Deadly virus: ಅಂದು ಕೊರೋನಾ.. ಈ ಬಾರಿ ಮತ್ತಷ್ಟು ಡೇಂಜರಸ್ ವೈರಸ್; ರಾವಲ್ಪಿಂಡಿಯಲ್ಲಿ ಕತ್ತಿ ಮಸೆಯುತ್ತಿವೆಯಂತೆ ಪಾಕ್, ಚೀನಾ ರಾಷ್ಟ್ರಗಳು

ಪಾಕಿಸ್ತಾನ: Deadly virus: ಕೊರೋನಾ ಒಂದು ಟೈಂನಲ್ಲಿ ಇಡೀ ಜಗತ್ತನ್ನು ಹೈರಾಣಾಗಿಸಿದ್ದ ಮಹಾಮಾರಿ. ಕೋವಿಡ್ ಅಲೆಗೆ ಸಿಕ್ಕಿ ಅದೆಷ್ಟೋ ಜೀವಗಳು ಬಲಿಯಾಗಿವೆ. ಇನ್ನೆಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಕೋವಿಡ್ ಮಹಾಮಾರಿಯ ಕರಿಛಾಯೆ ಇನ್ನೂ ಜಗತ್ತಿನಿಂದ ಸಂಪೂರ್ಣವಾಗಿ ಮರೆಯಾಗಿಲ್ಲ. ಈ ನಡುವೆ ಅಂಥದ್ದೇ ಮತ್ತೊಂದು ವರದಿಯು ಮತ್ತೊಮ್ಮೆ ಜನರ ನಿದ್ದೆಗಡಿಸುವಂತೆ ಮಾಡಿದೆ.

ಇದನ್ನೂ ಓದಿ: KGF-2 song copyright: ಹೈಕೋರ್ಟ್ ಮೆಟ್ಟಿಲೇರಿದ್ದ ಕಾಂಗ್ರೆಸ್ ಗೆ ಬಿಗ್ ರಿಲೀಫ್; ಟ್ವಿಟರ್ ಹ್ಯಾಂಡಲ್ ನಿರ್ಬಂಧ ತೆರವು

ದಿನಕ್ಕೊಂದರಂತೆ ಹೊಸ ಹೊಸ ರೂಪದಲ್ಲಿ ಎಂಟ್ರಿ ಕೊಡುತ್ತಿರುವ ಕೋವಿಡ್ ಸಂಪೂರ್ಣವಾಗಿ ನಶಿಸುವ ಲಕ್ಷಣಗಳೇ ಕಾಣುತ್ತಿಲ್ಲ. ಈ ನಡುವೆ ಮತ್ತೊಂದು ಶಾಕಿಂಗ್ ನ್ಯೂಸ್ ಒಂದನ್ನು ವರದಿ ನೀಡಿದೆ. ಕೋವಿಡ್ ಗಿಂತಲೂ ಅಪಾಯಕಾರಿ ವೈರಸ್ ಒಂದು ಜನರ ಜೀವನದ ಜೊತೆ ಚೆಲ್ಲಾಡಲು ಸಿದ್ಧವಾಗುತ್ತಿದೆಯಂತೆ. ಕೋವಿಡ್ ವೈರಸ್ ತಯಾರಿಸಿ ಕೋವಿಡ್ ಜನಕ ಅಂತ ಹಣೆಪಟ್ಟಿ ಕಟ್ಟಿಕೊಂಡಿದ್ದ ಚೀನಾವೇ ಈ ಬಾರಿ ಕೋವಿಡ್ ಗಿಂತಲೂ ಡೇಂಜರಸ್ ವೈರಸ್ ಒಂದನ್ನು ಹುಟ್ಟುಹಾಕುತ್ತಿದೆಯಂತೆ. ಕಳೆದ ಬಾರಿ ಒಬ್ಬಂಟಿಯಾಗಿ ಕುಕೃತ್ಯ ಮೆರೆದಿದ್ದ ಡ್ರ್ಯಾಗನ್ ರಾಷ್ಟ್ರ ಚೀನಾಗೆ ಈ ಬಾರಿ ಶತ್ರುರಾಷ್ಟ್ರ ಪಾಕಿಸ್ತಾನ ಸಾಥ್ ನೀಡುತ್ತಿದೆಯಂತೆ.

ಕಳೆದೆರಡು ಮೂರು ವರ್ಷಗಳಿಂದ ಕೋವಿಡ್ ಮಹಾಮಾರಿಯನ್ನು ಮಟ್ಟಹಾಕಲು ಎಲ್ಲಾ ರಾಷ್ಟ್ರಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ರೆ, ಅತ್ತ ಸದ್ದಿಲ್ಲದೆ ಚೀನಾ ಹಾಗೂ ಪಾಕ್ ದೇಶಗಳು ಪಿತೂರಿ ನಡೆಸುತ್ತಿವೆ ಎಂದು ತಿಳಿದುಬಂದಿದೆ. ಕೋವಿಡ್ ಗಿಂತಲೂ ಅಪಾಯಕಾರಿ ವೈರಸ್ ನ್ನು ಕಂಡು ಹಿಡಿಯುವುದರಲ್ಲಿ ಎರಡೂ ರಾಷ್ಟ್ರಗಳು ಒಟ್ಟಿಗೆ ಸೇರಿ ಕೆಲಸ ಮಾಡುತ್ತಿವೆಯಂತೆ.

ವರದಿಯೊಂದರ ಪ್ರಕಾರ ಪಾಕಿಸ್ತಾನದ ರಾವಲ್ಪಿಂಡಿಯ ಪ್ರಯೋಗಾಲಯ ಒಂದರಲ್ಲಿ ಚೀನಾ ಮತ್ತು ಪಾಕಿಸ್ತಾನ ಎರಡೂ ಸೇರಿ ಕೋವಿಡ್ ಗಿಂತಲೂ ಹೆಚ್ಚು ಹಾನಿಕಾರಕ ವೈರಸನ್ನು ಅಭಿವೃದ್ಧಿಪಡಿಸುತ್ತಿವೆಯಂತೆ. ಪಾಕ್ ಸೇನೆಯು ನಡೆಸುತ್ತಿರುವ ಕುಖ್ಯಾತ ವುಹಾನ್ ಇನ್‍ಸ್ಟಿಟ್ಯೂಟ್ ಹಾಗೂ ರಕ್ಷಣಾ ಮತ್ತು ವಿಜ್ಞಾನ ಸಂಸ್ಥೆ ವಿಶೇಷ ಯೋಜನೆಗೆಂದೇ ರಹಸ್ಯ ಪ್ರಯೋಗಾಲಯವನ್ನು ಸ್ಥಾಪಿಸಿದೆ ಎಂದು ಖಾಸಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಚೀನಾದ ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ಮತ್ತು ಪಾಕ್ ಸೇನೆ ನಡೆಸುತ್ತಿರುವ ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಪಾಕಿಸ್ತಾನದಲ್ಲಿ ಮಾರಣಾಂತಿಕ ರೋಗಕಾರಗಳ ಬಗ್ಗೆ ಸಂಶೋಧನೆ ನಡೆಸಲು ಹೆಚಚು ಸುಧಾರಿತ ವೈಜ್ಞಾನಿಕ ಮೂಲಸೌಕರ್ಯ ಸ್ಥಾಪಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಚೀನಾವು ಪಾಕ್‍ನಲ್ಲಿ ಕೋವಿಡ್ ನಂಥ ವೈರಸ್ ಸೃಷ್ಟಿಸುತ್ತಿದೆ ಎಂದು ಹಲವಾರು ಮಾಧ್ಯಮಗಳು ಹೇಳಿವೆ. ಅದು ದೊಡ್ಡ ಪ್ರಮಾಣದಲ್ಲಿ ಚಿಕಿತ್ಸೆ, ಲಸಿಕೆ ಲಭ್ಯವಿಲ್ಲದೇ ವಿನಾಶ ಉಂಟುಮಾಡುವ ಸಾಮಥ್ರ್ಯ ಹೊಂದಿದೆ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ.

ಇದನ್ನೂ ಓದಿ: Nick Jonas: ದೇಸಿಗರ್ಲ್ ಪ್ರಿಯಾಂಕಾ ಪತಿ ನಿಕ್ ಜೋನಸ್ ಹಳೆ ಲವ್ ಸ್ಟೋರಿಗೆ ಮರುಜೀವ; ಬ್ರೇಕಪ್ ಬಗ್ಗೆ ಮೌನಮುರಿದ ಮಾಡೆಲ್

ಭಾರತದಿಂದ ಕೇವಲ 250 ಕಿ.ಮೀ ದೂರದಲ್ಲಿ ಕುಕೃತ್ಯ..?

ಅಂದಹಾಗೆ, ಚೀನಾ- ಪಾಕಿಸ್ತಾನವು ಈ ಕದ್ದು ಮುಚ್ಚಿ ಜೈವಿಕ ಅಸ್ತ್ರ ತಯಾರು ಮಾಡುತ್ತಿರುವುದು ಭಾರತದಿಂದ ಕೇವಲ 250 ಕಿ.ಮೀ ದೂರದ ರಾವಲ್ಪಿಂಡಿಯಲ್ಲಿ ಅಂತೆ. ಭಾರತ ಜೈವಿಕ ಅಸ್ತ್ರಗಳ ಯುದ್ಧಕ್ಕೆ ಇನ್ನೂ ಪೂರ್ಣಪ್ರಮಾಣದಲ್ಲಿ ಸಿದ್ಧವಾಗಿಲ್ಲ. ಅಂಥದ್ರಲ್ಲಿ ಈ ಹೊಸ ಆಘಾತಕಾರಿ ಸುದ್ದಿಯು ಭಾರತಕ್ಕೆ ದೊಡ್ಡ ತಲೆನೋವು ತಂದಿಕ್ಕಿದೆ.

ವಿಶ್ವಯುದ್ಧ ಸಂದರ್ಭದಲ್ಲಿ ಜೈವಿಕ ಅಸ್ತ್ರಗಳ ಬಳಕೆ ನಿಷೇಧ ಮಾಡಲಾಗಿತ್ತು. ಆದರೂ ಚೀನಾ-ಪಾಕಿಸ್ತಾನ ದೇಶಗಳು ಕಳ್ಳಾಟ ಆಡುತ್ತಿವೆ. ಚೀನಾವಂತೂ ಒಂದು ಹೆಜ್ಜೆ ಮುಂದಿಟ್ಟು, ಸಮಸ್ಯೆಗೆ ತಾವೇ ತಲೆದಂಡ ಆಗದಂತೆ ಯೋಜನೆ ರೂಪಿಸಿ ತನ್ನ ದೇಶ ಬಿಟ್ಟು ಪಾಕಿಸ್ತಾನದಲ್ಲೇ ಜೈವಿಕ ಅಸ್ತ್ರ ಸಿದ್ಧಪಡಿಸುತ್ತಿದೆ ಎನ್ನಲಾಗುತ್ತಿದೆ.

Deadly virus: report says China and Pakistan working secretly on virus deadlier than Covid

Comments are closed.