NHB Recruitment 2022 : ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಸಹಾಯಕ ವ್ಯವಸ್ಥಾಪಕರು, ಅಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ

ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB)ನಲ್ಲಿ(NHB Recruitment 2022) ಖಾಲಿರುವ ಅಸಿಸ್ಟೆಂಟ್ ಮ್ಯಾನೇಜರ್ ಹಾಗೂ ಆಫೀಸರ್ಸ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನವೆಂಬರ್‌ 18,2022 ರ ಮೊದಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB)ನಲ್ಲಿ ಖಾಲಿರುವ ಹುದ್ದೆಗಳ ಸಂಪೂರ್ಣ ವಿವರ :
ಬ್ಯಾಂಕ್ ಹೆಸರು: ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB)
ಹುದ್ದೆಗಳ ಸಂಖ್ಯೆ: 27
ಉದ್ಯೋಗ ಸ್ಥಳ: ಅಖಿಲ ಭಾರತ
ಹುದ್ದೆಯ ಹೆಸರು: ಸಹಾಯಕ ವ್ಯವಸ್ಥಾಪಕರು, ಅಧಿಕಾರಿಗಳು
ಸಂಬಳ: NHB ನಿಯಮಗಳ ಪ್ರಕಾರ

ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB)ನಲ್ಲಿ ಖಾಲಿರುವ ಹುದ್ದೆ ಹೆಸರು ಹಾಗೂ ಹುದ್ದೆಗಳ ಸಂಖ್ಯೆ ವಿವರ :

ಮುಖ್ಯ ಅರ್ಥಶಾಸ್ತ್ರಜ್ಞ : 1 ಹುದ್ದೆ
ಪ್ರೋಟೋಕಾಲ್ ಅಧಿಕಾರಿ : 2 ಹುದ್ದೆಗಳು
ಡೈ. ಜನರಲ್ ಮ್ಯಾನೇಜರ್ : 1 ಹುದ್ದೆ
ಸಹಾಯಕ ವ್ಯವಸ್ಥಾಪಕ : 16 ಹುದ್ದೆಗಳು
ಮೇಲ್ವಿಚಾರಣೆಗಾಗಿ ಅಧಿಕಾರಿಗಳು : 6 ಹುದ್ದೆಗಳು
ಪ್ರಾದೇಶಿಕ ವ್ಯವಸ್ಥಾಪಕರು : 1 ಹುದ್ದೆ

ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB)ನಲ್ಲಿ ಖಾಲಿರುವ ಹುದ್ದೆಗಳಿಗೆ ಅನುಸಾರವಾಗಿ ಬೇಕಾಗಿರುವ ವಿದ್ಯಾರ್ಹತೆ ವಿವರ :
ಮುಖ್ಯ ಅರ್ಥಶಾಸ್ತ್ರಜ್ಞ : ಸ್ನಾತಕೋತ್ತರ ಪದವಿ
ಪ್ರೋಟೋಕಾಲ್ ಅಧಿಕಾರಿ : ಪದವಿ
ಡೈ. ಜನರಲ್ ಮ್ಯಾನೇಜರ್ : ಸಿಎ
ಸಹಾಯಕ ವ್ಯವಸ್ಥಾಪಕ : ಪದವಿ
ಮೇಲ್ವಿಚಾರಣಾ ಅಧಿಕಾರಿಗಳು : ಪದವಿ
ಪ್ರಾದೇಶಿಕ ವ್ಯವಸ್ಥಾಪಕ : ಪದವಿ
ಮೇಲೆ ತಿಳಿಸಿರುವ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಉತ್ತೀರ್ಣರಾಗಿರಬೇಕು.

ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB)ನಲ್ಲಿ ಖಾಲಿರುವ ಹುದ್ದೆಗಳಿಗೆ ಅನುಸಾರವಾಗಿ ಬೇಕಾಗಿರುವ ವಯೋಮಿತಿ ವಿವರ :

ಮುಖ್ಯ ಅರ್ಥಶಾಸ್ತ್ರಜ್ಞ : 62 ವರ್ಷ
ಪ್ರೋಟೋಕಾಲ್ ಅಧಿಕಾರಿ : 60 ವರ್ಷದಿಂದ 62 ವರ್ಷ
ಡೈ. ಜನರಲ್ ಮ್ಯಾನೇಜರ್ : 40 ವರ್ಷ ದಿಂದ 55 ವರ್ಷ
ಸಹಾಯಕ ವ್ಯವಸ್ಥಾಪಕ : 21 ವರ್ಷದಿಂದ 30 ವರ್ಷ
ಮೇಲ್ವಿಚಾರಣೆಗಾಗಿ ಅಧಿಕಾರಿಗಳು : 57 ವರ್ಷದಿಂದ 63 ವರ್ಷ
ಪ್ರಾದೇಶಿಕ ವ್ಯವಸ್ಥಾಪಕರು : 30 ವರ್ಷದಿಂದ 45 ವರ್ಷ

ವಯೋಮಿತಿ ಸಡಿಲಿಕೆ ವಿವರ :
OBC (NCL) ಅಭ್ಯರ್ಥಿಗಳು : 03 ವರ್ಷಗಳು
SC/ST ಅಭ್ಯರ್ಥಿಗಳು : 05 ವರ್ಷಗಳು
PwBD (ಸಾಮಾನ್ಯ) ಅಭ್ಯರ್ಥಿಗಳು : 10 ವರ್ಷಗಳು
PwBD (OBC) ಅಭ್ಯರ್ಥಿಗಳು : 13 ವರ್ಷಗಳು
PwBD (SC/ST) ಅಭ್ಯರ್ಥಿಗಳು : 15 ವರ್ಷಗಳು

ಅರ್ಜಿ ಶುಲ್ಕ:
SC/ST/PwBD ಅಭ್ಯರ್ಥಿಗಳು : ರೂ.175/-
ಎಲ್ಲಾ ಇತರ ಅಭ್ಯರ್ಥಿಗಳು : ರೂ.850/-
ಪಾವತಿ ವಿಧಾನ : ಆನ್‌ಲೈನ್

ಆಯ್ಕೆ ವಿಧಾನ :
ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB)ನಲ್ಲಿ ಖಾಲಿರುವ ಹುದ್ದೆಗಳ ನೇಮಕಾತಿಯಲ್ಲಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB)ನಲ್ಲಿ ಖಾಲಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ :
ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB)ನಲ್ಲಿ ಖಾಲಿರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಇಮೇಲ್‌ ಐಡಿ, ಮೊಬೈಲ್‌ ಸಂಖ್ಯೆ, ಗುರುತಿನ ಚೀಟಿ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್‌ ಹಾಗೂ ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆ) NHB ಅಧಿಕೃತ ವೆಬ್‌ಸೈಟ್ ಆದ nhb.org.in ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

ಇದನ್ನೂ ಓದಿ : UAS Dharwad Recruitment 2022 : ಧಾರವಾಡ ಕೃಷಿ ವಿವಿಯಲ್ಲಿ ಉದ್ಯೋಗಾವಕಾಶ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ : SSC Constable Recruitment 2022 ; SSC ಕಾನ್ಸ್ಟೇಬಲ್ ಹುದ್ದೆಗೆ ನೇಮಕಾತಿ ಆರಂಭ

ಪ್ರಮುಖ ದಿನಾಂಕಗಳು :
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 29-10-2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 18-11-2022
ಸ್ಕೇಲ್-I ಗಾಗಿ ಆನ್‌ಲೈನ್ ಪರೀಕ್ಷೆಗಾಗಿ ಇ-ಕಾಲ್ ಲೆಟರ್‌ನ ಡೌನ್‌ಲೋಡ್ ಮಾಡುವ ದಿನಾಂಕ : ಪರೀಕ್ಷೆಗೆ 10 ದಿನಗಳ ಮೊದಲು
ಸ್ಕೇಲ್-I ಗಾಗಿ ಆನ್‌ಲೈನ್ ಪರೀಕ್ಷೆಯ ದಿನಾಂಕ : ಡಿಸೆಂಬರ್-2022/ಜನವರಿ-2023
ಸ್ಕೇಲ್-I ಗಾಗಿ ಆನ್‌ಲೈನ್ ಪರೀಕ್ಷೆಯ ಫಲಿತಾಂಶದ ದಿನಾಂಕ : ಜನವರಿ/ಫೆಬ್ರವರಿ-2023
ಸ್ಕೇಲ್-I ಗಾಗಿ ಸಂದರ್ಶನಕ್ಕಾಗಿ ಇ-ಕಾಲ್ ಪತ್ರದ ಡೌನ್‌ಲೋಡ್ ಮಾಡುವ ದಿನಾಂಕ : ಫೆಬ್ರವರಿ/ಮಾರ್ಚ್-2023
ಸ್ಕೇಲ್-I ಗಾಗಿ ಸಂದರ್ಶನದ ದಿನಾಂಕ : ಮಾರ್ಚ್/ಏಪ್ರಿಲ್-2023
ಸ್ಕೇಲ್-I ಗಾಗಿ ಅಂತಿಮ ಫಲಿತಾಂಶದ ಘೋಷಣೆಯ ದಿನಾಂಕ : ಏಪ್ರಿಲ್/ಮೇ-2023
ಇತರ ಹುದ್ದೆಗಳಿಗೆ ಸಂದರ್ಶನದ ದಿನಾಂಕ : ಜನವರಿ/ಫೆಬ್ರವರಿ-2023
ಇತರ ಹುದ್ದೆಗಳಿಗೆ ಅಂತಿಮ ಫಲಿತಾಂಶದ ಘೋಷಣೆಯ ದಿನಾಂಕ : ಫೆಬ್ರವರಿ/ಮಾರ್ಚ್-2023

NHB Recruitment 2022 National Housing Bank invites applications for the post of Assistant Manager, Officers

Comments are closed.