Scuba Diving : ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್‌ : ಕಡಲಾಳದ ಯಾನ ಹೇಗಿರುತ್ತೆ ಗೊತ್ತಾ ?

ಭಟ್ಕಳ : ಉತ್ತರ ಕನ್ನಡ ಜಿಲ್ಲೆ ಪ್ರವಾಸಿಗರ ಪಾಲಿಗೆ ಹಾಟ್‌ ಸ್ಪಾಟ್.‌ ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ಹೊಡೆತ ಬಿದ್ದಿತ್ತು. ಆದ್ರೀಗ ಮುರುಡೇಶ್ವರ ಸಮೀಪದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್‌ ನಡೆಸಲು ಜಿಲ್ಲಾಡಳಿತ ಅನುಮತಿಯನ್ನು ನೀಡಿದೆ. ಈ ಹಿನ್ನೆಲೆಯಲ್ಲೀಗ ಪ್ರವಾಸಿಗರ ದಂಡು ಮುರುಡೇಶ್ವರದತ್ತ ಮುಖ ಮಾಡಲಿದೆ.

ಕಳೆದ ಹಲವು ವರ್ಷಗಳಿಂದಲೂ ನೇತ್ರಾಣಿ ದ್ವೀಪದಲ್ಲಿ ಜಲಸಾಹಸ ಕ್ರೀಡೆಗೆ ಸರಕಾರ ಅವಕಾಶ ಕಲ್ಪಿಸಿತ್ತು. ಸೆಲೆಬ್ರಿಟಿಗಳು, ಅಧಿಕಾರಿಗಳು, ವಿದ್ಯಾರ್ಥಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ಕೂಬಾ ಡೈವಿಂಗ್‌ ಮಾಡುತ್ತಿದ್ರು. ಆದ್ರೆ ಕೊರೊನಾ ಕಾರಣದ ಹಿನ್ನೆಲೆಯಲ್ಲಿ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್‌ ಸಂಪೂರ್ಣವಾಗಿ ಬಂದ್‌ ಆಗಿತ್ತು.

ವಿದೇಶಗಳಲ್ಲಿ ಸ್ಕೂಬಾ ಡೈವಿಂಗ್‌ಗೆ ಹೆಚ್ಚಿನ ಪ್ರಾತಿನಿದ್ಯ ನೀಡಲಾಗುತ್ತಿದೆ. ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸಮುದ್ರಾಳಕ್ಕೆ ಇಳಿದು ಅಲ್ಲಿನ ನಿಸರ್ಗದ ಸೌಂದರ್ಯವನ್ನು ಕಣ್ಣಾರೆ ಸವಿಯುತ್ತಿದ್ದಾರೆ. ರಾಜ್ಯದಲ್ಲಿಯೂ ಪ್ರವಾಸೋದ್ಯಮದ ಅಭಿವೃದ್ದಿಯ ದೃಷ್ಠಿಯಿಂದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್‌ ಆರಂಭಿಸಲಾಗಿತ್ತು.

ಈ ಹಿಂದೆ ನೇತ್ರಾಣಿ ಅಡ್ವೇಂಚರಸ್‌ ಸಂಸ್ಥೆ ಜನರಿಗೆ ಸ್ಕೂಬಾ ಡೈವಿಂಗ್‌ ಅನುಭವವನ್ನು ಉಣಬಡಿಸುತ್ತಿದೆ. ದೇಶದಲ್ಲಿ ಅಂಡಮಾನ್‌ ನಿಕೋಬಾರ್‌ ದ್ವೀಪವನ್ನು ಹೊರತು ಪಡಿಸಿದ್ರೆ ಸ್ಕೂಬಾ ಡೈವಿಂಗ್‌ಗೆ ಎರಡನೇ ಅತ್ಯಂತ ಸುರಕ್ಷಿತ ತಾಣವೇ ನೇತ್ರಾಣಿ ದ್ವೀಪ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದಲ್ಲಿರುವ ಮುರುಡೇಶ್ವರ ಪ್ರಮುಖ ಪ್ರವಾಸಿ ತಾಣ. ಮುರುಡೇಶ್ವರದಿಂದ ಸುಮಾರು 10 ನಾಟಿಕಲ್‌ ಮೈಲಿ ದೂರದಲ್ಲಿರುವ ನೇತ್ರಾಣಿ ದ್ವೀಪ ನಿಸರ್ಗದ ನೈಜ ಸೊಬಗನ್ನೇ ತನ್ನ ಉದರದಲ್ಲಿ ಹೊದ್ದುಕೊಂಡು ಮಲಗಿದೆ. ಭಾರತೀಯ ನೌಕಾದಳ ಆಗಾಗ ಸಮರಾಭ್ಯಾಸವನ್ನೂ ಕೂಡ ಇದೇ ಸ್ಥಳದಲ್ಲಿಯೇ ನಡೆಸುತ್ತಿದೆ.

ಹೀಗಾಗಿ ಪ್ರವಾಸಿಗರು ನೇತ್ರಾಣಿ ದ್ವೀಪ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದ್ರೆ ನೇತ್ರಾಣಿ ದ್ವೀಪದಲ್ಲಿ ವರ್ಷಂಪ್ರತಿ ಸಪ್ಟೆಂಬರ್‌ ತಿಂಗಳಿನಿಂದ ಮೇ ಅಂತ್ಯದ ವರೆಗೂ ನೇತ್ರಾಣಿ ಅಡ್ವೇಂಚರಸ್‌ ಸಂಸ್ಥೆ ಸ್ಕೂಬಾ ಡೈವಿಂಗ್‌ ನಡೆಸುತ್ತಿದೆ. netraniadventures ಸಂಸ್ಥೆ ಕಳೆದೊಂದು ದಶಕಗಳೊಂದಲೂ ಜನರಿಗೆ ಜಲಸಾಹಸ ಕ್ರೀಡೆಯ ಮಜಾವನ್ನು ಉಣಬಡಿಸುತ್ತಿದೆ.

ಸ್ಕೂಬಾ ಡೈವಿಂಗ್‌ ಮೂಲಕ ಸಮುದ್ರಾಳದಲ್ಲಿರುವ ನಿಸರ್ಗ, ಖನಿಜ ಸಂಪತ್ತು, ಜಲಚರ ಜೀವಿಗಳನ್ನು ಕಣ್ಣಾರೆ ನೋಡಬಹುದಾಗಿದೆ. ಆಕ್ಸಿಜನ್‌ ಸಿಲಿಂಡರ್‌ ಸಹಾಯದಿಂದ ನುರಿತ ತರಬೇತುದಾರರ ಸಹಕಾರದೊಂದಿಗೆ ಸ್ಕೂಬಾ ಡೈವಿಂಗ್‌ ಮಾಡಬಹುದಾಗಿದೆ. ನೀರಿನಲ್ಲಿ ಮೀನಿನಂತೆ ಈಜುತ್ತಾ ಡೈವಿಂಗ್‌ ಮಾಡುವ ಅನುಭವ ವರ್ಣಿಸೋದಕ್ಕೆ ಸಾಧ್ಯವಿಲ್ಲ.

ಸ್ಕೂಬಾ ಡೈವಿಂಗ್‌ ಮಾಡೋದಕ್ಕೆ ನಿಮಗೆ ಈಜು ಗೊತ್ತಿರಲೇ ಬೇಕು ಅಂತೇನು ಇಲ್ಲ. ಪ್ರತಿಯೊಬ್ಬರಿಗೂ ಡೈವಿಂಗ್‌ ಅನುಭವ ನೀಡುವ ಸಲುವಾಗಿಯೇ ನೇತ್ರಾಣಿ ಅಡ್ವೇಂಚರಸ್‌ ನುರಿತ ತರಬೇತುದಾರ ಸಹಾಯವನ್ನೂ ನೀಡುತ್ತಿದೆ.

ಇದೀಗ ಉತ್ತರ ಕನ್ನಡ ಜಿಲ್ಲಾಡಳಿತ ಒಂದು ತಿಂಗಳ ಮಟ್ಟಿಗೆ ಸ್ಕೂಬಾ ಡೈವಿಂಗ್‌ ನಡೆಸಲು ಅನುಮತಿಯನ್ನು ನೀಡಿದೆ. ಆದರೆ ಈ ಅವಧಿ ಇನ್ನಷ್ಟು ಸಮಯದ ವರೆಗೆ ವಿಸ್ತರಣೆ ಯಾಗುವ ಸಾಧ್ಯತೆಯೂ ಇದೆ. ಕೊರೊನಾ ಇಳಿಕೆಯಾದ ಹೊತ್ತಲ್ಲೇ ಸ್ಕೂಬಾ ಡೈವಿಂಗ್‌ಗೆ ಅನುಮತಿ ನೀಡಿರುವುದು ಪ್ರವಾಸಿಗರಿಗೂ ಸಖತ್‌ ಖುಷಿಯನ್ನು ಕೊಟ್ಟಿದೆ. ಅಷ್ಟಕ್ಕೂ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್‌ ಹೇಗೆ ನಡೆಯುತ್ತೆ ಅನ್ನೋ ಕುತೂಹಲವಿದ್ದರೆ ಈ ವಿಡಿಯೋ ನೋಡಿ.

ಇದನ್ನೂ ಓದಿ : ಬೀಚ್‌ ಅಂದ್ರೆ ಸಾಮಾನ್ಯವಾಗಿ ಮರಳು, ಆದರೆ ಎಂದಾದ್ರೂ ಹಸಿರು ಬೀಚ್‌ ನೋಡಿದ್ರಾ !

ಇದನ್ನೂ ಓದಿ : ಪ್ರಪಂಚದಲ್ಲಿವೆ ನಿಗೂಢ ವಿಸ್ಮಯಕಾರಿ ತಾಣಗಳು !

(Scuba Diving at Netrani Island near Murudeshwara :You know what the depth of the ocean looks like )

Comments are closed.