Karnataka Weather Report : ಮತ್ತೆ ಶುರುವಾಯ್ತು ಮಳೆಯ ಅಬ್ಬರ ;ಕರ್ನಾಟಕದಲ್ಲಿ ಯೆಲ್ಲೋ ಅಲರ್ಟ್‌

ಬೆಂಗಳೂರು : ( Karnataka Weather Report ) ರಾಜ್ಯಾದ್ಯಂತ ಮತ್ತೆ ವರುಣನ ಆರ್ಭಟ ಶುರುವಾಗಿದೆ. ಇಂದಿನಿಂದ ಮತ್ತೆ ಕರಾವಳಿ , ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ(IMD) ಮುನ್ಸೂಚನೆ ನೀಡಿದೆ.ಈ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ರಾಜ್ಯಾದ್ಯಂತ ಮತ್ತೆ ವರುಣನ ಆರ್ಭಟ ಶುರುವಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಕೊಡಗು, ಮೈಸೂರು, ಹಾಸನ , ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರ, ದಾವಣಗೆರೆ , ಚಿತ್ರದುರ್ಗ ಸೇರಿದಂತೆ ಕರ್ನಾಟಕದ 8 ಜಿಲ್ಲೆಗಳಲ್ಲಿ ಇಂದು ಕೂಡ ಮಳೆ ( Karnataka Weather Report ) ಯು ಆರ್ಭಟಿಸಲಿದೆ. ಈ ಹಿನ್ನೆಲೆಯಲ್ಲಿ ಈ 8 ಜಿಲ್ಲೆಗಳಲ್ಲಿ ʼಯೆಲ್ಲೋ ಅಲರ್ಟ್‌ʼ ಘೋಷಣೆ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಇನ್ನೆರಡು ದಿನ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಮಾನ ಇಲಾಖೆ(IMD ) ವರದಿ ನೀಡಿದೆ.

ಉತ್ತರ ಕರ್ನಾಟಕದ ಕೆಲವು ತಾಲೂಕುಗಳಲ್ಲಿ ಮಳೆಯ ಅಬ್ಬರ ಕಡಿಮೆಯಾಗಲಿದ್ದು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಗಳಲ್ಲಿ ಇಂದು ಕೊಂಚ ಮಳೆಯಾಗಲಿದೆ. ಭಾರತೀಯ ಹವಮಾನ ಇಲಾಖೆಯ ಹವಮಾನ ವರದಿಯ ಪ್ರಕಾರ ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಗುಡುಗು , ಸಿಡಿಲಿನ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ.ಚಿತ್ರದುರ್ಗ, ಕೋಲಾರ, ರಾಯಚೂರು, ತುಮಕೂರು, ಗುಲ್ಬರ್ಗಾ, ಯಾದಗಿರಿ, ಬಳ್ಳಾರಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಇಂದಿನಿಂದ ವ್ಯಾಪಕ ಮಳೆಯಾಗಲಿದ್ದು, ಅಕ್ಟೋಬರ್‌ 10 ರಂದು ಅತಿಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ : Kanthara Movie : ಕಾಂತಾರ ಪ್ರೇಮಿಗಳಿಗೆ ಸಿಹಿಸುದ್ದಿ: ಬಿ ಟೌನ್ ಗೆ ಎಂಟ್ರಿಕೊಡ್ತಿದೆ ‘ಒಂದು ದಂತಕತೆ’

ಇದನ್ನೂ ಓದಿ : Pro Kabaddi League: ಮತ್ತೆ ಬಂತು ಪ್ರೊ ಕಬಡ್ಡಿ: ಇಲ್ಲಿದೆ ವೇಳಾಪಟ್ಟಿ, ನೇರಪ್ರಸಾರ, ಟಿಕೆಟ್ ಬುಕ್ಕಿಂಗ್‌ನ ಕಂಪ್ಲೀಟ್ ಡೀಟೇಲ್ಸ್

ಮುಂದಿನ ಮೂರು ದಿನಗಳ ಕಾಲ ಭಾರತದ ಕೆಲವು ರಾಜ್ಯಗಳಲ್ಲಿ ವರುಣ ಅಬ್ಬರಿಸಲಿದ್ದಾನೆ. ಮಧ್ಯಪ್ರದೇಶ್‌ , ಛತ್ತೀಸ್ ಗಡ , ಆಂಧ್ರಪ್ರದೇಶ ಹಾಗೂ ಕರಾವಳಿ ಭಾಗದಲ್ಲಿ ಅತೀ ಮಳೆಯಾಗುವ ಸಾಧ್ಯತೆಗಳಿವೆ. ಭಾರತದ ಕೆಲವು ರಾಜ್ಯಗಳಲ್ಲಿ ಮಿಂಚು ಸಹಿತ ಮಳೆಯಾಗಲಿದ್ದು, ತಗ್ಗು ಪ್ರದೇಶಗಳಲ್ಲಿ ಹಾಗೂ ಅತಿ ಹೆಚ್ಚು ಮಳೆಯಾಗುವ ಪ್ರದೇಶದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ : Friday Horoscope : ಹೇಗಿದೆ ಶುಕ್ರವಾರದ ದಿನಭವಿಷ್ಯ (07.10.2022)

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸುರಿದ ಮಳೆಗೆ ಅವಾಂತರಗಳು ಸೃಷ್ಠಿಯಾಗಿದ್ದು, ಭದ್ರಾವತಿ ನಗರದಲ್ಲಿ ಸುರಿದ ಭಾರೀ ಮಳೆಗೆ ತೆಂಗಿನಮರವೊಂದು ಧರೆಗುರುಳಿದ್ದು, ವಿದ್ಯುತ್‌ ಕಂಬ ಮುರಿದಿದೆ . ಈ ಕುರಿತು ಯಾವುದೇ ಹಾನಿ ಸಂಭವಿಸಿಲ್ಲ .

(Karnataka Weather Report) Rain has started again across the state. The Meteorological Department (IMD) has predicted that there is a possibility of heavy rain along with thunder and lightning in the coast, north and south interior from today. In this background, yellow alert has been announced.

Comments are closed.