ಸರಕಾರಿ ಕಚೇರಿಗಳಲ್ಲಿ ಪೋಟೋ ವಿಡಿಯೋ ನಿಷೇಧ : ಸಾರ್ವಜನಿಕರಿಂದ ಆಕ್ರೋಶ, ಆದೇಶ ಹಿಂಪಡೆದ ಸರಕಾರ

ಬೆಂಗಳೂರು : ರಾಜ್ಯದ ಸರಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಪೋಟೋ ಹಾಗೂ ವಿಡಿಯೋ ತೆಗೆಯುವುದನ್ನು ನಿಷೇಧಿಸಿ (ban photo video Shooting Government Office) ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ರಾತ್ರೋ ರಾತ್ರಿ ವಾಪಾಸ್‌ ಪಡೆದಿದೆ. ಈ ಮೂಲಕ ಸರಕಾರ ಭಾರೀ ಮುಖಭಂಗ ಅನುಭವಿಸಿದೆ.

ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಪೋಟೋ ತೆಗೆಯುವಂತಿಲ್ಲ ಎಂದು ಅಡಳಿತ ಸುಧಾರಣಾ ಇಲಾಖೆ ಜುಲೈ ೧೫ರಂದು ಆದೇಶ ಹೊರಡಿಸಿತ್ತು. ಸರಕಾರಿ ಕಚೇರಿಗಳಲ್ಲಿನ ವಿಡಿಯೋಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೇ ಸರಕಾರಿ ಕಚೇರಿಯ ವೇಳೆಯಲ್ಲಿ ಅನಧಿಕೃತವಾಗಿ ಪೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದ್ದು, ವಿಶೇಷವಾಗಿ ಮಹಿಳಾ ನೌಕರರಿಗೆ ಸಮಸ್ಯೆಯಾಗುತ್ತಿದೆ ಎಂಬ ಕಾರಣ ನೀಡಿ ಈ ಆದೇಶ ಜಾರಿಗೆ ತಂದಿತ್ತು.

ರಾಜ್ಯ ಸರಕಾರ ಆದೇಶ ಹೊರಡಿಸುತ್ತಿದ್ದಂತೆಯೇ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸರಕಾರ ಭ್ರಷ್ಟರಿಗೆ ಬೆಂಬಲ ನೀಡುತ್ತಿದೆ ಎಂಬ ಆರೋಪಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ರಾಜ್ಯ ಸರಕಾರ ರಾತ್ರೋ ರಾತ್ರಿ ಹೊರಡಿಸಿದ್ದ ಆದೇಶವನ್ನು ವಾಪಾಸ್‌ ಪಡೆದಿದೆ.

Karnataka State Government Has withdrawn the ban photo video Shooting Government Office

ಇದನ್ನೂ ಓದಿ : state government : ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಫೋಟೋ/ವಿಡಿಯೋ ಕ್ಲಿಕ್ಕಿಸುವಂತಿಲ್ಲ : ರಾಜ್ಯ ಸರ್ಕಾರದ ಮಹತ್ವದ ಆದೇಶ

ಇದನ್ನೂ ಓದಿ : Sushmita Sen : ಲಲಿತ್​ ಮೋದಿ ಜೊತೆಗಿನ ಸಂಬಂಧದ ವಿಚಾರವಾಗಿ ಕೊನೆಗೂ ಮೌನ ಮುರಿದ ಸುಶ್ಮಿತಾ ಸೇನ್​

Karnataka State Government Has withdrawn the ban photo video Shooting Government Office

Comments are closed.