Shivamogga Harsha Murder : ಶಿವಮೊಗ್ಗದಲ್ಲಿ ಹರ್ಷ ಮೃತದೇಹ ಮೆರವಣಿಗೆ ವೇಳೆ ಕಲ್ಲು ತೂರಾಟ, ವಾಹನಕ್ಕೆ ಬೆಂಕಿ

ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆಯ (Shivamogga Harsha Murder) ಬೆನ್ನಲ್ಲೇ ಹರ್ಷ ಮೃತದೇಹವನ್ನು ಮೆಗ್ಗಾನ್‌ ಆಸ್ಪತ್ರೆಯಿಂದ ಮನೆಯವರೆಗೆ ಮೆರವಣಿಗೆಯಲ್ಲಿ ಕರೆ ತರಲಾಯಿತು. ಬೃಹತ್‌ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಶಿವಮೊಗ್ಗ ನಗರದಾದ್ಯಂತ ಮೆರವಣಿಗೆ ನಡೆಸಿದ್ದಾರೆ. ಈ ವೇಳೆಯಲ್ಲಿ ಕೆಲ ಯುವಕರು ಮನೆ, ಹೋಟೆಲ್‌, ಅಂಗಡಿಗಳ ಮೇಲೆ ಹಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ಶಿವಮೊಗ್ಗ ನಗರ ಸಂಪೂರ್ಣವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಡಳಿತ ಈಗಾಗಲೇ ಪರಿಸ್ಥಿತಿಯ ನಿಯಂತ್ರಣಕ್ಕಾಗಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿದೆ. ಆದರೂ ಹಿಂದೂ ಸಂಘಟನೆಯ ಕಾರ್ಯಕರ್ತರು ನಿಷೇಧಾಜ್ಞೆಯ ನಡುವಲ್ಲೇ ಮೃತದೇಹದ ಮೆರವಣಿಗೆ ನಡೆಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಬೃಹತ್‌ ಮೆರವಣಿಗೆಯನ್ನು ನಡೆಸಿದ್ದು, ಹರ್ಷ ಕೊಲೆಯ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆಯಲ್ಲಿ ಶಿವಮೊಗ್ಗ ನಗರದಾದ್ಯಂತ ಬಿಗಿ ಪೊಲೀಸ್‌ ಭದ್ರತೆಯನ್ನು ನಡೆಸಲಾಗಿತ್ತು. ಆದ್ರೂ ಕೂಡ ಮೆರವಣಿಗೆಯ ವೇಳೆಯಲ್ಲಿ ಕಲ್ಲು ತೂರಾಟವನ್ನು ನಡೆಸಿ, ವಾಹನಗಳಿಗೆ ಬೆಂಕಿಯನ್ನು ಹಚ್ಚಲಾಗಿದೆ. ಹರ್ಷ ಮೃತ ದೇಹವನ್ನು ಅಂಬುಲೆನ್ಸ್‌ ಮೂಲಕ ಸೀಗೆಹಟ್ಟಿಯಲ್ಲಿರುವ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಮೆರವಣಿಗೆಯ ವೇಳೆಯಲ್ಲಿ ಅಮರ್ ರಹೇ ಅಮರ್ ರಹೇ ಹರ್ಷ ಅಮರ್ ರಹೇ ಎಂಬ ಘೋಷಣೆಯನ್ನು ಕೂಗಿದ್ದಾರೆ. ನಗರದಲ್ಲಿ ನಡೆದಿರುವ ಘಟನೆಯಿಂದಾಗಿ ಶಿವಮೊಗ್ಗದಲ್ಲಿ ಆತಂಕದ ವಾತಾವರಣ ಉಂಟಾಗಿದೆ.

ಸದ್ಯ ಶಿವಮೊಗ್ಗ ನಗರದ ಹಲವು ಕಡೆಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅಂಗಡಿಗಳನ್ನು ಮುಚ್ಚಲಾಗಿದೆ. ಇನ್ನುಎಡಿಜಿಪಿ ಮುರುಗನ್‌ ಹಾಗೂ ಶಿವಮೊಗ್ಗ ಎಸ್‌ಪಿ ಲಕ್ಷ್ಮೀ ಪ್ರಸಾದ್‌ ಅವರು ನಗರದ ಹಲವು ಕಡೆಗಳಿಗೆ ಭೇಟಿಯನ್ನು ನೀಡಿ ಪರಿಸ್ಥಿತಿಯನ್ನು ವೀಕ್ಷಿಸುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಹರಸಾಹಸವನ್ನು ಪಡುತ್ತಿದ್ದಾರೆ.

ಹರ್ಷ ಕೊಲೆ ನಡೆಯುತ್ತಿದ್ದಂತೆಯೇ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕೊಲೆಗೆ ಮುಸ್ಲೀಂ ಗೂಂಡಾಗಳೇ ಕಾರಣ ಎಂದು ಆರೋಪಿಸಿದ್ದರು. ಅಲ್ಲದೇ ಸ್ಥಳೀಯ ಕಾರ್ಪೋರೇಟರ್‌ ಓರ್ವರು ಪೊಲೀಸ್‌ ಇಲಾಖೆಯ ವೈಫಲ್ಯದ ಕುರಿತು ಆರೋಪಿಸಿದ್ದರು. ನಿನ್ನೆ ರಾತ್ರಿ ಹೋಟೆಲ್‌ಗೆ ಎಗ್‌ ರೈಸ್‌ ತಿನ್ನಲು ತೆರಳಿದ್ದ ವೇಳೆಯಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಅವರನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿ ಎಸ್ಕೇಪ್‌ ಆಗಿದ್ದರು.

ಇದನ್ನೂ ಓದಿ : Harsha Murder : ಭಜರಂಗದಳ ಕಾರ್ಯಕರ್ತ ಹರ್ಷ ಬರ್ಬರ ಹತ್ಯೆ: 144 ಸೆಕ್ಷನ್ ಜಾರಿ, ಶಿವಮೊಗ್ಗದಲ್ಲಿ ಶಾಲೆ, ಕಾಲೇಜಿಗೆ ರಜೆ ಘೋಷಣೆ

ಇದನ್ನೂ ಓದಿ : ಬಿಜೆಪಿ ಕಾಂಗ್ರೆಸ್ ನಡುವೆ ಫೈಟ್ : ಹರ್ಷ ಕೊಲೆಯಲ್ಲೂ ಶುರುವಾಯ್ತು ರಾಜಕೀಯ ಲೆಕ್ಕಾಚಾರ

(Shivamogga Harsha Murder Case Activist Are Marching Hold the Saffron Flag and Roll the Stone)

Comments are closed.