ಮತ್ತೊಮ್ಮೆ ಅಮೀರಖಾನ್ ದಾಂಪತ್ಯದಲ್ಲಿ ಬಿರುಕು…! ಡಿವೋರ್ಸ್ ಮೊರೆ ಹೋದ ದಂಪತಿ…!!

15 ವರ್ಷಗಳಿಗೊಮ್ಮೆ ಡಿವೋರ್ಸ್ ನೀಡೋದನ್ನು ಫ್ಯಾಶನ್ ಮಾಡಿಕೊಂಡಂತಿರೋ ನಟ ಅಮೀರ್ ಖಾನ್ ಎರಡನೇ ವಿವಾಹದ 15 ವರ್ಷಗಳ ಬಳಿಕ ಪತ್ನಿ ಹಾಗೂ ನಿರ್ದೇಶಕಿ ಕಿರಣ ರಾವ್ ಗೆ  ಡಿವೋರ್ಸ್ ನೀಡಿದ್ದಾರೆ.

ವಿವಾಹ ವಿಚ್ಛೇಧನವನ್ನು ಅಧಿಕೃತವಾಗಿ ಘೋಷಿಸಿರುವ ಅಮೀರ್ ಖಾನ್ ಹಾಗೂ ಕಿರಣರಾವ್ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.  ಈ ಹೇಳಿಕೆಯಲ್ಲಿ, ಈ 15 ವರ್ಷಗಳಲ್ಲಿ ನಾವು ಜೀವನಪರ್ಯಂತ ಅನುಭವಗಳು, ಸಂತೋಷ ಹಾಗೂ ನಗುವನ್ನು ಹಂಚಿಕೊಂಡಿದ್ದೇವೆ ಮತ್ತು ನಮ್ಮ ಸಂಬಂಧವು ನಂಬಿಕೆ,ಪ್ರೀತಿ,ಗೌರವದಲ್ಲಿ ಮಾತ್ರ ಬೆಳೆದಿದೆ.

ಈಗ ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲು ಬಯಸುತ್ತೇವೆ ಎಂದಿರುವ ಅಮೀರ್ ಖಾನ್ ಹಾಗೂ ಕಿರಣ ಇನ್ಮುಂದೆ ಪತಿ-ಪತ್ನಿಯಲ್ಲದೇ ಕೇವಲ ಸ್ನೇಹಿತರು ಹಾಗೂ ಪುತ್ರನ ಪೋಷಕರಾಗಿ ಉಳಿಯಲು ಬಯಸುತ್ತೇವೆ ಎಂದಿದ್ದಾರೆ.

ಈಗಾಗಲೇ ಪ್ರತ್ಯೇಕವಾಗಿ ವಾಸವಾಗಿದ್ದೇವೆ ಎಂಬ ಅಂಶವನ್ನು ಉಲ್ಲೇಖಿಸಿರುವ ಈ ದಂಪತಿ ತಮ್ಮ ಪುತ್ರ ಆಜಾದ್ ಖಾನ್ ಗಾಗಿ ಸಮರ್ಪಿತ ಪೋಷಕರಾಗಿ ಉಳಿಯುತ್ತೇವೆ ಎಂದಿದ್ದಾರೆ. ಅಲ್ಲದೇ ಪರಸ್ಪರ ಸ್ನೇಹ-ವಿಶ್ವಾಸದಿಂದಲೇ ಈ ಸಂಬಂಧವನ್ನು ಕೊನೆಗೊಳಿಸುತ್ತಿರುವುದಾಗಿ ಹೇಳಿದ್ದಾರೆ.

ಸಿನಿಮಾ ನಿರ್ಮಾಣ ಹಾಗೂ ಪಾನಿ ಪೌಂಡೇಶನ್ ಸೇರಿದಂತೆ ಇತರ ಕಾರ್ಯಗಳನ್ನು ಒಂದಾಗಿಯೇ ಮುಂದುವರೆಸಿಕೊಂಡು ಹೋಗುವುದಾಗಿ  ಅಮೀರ್ ಖಾನ್ ಹಾಗೂ ಕಿರಣ ರಾವ್ ಘೋಷಿಸಿದ್ದಾರೆ. ನಮ್ಮ  ಈ ನಿರ್ಧಾರವನ್ನು ಅರ್ಥೈಸಿಕೊಂಡ ಹಾಗೂ ಬೆಂಬಲಿಸಿದ ಸಂಬಂಧಿಗಳು, ಸ್ನೇಹಿತರಿಗೂ ಧನ್ಯವಾದ ಎಂದು ಅಮೀರ್ ಖಾನ್ ಕಿರಣ ಹೇಳಿದ್ದಾರೆ.

1986 ರಲ್ಲಿ ರೀನಾ ದತ್ತಾರನ್ನು ಮದುವೆಯಾಗಿದ್ದ ಅಮೀರ್ ಖಾನ್ ಇಬ್ಬರು ಮಕ್ಕಳ ತಂದೆಯಾಗಿದ್ದಾರೆ. 16 ವರ್ಷಗಳ ದಾಂಪತ್ಯ ಜೀವನದ ಬಳಿಕ 2002 ರಲ್ಲಿ ರೀನಾಗೆ ಡಿವೋರ್ಸ್ ನೀಡಿದ್ದ ಅಮೀರ್ ಖಾನ್ ಮೂರು ವರ್ಷಗಳ ಬಳಿಕ 2005 ರಲ್ಲಿ ಕಿರಣ ರಾವ್ ರನ್ನು ಮದುವೆಯಾಗಿದ್ದರು. ಈ ದಂಪತಿಗೆ ಒಬ್ಬ ಮಗನಿದ್ದಾನೆ.

Comments are closed.