ಬೆಂಗಳೂರು : ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಬೆನ್ನಲ್ಲೇ ನಗರ ಉದ್ವಿಘ್ನವಾಗಿದೆ. ಕಲ್ಲು ತೂರಾಟ ಶಾಂತಿ ಕದಡುವ ಪ್ರಯತ್ನ ನಡೆದಿದೆ. ಅಲ್ಲದೇ 24 ಗಂಟೆಯೊಳಗಾಗಿ ಆರೋಪಿಗಳನ್ನು ಬಂಧಿಸಬೇಕೆಂಬ ಒತ್ತಡವೂ ವ್ಯಕ್ತವಾಗಿದೆ. ಈ ಮಧ್ಯೆ ಶಿವಮೊಗ್ಗದಲ್ಲೇ ಮೊಕ್ಕಾಂ ಹೂಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮಗಳ ಜೊತೆ ಮಾತನಾಡಿದ್ದು, ಪ್ರಕರಣದ ಆರೋಪಿಗಳ (Harsha murder accused) ಮೂಲವೂ ಪತ್ತೆಯಾಗಿದೆ. ಕೊಲೆಯ ಕಾರಣವೂ ಗೊತ್ತಾಗಿದೆ. ಈ ಬಗ್ಗೆ ಸದ್ಯದಲ್ಲೇ ಸೂಕ್ತ ಮಾಹಿತಿ ಕೊಡ್ತೇವೆ. ಜನರು ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದ್ದಾರೆ.
ಈ ಪ್ರಕರಣಕ್ಕೂ ಹಿಜಾಬ್ ಗೂ ಯಾವುದೇ ನಂಟಿಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಪ್ರಕರಣದಲ್ಲಿ ಒಂದು ಸ್ಪಷ್ಟವಾದ ಸಂದೇಶವನ್ನು ರಾಜ್ಯಕ್ಕೆ ನಾವು ಕೊಡ್ತೇವೆ. ಪ್ರಕರಣದ ಕ್ಲೂ ಸಿಕ್ಕಿದೆ. ನಾಲ್ಕೈದು ಯುವಕರು ಈ ಪ್ರಕರಣದಲ್ಲಿ ಭಾಗಿಯಾಗಿರೋ ಮಾಹಿತಿ ಇದೆ. ಸದ್ಯದಲ್ಲೇ ಈ ಪ್ರಕರಣದ ಆರೋಪಿಗಳ ಬಂಧನವಾಗಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ. ಮೃತ ಹರ್ಷ ಹಿಂದೂ ಪರ ಕಾರ್ಯಕರ್ತನಾಗಿದ್ದ. ಆತನನ್ನು ನಿನ್ನೆ 9 ಗಂಟೆಯ ವೇಳೆಗೆ ಕೊಲೆ ಮಾಡಲಾಗಿದೆ. ಮೃತನ ಮೇಲೂ ಒಂದೆರಡು ಪ್ರಕರಣಗಳಿವೆ. ಸರ್ಕಾರದ ವತಿಯಿಂದ ಆತನ ಕುಟುಂಬಕ್ಕೆ ಅಗತ್ಯ ಸಹಾಯ ಒದಗಿಸುವ ಬಗ್ಗೆ ಸಿಎಂ ಜೊತೆ ಮಾತುಕತೆ ನಡೆಸುತ್ತೇನೆ.
ಆದರೆ ನಾನು ಶಿವಮೊಗ್ಗ ಜನತೆಯಲ್ಲಿ ಮನವಿ ಮಾಡುತ್ತೇನೆ. ಇಂಥಹ ಘಟನೆಗಳು ನಡೆದಾಗ ಜನರು ಸಹಜವಾಗಿ ಭಾವುಕರಾಗುತ್ತಾರೆ. ಆಕ್ರೋಶ ಕಾಡುತ್ತದೆ. ಆದರೆ ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ .ಪೊಲೀಸರು ನಮ್ಮೊಂದಿಗೆ ಇದ್ದಾರೆ. ಎಲ್ಲರೂ ಶಾಂತಿ ಕಾಪಾಡುವ ಮೂಲಕ ಸಹಕರಿಸಬೇಕು ಎಂದಿದ್ದಾರೆ. ನಿನ್ನೆ ತಡರಾತ್ರಿ ಒಂದೆರಡು ಬೈಕ್ ಗಳಿಗೆ ಬೆಂಕಿ ಹಚ್ಚಿರುವ ಘಟನೆ ವರದಿಯಾಗಿದೆ. ಆದರೆ ಇದರ ಹಿಂದೆ ಯಾವ ಸಂಘಟನೆಯ ಕೈವಾಡವಿದೆ ಎಂಬುದು ಬಹಿರಂಗವಾಗಿಲ್ಲ. ಗಾಂಜಾ ವಿಚಾರಕ್ಕೆ ಕೊಲೆ ನಡೆದಿದೆ ಎಂಬ ಉಹಾಪೋಹವೂ ಇದೆ. ಎಲ್ಲದಕ್ಕೂ ತನಿಖೆ ಉತ್ತರ ನೀಡಲಿದೆ ಎಂಬ ವಿಶ್ವಾಸ ನನಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಆದರೆ ಕಾಂಗ್ರೆಸ್ ಮಾತ್ರ ಈ ಘಟನೆಗೆ ಗೃಹ ಸಚಿವರ ವೈಫಲ್ಯವೇ ಕಾರಣ ಎಂದು ಟೀಕಿಸಿದೆ. ಈ ಟೀಕೆಗಳಿಗೆ ಅರಗ ಜ್ಞಾನೇಂದ್ರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಟ್ಟಿನಲ್ಲಿ ಶಿವಮೊಗ್ಗ ಮತ್ತೊಮ್ಮೆ ಕೊಲೆಯಿಂದ ಉದ್ವಿಘ್ನವಾಗಿದ್ದು ಆರೋಪಿಗಳ ಬಂಧನಕ್ಕೆ ಹೆಚ್ಚಿನ ಒತ್ತಡ ವ್ಯಕ್ತವಾಗಿದೆ.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಹರ್ಷ ಮೃತದೇಹ ಮೆರವಣಿಗೆ ವೇಳೆ ಕಲ್ಲು ತೂರಾಟ, ವಾಹನಕ್ಕೆ ಬೆಂಕಿ
ಇದನ್ನೂ ಓದಿ : ಬಿಜೆಪಿ ಕಾಂಗ್ರೆಸ್ ನಡುವೆ ಫೈಟ್ : ಹರ್ಷ ಕೊಲೆಯಲ್ಲೂ ಶುರುವಾಯ್ತು ರಾಜಕೀಯ ಲೆಕ್ಕಾಚಾರ
ಇದನ್ನೂ ಓದಿ : ಭಜರಂಗದಳ ಕಾರ್ಯಕರ್ತ ಹರ್ಷ ಬರ್ಬರ ಹತ್ಯೆ: 144 ಸೆಕ್ಷನ್ ಜಾರಿ, ಶಿವಮೊಗ್ಗದಲ್ಲಿ ಶಾಲೆ, ಕಾಲೇಜಿಗೆ ರಜೆ ಘೋಷಣೆ
(Soon the arrest of Shivamogga Harsha murder accused says Home Minister Aaraga Jnanendra)