ಬೆಂಗಳೂರು: (KGF-2 song copyright) ಕಾಂಗ್ರೆಸ್ ಟ್ವಿಟರ್ ಹ್ಯಾಂಡಲ್ ನಿರ್ಬಂಧ ತೆರವುಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ. ಕೆಜಿಎಫ್-2 ಹಾಡು ತೆಗೆಯುವುದಾಗಿ ಕಾಂಗ್ರೆಸ್ ಮುಚ್ಚಳಿಕೆ ಪತ್ರ ಬರೆದುಕೊಟ್ಟ ಹಿನ್ನೆಲೆ ಹೈಕೋರ್ಟ್ ಕಾಂಗ್ರೆಸ್ ಟ್ವಿಟರ್ ಹ್ಯಾಂಡಲ್ ನಿರ್ಬಂಧ ತೆರವುಗೊಳಿಸಿ ಆದೇಶ ಹೊರಡಿಸಿದೆ.
ಕೆಜಿಎಫ್-2 ಹಾಡಿನ ದುರ್ಬಳಕೆ ಆರೋಪದ ಮೇಲೆ ಕಾಂಗ್ರೆಸ್ ನ ಐಎನ್‍ಸಿ ಹಾಗೂ ಭಾರತ್ ಜೋಡೋ ಯಾತ್ರಾ ಈ ಎರಡು ಟ್ವಿಟರ್ ಖಾತೆಗಳ ನಿರ್ಬಂಧನೆಗೆ ಬೆಂಗಳೂರಿನ ವಾಣಿಜ್ಯ ನ್ಯಾಯಾಲಯ ಸೋಮವಾರ(ನ.7) ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಇಂದು ಕಾಂಗ್ರೆಸ್ ಗೆ ಸಂಬಂಧಿತ 2 ಟ್ವಿಟರ್ ಹ್ಯಾಂಡಲ್ ನಿರ್ಬಂಧ ತೆರವುಗೊಳಿಸಿದ್ದು, ಕಾಂಗ್ರೆಸ್ ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಇದನ್ನೂ ಓದಿ: Healthy Weightloss Tips : ದೇಹದ ಕೊಬ್ಬನ್ನು ಕರಗಿಸಲು ಬಳಸಿ ಈ ಮ್ಯಾಜಿಕಲ್ ಡ್ರಿಂಕ್
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಗ್ವಿ, ವಾಣಿಜ್ಯ ನ್ಯಾಯಾಲಯ ಯಾವುದೇ ನೋಟಿಸ್ ನೀಡದೇ ಟ್ವಿಟರ್ ಖಾತೆಗಳನ್ನು ಸ್ಥಗಿತ ಮಾಡಿದೆ ಎಂದು ಮಂಡಿಸಿದರು. ನಕಲು ಮಾಡಲಾಗಿದೆ ಎಂದು ಹೇಳಲಾದ ಹಾಡನ್ನು ಕಾಂಗ್ರೆಸ್ ನ ಎಲ್ಲಾ ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕುತ್ತೇವೆ. ಈ ಕುರಿತು ಎಮ್ ಆರ್ ಟಿ ಮ್ಯೂಸಿಕ್ ಗೆ ದಾಖಲೆ ಒದಗಿಸುತ್ತೇವೆ ಎಂದು ಕಾಂಗ್ರೆಸ್ ಮುಚ್ಚಳಿಕೆ ಬರೆದುಕೊಟ್ಟ ಹಿನ್ನೆಲೆ ಕೋರ್ಟ್ ಸ್ಥಗಿತ ಆದೇಶವನ್ನು ಹಿಂಪಡೆದಿದೆ. ಅರ್ಜಿದಾರರು ಟ್ವಿಟರ್ ಹ್ಯಾಂಡಲ್ ನಿಂದ ಹಾಡನ್ನು ಅಳಿಸಿ ಹಾಕಿರುವ ಬಗ್ಗೆ ಸ್ಕ್ರೀನ್ ಶಾಟ್ ನೀಡಿದೆ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ: Nick Jonas: ದೇಸಿಗರ್ಲ್ ಪ್ರಿಯಾಂಕಾ ಪತಿ ನಿಕ್ ಜೋನಸ್ ಹಳೆ ಲವ್ ಸ್ಟೋರಿಗೆ ಮರುಜೀವ; ಬ್ರೇಕಪ್ ಬಗ್ಗೆ ಮೌನಮುರಿದ ಮಾಡೆಲ್
ಘಟನೆ ಏನು..?
ಇತ್ತೀಚೆಗೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಗಾಗಿ ಕರ್ನಾಟಕಕ್ಕೆ ಆಗಮಿಸಿದ್ದರು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಲ್ನಡಿಗೆಯಲ್ಲಿ ಸಾಗಿದ್ದರು. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಲಾಗಿತ್ತು. ಈ ವಿಡಿಯೋಗೆ ಕೆಜಿಎಫ್-2 ಸಿನಿಮಾದ ಹಿಂದಿ ಹಾಡು ಸುಲ್ತಾನ್ ಹಾಡನ್ನು ಬಳಕೆ ಮಾಡಲಾಗಿತ್ತು. ಈ ಹಿನ್ನೆಲೆ ಸುಲ್ತಾನ್ ಹಾಡಿನ ಹಿಂದಿ ಹಕ್ಕನ್ನು ಹೊಂದಿರುವ ಎಂಆರ್‍ಟಿ ಮ್ಯೂಸಿಕ್ ತಂಡ ಯಶವಂತಪುರ ಠಾಣೆಯಲ್ಲಿ ಫೋರ್ಜರಿ ಪ್ರಕರಣ ದಾಖಲಿಸಿದ್ದರು.
KGF-2 song copyright: Big relief for Congress who had reached the High Court; Twitter handle unblocked