Nick Jonas: ದೇಸಿಗರ್ಲ್ ಪ್ರಿಯಾಂಕಾ ಪತಿ ನಿಕ್ ಜೋನಸ್ ಹಳೆ ಲವ್ ಸ್ಟೋರಿಗೆ ಮರುಜೀವ; ಬ್ರೇಕಪ್ ಬಗ್ಗೆ ಮೌನಮುರಿದ ಮಾಡೆಲ್

ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕನ್ ಗಾಯಕ ನಿಕ್ ಜೋನಸ್ (Nick Jonas) ಮದುವೆಯಾಗಿ 4 ವರ್ಷಗಳೇ ಕಳೆದಿವೆ. ಈ ನಡುವೆ ಇತ್ತೀಚೆಗೆ ಅವರು ಮುದ್ದಾದ ಮಗುವನ್ನು ಕೂಡಾ ವೆಲ್ ಕಮ್ ಮಾಡಿಕೊಂಡಿದ್ದು, ಮಾಲ್ತಿ ಮೇರಿ ಎಂದು ಹೆಸರನ್ನಿಟ್ಟಿದ್ದಾರೆ. ಒಬ್ಬರನ್ನೊಬ್ಬರು ಇಷ್ಪಪಟ್ಟು ಮದುವೆಯಾಗಿದ್ದ ಈ ಜೋಡಿ ಮದುವೆ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಟ್ರೋಲ್ ಗೆ ಗುರಿಯಾಗಿದ್ದರು. ಯಾಕಂದ್ರೆ ಪ್ರಿಯಾಂಕಾ ಚೋಪ್ರಾ ನಿಕ್ ಜೋನಸ್ ಗಿಂತ 10 ವರ್ಷ ದೊಡ್ಡವರು. ಹೀಗಿದ್ದೂ ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡು ಹೋಗ್ತಿದ್ದಾರೆ. ಇವೆಲ್ಲಾ ಹಳೆಕತೆ. ಇದೀಗ ಇವರಿಬ್ಬರ ಮಧ್ಯೆ ನಿಕ್ ಜೋನಸ್ ಹಳೆ ಲವ್ ಸ್ಟೋರಿಗೆ ಮತ್ತೆ ಜೀವ ಬಂದಿದೆ.

ಇದನ್ನೂ ಓದಿ: Veteran Actor Lohitashwa Passed Away : ಹಿರಿಯ ನಟ ಲೋಹಿತಾಶ್ವ ವಿಧಿವಶ

ಪ್ರಿಯಾಂಕಾರ ಜೊತೆ ವಿವಾಹಕ್ಕೂ ಮುನ್ನ ನಿಕ್ ಜೋನಸ್ 2013-15ರ ಹೊತ್ತಿಗೆ 2012ರ ಮಿಸ್ ಯೂನಿವರ್ಸ್ ವಿನ್ನರ್ ಒಲಿವಿಯಾ ಕುಲ್ಫೋ ಜೊತೆಗೆ ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದರು. ಜೊತೆಗೆ ಓಡಾಡಿಕೊಂಡಿದ್ದ ಈ ಜೋಡಿ ಆ ದಿನಗಳಲ್ಲಿ ಮೀಡಿಯಾ ಕಣ್ಣಿಗೆ ಸ್ಟಾರ್ ಐಕಾನ್ ಆಗಿದ್ದರು. ಬಳಿಕ ಇವರಿಬ್ಬರ ಬ್ರೇಕಪ್ ಆಗಿ ನಿಕ್ ಜೋನಸ್ ಪ್ರಿಯಾಂಕ ಜೊತೆ ಎಂಗೇಜ್ ಆದ್ರು. ಸದ್ಯ ಬ್ರೇಕಪ್ ಬಳಿಕ ಒಲಿವಿಯಾ ಮೊದಲ ಬಾರಿ ಮೌನ ಮುರಿದಿದ್ದಾರೆ.

ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದ ಮಾಡೆಲ್, ನಟಿ ಒಲಿವಿಯಾ ನಿಕ್ ಜೊತೆಗಿನ ಬಾಂಧವ್ಯ ಹಾಗೂ ಬ್ರೇಕಪ್ ವಿಚಾರದ ಬಗ್ಗೆ ತಮಗಾದ ನೋವು, ಸಂಕಟವನ್ನು ಹೇಳಿಕೊಂಡಿದ್ದಾರೆ. ಅಲ್ಲಿ ಅವರಿಗೆ ಬ್ರೇಕಪ್ ಬಗ್ಗೆ ಪ್ರಶ್ನೆ ಕೇಳಲಾಯಿತು. ಮೊದಲಿಗೆ ಹಿಂಜರಿದ ಅವರು ನಿಜವಾಗಿಯೂ ನಾನು ಅದರ ಬಗ್ಗೆ ಮಾತನಾಡಬೇಕೆ..? ಎಂದು ಅವರು ಬಳಿಕ ಎಲ್ಲವನ್ನೂ ಹೇಳಿಕೊಂಡರು. ನಾನು ನಿಕ್ ಜೊತೆಗೆ ಡೇಟಿಂಗ್ ನಡೆಸಿದ್ದು ನಿಜ. ನನ್ನ ಪಾಲಿಗೆ ಅದೊಂದು ಸುಂದರ ಅನುಭವ. ನಿಕ್ ಜೊತೆಗೆ ಲಾಸ್ ಏಂಜಲೀಸ್ ಗೆ ಹೋಗಿದ್ದೆ. ಆಗ ನಾನು ಬ್ರ್ಯಾಂಡ್ ಆಗಿರಲಿಲ್ಲ. ಕೈಯಲ್ಲಿ ಹಣ ಇರಲಿಲ್ಲ. ನಿಕ್ ಜೊತೆಗೆ ಪ್ರೀತಿಯಲ್ಲಿದ್ದೆ ಎಂಬುದೊಂದೇ ನನಗೆ ಖುಷಿಯ ವಿಚಾರವಾಗಿತ್ತು. ಅವರು ನನ್ನ ಜೊತೆ ಬ್ರೇಕಪ್ ಮಾಡಿಕೊಂಡಾಗ ನನಗೆ ಗುರುತೇ ಇಲ್ಲ ಎನಿಸಿತ್ತು’ ಎಂದಿದ್ದಾರೆ.

ಇದನ್ನೂ ಓದಿ: Gajarama : ‘ಗಜರಾಮ’ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯ – ಸುನೀಲ್ ಕುಮಾರ್ ವಿ ಎ ನಿರ್ದೇಶನದ ಚೊಚ್ಚಲ ಸಿನಿಮಾ

ಸಮಾಜದಲ್ಲಿ ನನ್ನ ಗುರುತೆಲ್ಲಾ ನಿಕ್ ಆಗಿದ್ದರು. ಸಂಪೂರ್ಣವಾಗಿ ನಿಕ್ ಜೊತೆಗೆ ನಾನು ಗುರುತಿಸಿಕೊಂಡಿದ್ದೆ. ನಮ್ಮಿಬ್ಬರದ್ದು ಮದುವೆ ನಡೆಯುತ್ತೆ ಎಂದೇ ಅಂದುಕೊಂಡಿದ್ದೆ. ಎಲ್ಲವನ್ನೂ ಪ್ಲಾನ್ ಮಾಡಿದ್ದೆ. ಆದರೆ ಹಾಗಾಗಿಲ್ಲ. ಬ್ರೇಕಪ್ ನಂತರ ಅವರ ಬಗೆಗಿನ ವಿಚಾರಗಳನ್ನೇ ಯೋಚಿಸುತ್ತಾ ರಾತ್ರಿಗಳನ್ನು ಕಳೆದಿದ್ದೇನೆ. ಅಪಾರ್ಟ್ ಮೆಂಟ್ ಬಾಡಿಗೆ ಕಟ್ಟಲೂ ನನ್ನ ಬಳಿ ಹಣವಿರಲಿಲ್ಲ. ಕನಿಷ್ಟ ದಿನಸಿ ಕೊಳ್ಳಲೂ ದುಡ್ಡು ಇರಲಿಲ್ಲ. ಬ್ರೇಕಪ್ ಆದ ಮೊದಮೊದಲು ನನಗೆ ತುಂಬಾ ಕಷ್ಟವಾಗಿತ್ತು. ಬಳಿಕ ಮೆಂಟಲಿ ನಾನು ಸ್ಟ್ರಾಂಗ್ ಆದೆ ಎಂದು ನಿಕ್ ಜೊತೆಗೆ ಬ್ರೇಕಪ್ ನಂತರದ ಕಷ್ಟದ ದಿನಗಳನ್ನು ಹಂಚಿಕೊಂಡಿದ್ದಾರೆ.

Nick Jonas: Desigirl Priyanka husband Nick Jonas revives old love story; The model broke her silence about the breakup

Comments are closed.