ಕರ್ನಾಟಕದಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ : 47,563 ಮಂದಿಗೆ ಸೋಂಕು, 482 ಮಂದಿ ಬಲಿ

ಬೆಂಗಳೂರು  : ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಿಗುತ್ತಿಲ್ಲ. 24 ಗಂಟೆಯ ಅವಧಿಯಲ್ಲಿ ಬರೋಬ್ಬರಿ 47,563 ಕೋವಿಡ್ 19 ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, 482 ಮಂದಿಯನ್ನು ಬಲಿ ಪಡೆದಿದೆ.

ರಾಜ್ಯದಲ್ಲಿ ಒಟ್ಟು 5,36,64 ಸಕ್ರಿಯ ಪ್ರಕರಣಗಳಿದ್ದು, ಬೆಂಗಳೂರಿ ನಲ್ಲಿ ಇಂದು 21,534 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 285 ಮಂದಿಯನ್ನು ಕೊರೊನಾ ಸೋಂಕು ಬಲಿ ಪಡೆದಿದೆ.

ಬೆಂಗಳೂರು ನಗರ 21534 ಬೀದರ್ 311, ಚಾಮರಾಜನಗರ 691, ಚಿಕ್ಕಬಳ್ಳಾಪುರ 711, ಚಿಕ್ಕಮಗಳೂರು 356, ಚಿತ್ರದುರ್ಗ 116, ದಕ್ಷಿಣ ಕನ್ನಡ 1,513 ದಾವಣಗೆರೆ 538, ಧಾರವಾಡ 323, ಗದಗ 341, ಹಾಸನ 996 ಹಾವೇರಿ 169, ಕಲಬುರಗಿ 1,661 ಕೊಡಗು 765, ಕೋಲಾರ 903, ಕೊಪ್ಪಳ600, ಮಂಡ್ಯ 1,225, ಮೈಸೂರು 2,294, ರಾಯಚೂರು 894, ರಾಮನಗರ 407, ಶಿವಮೊಗ್ಗ 547, ತುಮಕೂರು 2,419 ಉಡುಪಿ 1,043 , ಉತ್ತರ ಕನ್ನಡ 1,034 , ವಿಜಯಪುರ525 ಮತ್ತು ಯಾದಗಿರಿಯಲ್ಲಿ 718, ಬಾಗಲಕೋಟೆ 1563, ಬಳ್ಳಾರಿ 940, ಬೆಳಗಾವಿ 991, ಬೆಂಗಳೂರು ಗ್ರಾಮಾಂತರ ದಲ್ಲಿ 958 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದೆ..

Comments are closed.