿ ಪೊಲೀಸರು ಹುಡುಕುತ್ತಿದ್ದ ಆರೋಪಿ ಕೂಡ ಆಗಿದ್ದಾನೆ.

ಇದನ್ನು ಓದಿ : Leena Manimekalai : ಸಿಗರೇಟ್​ ಸೇದಿದಂತೆ ಕಾಳಿ ಮಾತೆಯನ್ನು ಚಿತ್ರಿಸಿದ ನಿಮಾರ್ಪಕಿ : ನೆಟ್ಟಿಗರಿಂದ ವ್ಯಾಪಕ ಆಕ್ರೋಶ

ಇದನ್ನೂ ಓದಿ : ದೆಹಲಿಯ ಗುರುದ್ವಾರದಲ್ಲಿ ಮಲಗುತ್ತಿದ್ದ ಹುಡುಗ.. ಈಗ ಕ್ರಿಕೆಟ್ ಜಗತ್ತಿನ ಟಾಕ್ ಆಫ್ ದಿ ಟೌನ್ !

19-year-old shooter among two arrested from Delhi’s ISBT for Sidhu Moosewala murder

Comments are closed.