ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ : ಐವರು ಯೋಧರು ಹುತಾತ್ಮ

ನವದೆಹಲಿ : ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮಿತಿ ಮೀರಿದೆ. ದಿನದಿಂದ ದಿನಕ್ಕೆ ಉಗ್ರರ ದಾಳಿ, ಸಾವಿನ ಪ್ರಕರಣಗಳು ಹೆಚ್ಚುತಿರುವುದು ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಇಂದು ಜಮ್ಮು-ಕಾಶ್ಮೀರದ ರಜೌರಿ ಸೆಕ್ಟರ್ ನ ಪೀರ್ ಪಂಜಾಲ್ ವಲಯದ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ಕಾರ್ಯಾಚರಣೆ ವೇಳೆ ಉಗ್ರರು ನಡೆಸಿದ ಪ್ರತಿದಾಳಿಯಲ್ಲಿ ನಾಲ್ವರು ಸೈನಿಕರು ಹಾಗೂ ಸೇನಾ ಅಧಿಕಾರಿ ಸೇರಿದಂತೆ ಐವರು ಹುತಾತ್ಮರಾಗಿರುವ ಕುರಿತು ರಾಷ್ಟ್ರೀಯ ಸುದ್ದಿ ವಾಹಿನಿಗಳು ವರದಿ ಬಿತ್ತರಿಸಿವೆ.

ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ವೇಳೆ ನಡೆದ ಪ್ರತಿದಾಳಿಯಲ್ಲಿ ಸೈನಿಕರು ಹುತಾತ್ಮರಾದ ಘಟನೆ ಬಗ್ಗೆ ಈವರೆಗೂ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವರದಿ ಹೇಳಿದೆ. ಇದಕ್ಕೂ ಮುನ್ನ ಅನಂತ್ ನಾಗ್ ಮತ್ತು ಬಂಡಿಪೋರಾ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದರು.

ಇದನ್ನೂ ಓದಿ: ಗಡಿ ವಿಚಾರದಲ್ಲಿ ಚೀನಾ ಕ್ಯಾತೆ : ಭಾರತದ ಸಲಹೆಯನ್ನು ಒಪ್ಪದ ಕೆಂಪುರಾಷ್ಟ್ರ

ಸಾವನ್ನಪ್ಪಿರುವ ಉಗ್ರರನ್ನು ಲಷ್ಕರ್ ಎ ತೊಯ್ಬಾದ ಜತೆ ನಂಟು ಹೊಂದಿದ್ದ ಇಮ್ತಿಯಾಜ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದ್ದು, ಈತ ಕಣಿವೆ ಪ್ರದೇಶದಲ್ಲಿ ನಾಗರಿಕರನ್ನು ಹತ್ಯೆಗೈದ ಘಟನೆಯಲ್ಲಿ ಶಾಮೀಲಾಗಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

ಅನಂತ್ ನಾಗ್ ಜಿಲ್ಲೆಯ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದ ಪರಿಣಾಮ ಯೋಧರು ಪ್ರತಿದಾಳಿ ನಡೆಸಿದಾಗ ಉಗ್ರ ಸಾವನ್ನಪ್ಪಿದ್ದ. ಆತನ ಬಳಿ ಇದ್ದ ಪಿಸ್ತೂಲ್, ಗ್ರೆನೇಡ್ ವಶಕ್ಕೆ ತೆಗೆದುಕೊಂಡಿರುವುದಾಗಿ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಶ್ಮೀರದ ಕುಲ್ಗಾಮ್ ದಲ್ಲಿ ಉಗ್ರರ ದಾಳಿ : ಇಬ್ಬರು ಪೋಲಿಸರಿಗೆ ಗಾಯ

(Five jawans martyred in J-K militant rampage)

Comments are closed.