ಬೆಂಗಳೂರು : ಕೊರೊನಾ ವೈರಸ್ ಸೋಂಕು ಕಡಿಮೆಯಾಗುತ್ತಿದೆ. ಈ ನಡುವಲ್ಲೇ ಡೆಲ್ಟಾ ಫ್ಲಸ್ ಭೀತಿ ಎದುರಾಗಿದೆ. ಈ ನಡುವಲ್ಲೇ ರಾಜ್ಯದಲ್ಲಿ 3ನೇ ಹಂತದ ಅನ್‍ಲಾಕ್‍ಗೆ ಕೌಂಟ್‍ಡೌನ್ ಶುರುವಾಗಿದೆ. ಸೋಮವಾರದಿಂದ ಯಾವ ಸೇವೆಗೆ ರಿಲೀಫ್ ನೀಡಬೇಕೆಂಬ ಕುರಿತು ಇಂದು ನಿರ್ಧಾರ ವಾಗಲಿದೆ.
ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ರೇಟ್ ಕಡಿಮೆ ಆಗುತ್ತಿದೆ. ಹೀಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನ್ ಲಾಕ್ ಆದೇಶ ಜಾರಿ ಮಾಡಲಾಗಿದೆ. ಇದೀಗ ಮೂರನೇ ಹಂತದ ಅನ್ ಲಾಕ್ ಜಾರಿಗೆ ರಾಜ್ಯ ಸರಕಾರ ಚಿಂತನೆ ನಡೆಸಿದೆ. ಸಿಎಂ ಯಡಿಯೂರಪ್ಪ ಅವರು ಇಂದು ಸಂಜೆ ಅಧಿಕಾರಿಗಳು ಹಾಗೂ ಸಚಿವರ ಜೊತೆ ಸಭೆ ನಡೆಸಲಿದ್ದು, ವಿನಾಯಿತಿ ಘೋಷಣೆ ಮಾಡಲಿದ್ದಾರೆ.
ಮಾಲ್, ಥಿಯೇಟರ್, ಧಾರ್ಮಿಕ ಕೇಂದ್ರ ಸೇರಿದಂತೆ ಹಲವು ಸೇವೆ ಗಳಿಗೆ ವಿನಾಯಿತಿ ನೀಡುವ ನಿರೀಕ್ಷೆಯನ್ನು ಹೊಂದಲಾಗಿದೆ. ಅಲ್ಲದೇ ನೈಟ್ ಕರ್ಪ್ಯೂ ಅವಧಿಯನ್ನು ರಾತ್ರಿ 9 ರಿಂದ ಬೆಳಗ್ಗೆ 5 ರ ವರೆಗೆ ಜಾರಿಯಾಗುವ ಸಾಧ್ಯತೆಯದೆ. ಇನ್ನು ವೀಕೆಂಡ್ ಕರ್ಪ್ಯೂ ಇನ್ನಷ್ಟು ದಿನ ಮುಂದುವರಿಕೆ ಆಗುವ ಸಾಧ್ಯತೆಯಿದೆ.
ಹೋಟೆಲ್ ಗಳಲ್ಲಿ ರಾತ್ರಿಯವರೆಗೆ ತೆರೆಯಲು ಅವಕಾಶ ಸಿಗುತ್ತಾ. ಮದುವೆ, ಅಂತ್ಯಕ್ರಿಯೆಗೆ ಜನರ ಪಾಲ್ಗೊಳ್ಳಲು ಅವಕಾಶ ಸಿಗುವ ಸಾಧ್ಯತೆಯಿದೆ. ಶಾಲೆ, ಕಾಲೇಜುಗಳ ಆರಂಭದ ಕುರಿತು ಇಂದಿನ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ. ಆದರೆ ರಾಜ್ಯದಲ್ಲಿ ಡೆಲ್ಟಾ ಫ್ಲಸ್ ಸೋಂಕಿನ ಆತಂಕ ಇದೆ.
ಮಹಾರಾಷ್ಟ್ರ, ಕೇರಳ ಕಂಟಕವಾಗುವಂತೆ ಕಾಣ್ತಿದೆ. ನಿತ್ಯ ಸಾವಿರಾರು ಮಂದಿ ರೈಲು, ಬಸ್, ವಿಮಾನದ ಮೂಲಕ ಓಡಾಡ್ತಿದ್ದಾರೆ. ಇತ್ತ ಕೋವಿಡ್ ಟೆಸ್ಟ್ ಕೂಡ ಸರಿಯಾಗಿ ಆಗ್ತಿಲ್ಲ. ಈವರೆಗೂ ಸರಿಸುಮಾರು 100 ದೇಶಗಳಲ್ಲಿ ಡೆಲ್ಟಾ ವೈರಸ್ ಹಬ್ಬಿದ್ದು, ಹಲವು ದೇಶಗಳು ಮತ್ತೆ ಲಾಕ್ ಆಗ್ತಿವೆ.