KFD Recruitment 2022 : ಅರಣ್ಯ ಇಲಾಖೆಯಲ್ಲಿ ಖಾಲಿಯಿದೆ RFO ಹುದ್ದೆ : ಇಂದೇ ಅರ್ಜಿ ಸಲ್ಲಿಸಿ

ಕರ್ನಾಟಕ ಅರಣ್ಯ ಇಲಾಖೆಯು(KFD Recruitment 2022) (KFD) ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಖಾಲಿ ಇರುವ ರೇಂಜ್ ಫಾರೆಸ್ಟ್ ಆಫೀಸರ್ (RFO) ಹುದ್ದೆಗಳಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನವೆಂಬರ್ 19, 2022 ರ ಮೊದಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಕರ್ನಾಟಕ ಅರಣ್ಯ ಇಲಾಖೆ (KFD)ಯಲ್ಲಿ ಖಾಲಿ ಇರುವ ಹುದ್ದೆಗಳ ಸಂಪೂರ್ಣ ವಿವರ :
ಸಂಸ್ಥೆಯ ಹೆಸರು : ಕರ್ನಾಟಕ ಅರಣ್ಯ ಇಲಾಖೆ (KFD)
ಹುದ್ದೆಗಳ ಸಂಖ್ಯೆ : 10
ಉದ್ಯೋಗ ಸ್ಥಳ : ಕರ್ನಾಟಕ
ಹುದ್ದೆಯ ಹೆಸರು : ರೇಂಜ್ ಫಾರೆಸ್ಟ್ ಆಫೀಸರ್ (RFO)
ವೇತನ : ರೂ.40900-78200/- ಪ್ರತಿ ತಿಂಗಳು

ಕರ್ನಾಟಕ ಅರಣ್ಯ ಇಲಾಖೆ (KFD)ಯಲ್ಲಿ ವಿದ್ಯಾರ್ಹತೆಗೆ ಅನುಗುಣವಾಗಿ ಖಾಲಿರುವ ಹುದ್ದೆಯ ವಿವರ :
B.Sc (ಅರಣ್ಯ) ಪದವಿ ಅಭ್ಯರ್ಥಿಗಳಿಗೆ : 5 ಹುದ್ದೆಗಳು
B.Sc (ವಿಜ್ಞಾನ) ಪದವಿ ಅಥವಾ B.E/B.Tech ಎಂಜಿನಿಯರಿಂಗ್ ಅಭ್ಯರ್ಥಿಗಳಿಗೆ : 5 ಹುದ್ದೆಗಳು
ಕರ್ನಾಟಕ ಅರಣ್ಯ ಇಲಾಖೆ (KFD) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿ, B.Sc, B.E ಅಥವಾ B.Tech ಪೂರ್ಣಗೊಳಿಸಿರಬೇಕು.

ವಯೋಮಿತಿ ವಿವರ :
ಕರ್ನಾಟಕ ಅರಣ್ಯ ಇಲಾಖೆಯ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಠ 28 ವರ್ಷ ವಯೋಮಿತಿಯನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ ವಿವರ :
SC/ST/ಪ್ರವರ್ಗ-I ಅಭ್ಯರ್ಥಿಗಳು : 05 ವರ್ಷಗಳು
ಪ್ರವರ್ಗ-2A/2B/3A & 3B ಅಭ್ಯರ್ಥಿಗಳು : 03 ವರ್ಷಗಳು

ಅರ್ಜಿ ಶುಲ್ಕ ವಿವರ :
SC/ST/ಪ್ರವರ್ಗ-I ಅಭ್ಯರ್ಥಿಗಳು : ರೂ.100/- + ರೂ.20/- ಸೇವಾ ಶುಲ್ಕ
ಸಾಮಾನ್ಯ, ಪ್ರವರ್ಗ-2A/2B/3A & 3B ಅಭ್ಯರ್ಥಿಗಳು : ರೂ.200/- + ರೂ.20/- ಸೇವಾ ಶುಲ್ಕ
ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ ವಿವರ :
ಕರ್ನಾಟಕ ಅರಣ್ಯ ಇಲಾಖೆಯ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ, ದೈಹಿಕ ಸಾಮರ್ಥ್ಯ, ದೈಹಿಕ ಸಹಿಷ್ಣುತೆ ಪರೀಕ್ಷೆ, ದೈಹಿಕ ದಕ್ಷತೆ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.

KFD ನೇಮಕಾತಿ 2022 ಗೆ ಅರ್ಜಿ ಸಲ್ಲಿಸುವ ವಿಧಾನ :
ಕರ್ನಾಟಕ ಅರಣ್ಯ ಇಲಾಖೆಯ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳು ಹುದ್ದೆಗಳಿಗಾಗಿ ಅಗತ್ಯ ದಾಖಲೆಗಳೊಂದಿಗೆ (ಇಮೇಲ್‌ ಐಡಿ, ಮೊಬೈಲ್‌ ಸಂಖ್ಯೆ, ಗುರುತಿನ ಚೀಟಿ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್‌ ಹಾಗೂ ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆ) ಅಧಿಕೃತ ವೆಬ್‌ಸೈಟ್‌ ಆದ aranya.gov.in ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 20-10-2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-11-2022
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 23-11-2022

ಇದನ್ನೂ ಓದಿ : UAS Dharwad Recruitment 2022 : ಧಾರವಾಡ ಕೃಷಿ ವಿವಿಯಲ್ಲಿ ಉದ್ಯೋಗಾವಕಾಶ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ : KMF Recruitment 2022 : ಕೆಎಂಎಫ್ 487 ಡೆಪ್ಯೂಟಿ ಡೈರೆಕ್ಟರ್, ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : Department of Water Resources Recruitment : ಜಲಸಂಪನ್ಮೂಲ ಇಲಾಖೆ ನೇಮಕಾತಿ 2022-2023 :155 ಬ್ಯಾಕ್‌ಲಾಗ್ ಎರಡನೇ ವಿಭಾಗದ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : BHEL Recruitment 2022 : BHEL ನೇಮಕಾತಿ 2022 : 30 ಪ್ರಾಜೆಕ್ಟ್ ಇಂಜಿನಿಯರ್, ಪ್ರಾಜೆಕ್ಟ್ ಸೂಪರ್‌ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

KFD ಅಧಿಸೂಚನೆ ಪ್ರಮುಖ ಲಿಂಕ್‌ಗಳ ವಿವರ :
ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: aranya.gov.in

KFD Recruitment 2022 RFO Vacancies in Forest Department : Apply Today

Comments are closed.