Karnataka Rajyotsava : ಕರ್ನಾಟಕ ರಾಜ್ಯೋತ್ಸವದ ಹಿನ್ನಲೆ, ಬಾವುಟ ; ಸಂಪೂರ್ಣ ಮಾಹಿತಿ

Karnataka Rajyotsava : ಅಲ್ಲಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡಿಗರು ಮತ್ತು ನಮ್ಮ ಹೆಮ್ಮೆಯ ಭಾಷೆ ಕನ್ನಡವನ್ನ ಒಂದು ಗೂಡಿಸಿದ ದಿನ ನವೆಂಬರ್‌ 1(Karnataka Rajyotsava). ಪ್ರತಿದಿನ , ಪ್ರತಿನಿಮಿಷ , ಪ್ರತಿ ಕ್ಷಣ ಕೂಡ ಕನ್ನಡದಲ್ಲೇ ಉಸಿರಾಡುವ ಕನ್ನಡಿಗರಿಗೆ ಇದು ಸಂಭ್ರಮದ ಹಬ್ಬ(Karnataka Rajyotsava) . ಇಂದು ನಾವು ಕನ್ನಡಿಗರಲ್ಲರೂ ಸೇರಿ 67 ನೇ ಕನ್ನಡ ರಾಜ್ಯೋತ್ಸವದ ಆಚರಣೆಯ ಸಂಭ್ರಮದಲ್ಲಿದ್ದೇವೆ .

ನಮ್ಮ ನಾಡು , ನಮ್ಮ ನುಡಿ , ಇಲ್ಲಿನ ಭಾಷೆ , ಸಂಸ್ಕ್ರತಿ , ಆಚಾರ -ವಿಚಾರ , ಪರಂಪರೆ , ಸಂಪತ್ತು ಇವೆಲ್ಲವುಗಳಿಂದ ಶ್ರೀಮಂತವಾದ ನಾಡು(Karnataka Rajyotsava) ನಮ್ಮದು . ರಾಷ್ಟ್ರಕವಿ ಕುವೆಂಪು ಅವರ “ಎಲ್ಲಾದರು ಇರು ಎಂತಾದರು ಇರು ,ಎಂದೆಂದಿಗೂ ನೀ ಕನ್ನಡವಾಗಿರು , ಕನ್ನಡವೇ ಸತ್ಯ ಕನ್ನಡವೇ ನಿತ್ಯ” ಎಂಬ ಸುಂದರ ಸಾಲುಗಳನ್ನು ಪ್ರತಿಯೊಬ್ಬ ಕನ್ನಡಿಗನು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತಿದ್ದರು ಕೂಡ ಮರೆಯಲು ಸಾಧ್ಯವಿಲ್ಲ . ಅಂತಹ ಶ್ರೀಮಂತ ಭಾಷೆ ಹಾಗೂ ಶ್ರೀಮಂತ ನಾಡು ನಮ್ಮದು. ನಮ್ಮ ಹೆಮ್ಮೆಯ ನಾಡಿಗೆ ಕರ್ನಾಟಕ ಎಂಬ ಹೆಸರು ಬಂದಿದ್ದು ಹೇಗೆ ? ಕನ್ನಡ ಬಾವುಟ ಬಂದಿದ್ದು ಹೇಗೆ ? ತಿಳಿಯೋಣ .

ಇದನ್ನೂ ಓದಿ : Kannada Rajyotsava 2022: ಕರುನಾಡಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ 8 ರಾಷ್ಟ್ರ ಕವಿಗಳು ಇವರು

ಭಾರತ ಸ್ವಾತಂತ್ರವಾದ ಹಲವು ವರ್ಷಗಳ ನಂತರ , ಮದ್ರಾಸ್‌ , ಮುಂಬೈ, ಹೈದರಾಬಾದ್‌ ಪ್ರದೇಶದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು . ಆ ದಿನವನ್ನೇ ನಾವಿಂದು ಕರ್ನಾಟಕ ರಾಜ್ಯೋತ್ಸವ ಎಂದು ಆಚರಿಸುತ್ತಿದ್ದೇವೆ .

ಇದನ್ನೂ ಓದಿ : Namma Metro QR Code : ಪ್ರಯಾಣಿಕರಿಗೆ ರಾಜ್ಯೋತ್ಸವ ಕೊಡುಗೆ: ಕ್ಯೂ ಆರ್ ಕೋಡ್ ಜಾರಿಗೆ ತಂದ ನಮ್ಮ ಮೆಟ್ರೋ

ಭಾಷೆಗಳ ಆಧಾರದ ಮೇಲೆ ರಾಜ್ಯವನ್ನು ವಿಂಗಡಿಸಿದ ನಂತರ ಉತ್ತರ ಕರ್ನಾಟಕದ ಜನತೆಗೆ ಮೈಸೂರು ಎಂಬ ಹೆಸರನ್ನು ಉಳಿಸಿಕೊಳ್ಳಲು ಆಸಕ್ತಿ ಇರಲಿಲ್ಲ ಹೀಗಾಗಿ ೧೯೭೩ ರ ನವೆಂಬರ್‌ ೧ ರಂದು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು . ಕರು ಎಂದರೆ ಕಪ್ಪು , ಕಪ್ಪು ಮಣ್ಣಿನ ನಾಡು ಎಂಬ ಕಾರಣಕ್ಕೆ ಮೈಸೂರು ಪ್ರಾಂತ್ಯವನ್ನು ಕರುನಾಡು ಎಂದು ಕರೆಯಲಾಯಿತು . ಕರುನಾಡು ಎನ್ನುವುದು ಮುಂದೆ ಕರ್ನಾಟಕವಾಯಿತು ಎಂದು ಹೇಳಲಾಗುತ್ತದೆ . ನಮ್ಮ ಹೆಮ್ಮೆಯ ಕನ್ನಡ ನಾಡು ಭಾರತದಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ 6 ನೇ ರಾಜ್ಯವಾಗಿದೆ .

ಇದನ್ನೂ ಓದಿ : Kannada Rajyotsava 2022: ಚೆಲುವ ಕನ್ನಡ ನಾಡನ್ನು ಬಣ್ಣಸಿದ್ದ ಹುಯಿಲಗೋಳ ನಾರಾಯಣರಾವ್ ಅವರ ಬದುಕೇ ಒಂದು ರೋಚಕ..!

ಕರ್ನಾಟಕಕ್ಕೆ ,ಹಾಗೂ ಕನ್ನಡಕ್ಕೆ ಸೌಹಾರ್ದತೆ ಮತ್ತು ಕ್ರಾಂತಿಯ ಸಂಕೇತವಾಗಿ ಹಳದಿ ಮತ್ತು ಕೆಂಪು ಬಣ್ಣದ ಬಾವುಟವಿದೆ . ಕನ್ನಡದ ಹೋರಾಟಗಾರರಲ್ಲಿ ಒಬ್ಬರಾದ ರಾಮಮೂರ್ತಿಯವರು ಕನ್ನಡದ ಬಾವುಟವನ್ನು ಸಿದ್ದಪಡಿಸಿದರು . ಮೊದಲು ಬಾವುಟದ ಕೆಂಪು ಮತ್ತು ಹಳದಿ ಬಣ್ಣದ ನಡುವೆ ಏಳು ತೆನಯುಳ್ಳ ಭತ್ತದ ತೆನೆಯನ್ನು ನೀಡಲಾಗಿತ್ತು . ಮುದ್ರಣಕ್ಕೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಭತ್ತದ ತೆನೆಯ ಚಿತ್ರವನ್ನು ತೆಗೆಯಲಾಯಿತು . ನಾವು ಕನ್ನಡಿಗರು ಶಾಂತಿಗೂ ಸಿದ್ಧ , ಕ್ರಾಂತಿಗೂ ಸಿದ್ಧ ಎಂಬುದನ್ನು ನಮ್ಮ ಕನ್ನಡದ ಬಾವುಟ ಸೂಚಿಸುತ್ತದೆ.

Karnataka Rajyotsava: November 1 (Karnataka Rajyotsava) is the day when the scattered Kannadigas and our proud language Kannada united. This is a festival of celebration (Karnataka Rajyotsava) for Kannadigas who breathe in Kannada every day, every minute, every moment. Today we all Kannadigas are celebrating the 67th Kannada Rajyotsava.

Comments are closed.