Karnataka yellow alert : ದೀಪಾವಳಿ ಹೊತ್ತಲೇ ಆರ್ಭಟಿಸಲಿದೆ ಮಳೆ : ಕರ್ನಾಟಕದಲ್ಲಿ 2 ದಿನ ಯೆಲ್ಲೋ ಅಲರ್ಟ್

ಬೆಂಗಳೂರು : (Karnataka yellow alert ) ರಾಜ್ಯದಲ್ಲಿ ಮಳೆಯ ಅಬ್ಬರ ಸ್ವಲ್ಪ ದಿನಗಳ ಮಟ್ಟಿಗೆ ಕಡಿಮೆಯಾಗಿದ್ದರು ಕೂಡ ಇನ್ನೂ ಸಂಪೂರ್ಣವಾಗಿ ಮಳೆಯ ಪ್ರಭಾವ ನಿಂತಿಲ್ಲ. ದೀಪಾವಳಿಯ ಹೊತ್ತಲೇ ಮಳೆ ಆರ್ಭಟಿಸಲು ಮುಂದಾಗಿದೆ. ಮುಂದಿನ ಎರಡು ದಿನಗಳ ಕಾಲ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಸುರಿಯುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಯೆಲ್ಲೋ ಅಲರ್ಟ್(Karnataka yellow alert ) ಘೋಷಣೆ ಮಾಡಲಾಗಿದೆ.

ಇಂದಿನಿಂದ ಎರಡು ದಿನಗಳ ಕಾಲ ರಾಜ್ಯಾದ್ಯಂತ ಮಳೆ ಮುಂದುವರಿಯಲಿದ್ದು, ಬೆಂಗಳೂರು , ಬಳ್ಳಾರಿ , ಚಾಮರಾಜನಗರ, ಹಾಸನ , ಕೊಡಗು, ಚಿಕ್ಕಬಳ್ಳಾಪುರ , ಮಂಡ್ಯ, ಚಿತ್ರದುರ್ಗ, ತುಮಕೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಹಿನ್ನಲಯಲ್ಲಿ ಭಾರತೀಯ ಹವಮಾನ ಇಲಾಖೆ (IMD) “ಯೆಲ್ಲೋ ಅಲರ್ಟ್‌” ಘೋಷಣೆ ಮಾಡಿದೆ .

ಇದನ್ನೂ ಓದಿ :7th Pay Commission : ದೀಪಾವಳಿ ಭರ್ಜರಿ ಗಿಫ್ಟ್ : ಸರಕಾರಿ ನೌಕರರ ಡಿಎ ಹೆಚ್ಚಳ

ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಸಿತ್ರಾಂಗ ಚಂಡಮಾರುತ ಹೆಚ್ಚಾಗಿರುವುದರಿಂದ ರಾಜ್ಯದೆಲ್ಲೆಡೆ ಮಳೆಯ ಅಬ್ಬರವು ಕೂಡ ಹೆಚ್ಚಾಗಿದೆ. ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡುಗಳಲ್ಲಿ ಗುಡುಗು ಸಹಿತ ಚದುರಿದ ರೀತಿಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣದಿಂದ ತಗ್ಗು ಪ್ರದೇಶದಲ್ಲಿ ಹಾಗೂ ರಾಜ ಕಾಲುವೆಗಳಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆಯಿಂದ ಇರಲು ಹವಾಮಾನ ಇಲಾಖೆ ಸೂಚನೆಯನ್ನು ನೀಡಿದೆ. ರಾಜ್ಯದ ಉತ್ತರ ಒಳನಾಡಿನಲ್ಲಿ ಹೆಚ್ಚು ಮಳೆಯಾಗಲಿದ್ದು, ಚಾಮರಾಜನಗರ, ಹಾಸನ , ಕೊಡಗು, ಶಿವಮೊಗ್ಗ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಗಳಿವೆ. ಇನ್ನೂ ಎರಡು ದಿನಗಳ ಕಾಲ ರಾಜ್ಯದಲ್ಲಿ ವರುಣನ ಆರ್ಭಟ ಹೆಚ್ಚಾಗಲಿದ್ದು, ರಾಜ್ಯದ ಜನತೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ಇದನ್ನೂ ಓದಿ : India vs Pakistan t20 : ಭಾರತ vs ಪಾಕಿಸ್ತಾನ: ಪಂದ್ಯ ರದ್ದು? ಏನು ಹೇಳುತ್ತೆ ಹವಾಮಾನ ವರದಿ ?

ದೇಶದ ಹಲವು ರಾಜ್ಯಗಳಲ್ಲಿ ಕೂಡ ವರುಣ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ತಿಳಿಸಿದೆ . ತಮಿಳುನಾಡು , ರಳ, ಮಾಹೆ , ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಲ್ಲಿ ಅತೀ ಹೆಚ್ಚು ಮಳೆಯಾಗಲಿದ್ದು, ಲಕ್ಷ ದ್ವೀಪಗಳಲ್ಲಿ ಸಾಕಷ್ಟು ವ್ಯಾಪಕವಾದ ಮಳೆಯಾಗಲಿದೆ. ಅಸ್ಸಾಂ , ಮಣಿಪುರ , ಮೇಘಾಲಯ , ಪಶ್ಚಿಮ ಬಂಗಾಳ, ನಾಗಾಲ್ಯಾಂಡ್‌, ಗೋವಾ , ಮಹಾರಾಷ್ಟ್ರ,ಆಂದ್ರ ಪ್ರದೇಶ, ಮತ್ತು ರಾಯಲಸೀಮಾ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : UAS Dharwad Recruitment 2022 : ಧಾರವಾಡ ಕೃಷಿ ವಿವಿಯಲ್ಲಿ ಉದ್ಯೋಗಾವಕಾಶ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಹಾಗೂ ದೇಶಗಳಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಜನರು ನಲುಗಿ ಹೋಗಿದ್ದಾರೆ. ಸುರಿಯುತ್ತಿರುವ ಮಳೆಗೆ ಎಲ್ಲೆಡೆಯಲ್ಲಿ ಪ್ರವಾಹ ಎದುರಾಗಿದ್ದು, ಜನಜೀವನ ಅಸ್ತವ್ಯಸ್ತಗೋಡಿದೆ .ಅಲ್ಲದೆ ವರುಣನ ಆರ್ಭಟಕ್ಕೆ ಸಾವಿರಾರು ಜೀವಗಳು ತಮ್ಮ ಜೀವವನ್ನು ಕಳೆದುಕೊಂಡಿವೆ . ರಾಜ್ಯದ ಎಲ್ಲೆಡೆ ಅಕಾಲಿಕ ಮಳೆಯ ಅವಾಂತರದಿಂದ ಜನರು ಪ್ರಾಯಶಃ ನಲುಗಿ ಹೋಗಿದ್ದಾರೆ.

(Karnataka yellow alert) Although the intensity of rain in the state has reduced for a few days, the impact of rain has not stopped completely. It is about to start raining on Diwali. The Meteorological Department has forecast rain in most districts of Karnataka for the next two days. In this background, yellow alert (Karnataka yellow alert) has been announced for two days.

Comments are closed.