Gruha jyothi scheme : ಗೃಹಜ್ಯೋತಿ ಇಂದಿನಿಂದ ಜಾರಿ, ಆದರೆ ಈ ತಿಂಗಳ ಬಿಲ್‌ ಪಾವತಿಸಲೇ ಬೇಕು : ಸಚಿವ ಕೆಜೆ ಜಾರ್ಜ್‌

ಚಿಕ್ಕಮಗಳೂರು : ರಾಜ್ಯದಾದ್ಯಂತ ಇಂದಿನಿಂದ ಗೃಹಜ್ಯೋತಿ ಯೋಜನೆ (Gruha Jyothi Scheme) ಜಾರಿಗೆ ಬರಲಿದೆ. ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡಿರುವ ಗ್ರಾಹಕರು ಮಾತ್ರವೇ ಉಚಿತ ವಿದ್ಯುತ್‌ ಯೋಜನೆಯ ಪ್ರಯೋಜನವನ್ನು ಪಡೆಯಲಿದ್ದಾರೆ. ಆದರೆ ಈ ತಿಂಗಳು ನೀಡುವ ಬಿಲ್‌ ಪಾವತಿ ಮಾಡಬೇಕಾಗಿದೆ ಎಂದು ಸಚಿವ ಇಂಧನ ಸಚಿವ ಕೆ.ಜೆ.ಜಾರ್ಜ್‌ (KJ George) ಹೇಳಿದ್ದಾರೆ.

ಚಿಕ್ಕಮಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೂನ್‌ ತಿಂಗಳ ಬಿಲ್‌ ಜುಲೈ ತಿಂಗಳಿನಲ್ಲಿ ನೀಡಲಾಗುತ್ತದೆ. ಹೀಗಾಗಿ ಈ ಬಿಲ್‌ ಅನ್ನು ಗ್ರಾಹಕರು ಪಾವತಿ ಮಾಡಬೇಕು. ಆದರೆ ಜುಲೈ 1 ರಿಂದ ಗೃಹ ಜ್ಯೋತಿ ಯೋಜನೆ ಜಾರಿಗೆ ಬರಲಿದೆ. ಅಗಸ್ಟ್‌ ತಿಂಗಳಿನಲ್ಲಿ ನೀಡಲಾಗುವ ಬಿಲ್‌ ಪಾವತಿ ಮಾಡುವ ಅಗತ್ಯವಿಲ್ಲ. ಆದರೆ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡವರಿಗೆ ಮಾತ್ರವೇ ಈ ಯೋಜನೆಯ ಲಾಭ ದೊರೆಯಲಿದೆ. ಉಳಿದವರು ಶೀಘ್ರದಲ್ಲಿಯೇ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದಿದ್ದಾರೆ.

ಜಾಸ್ತಿ ಜನರು ಒಟ್ಟಿಗೆ ಅರ್ಜಿ ಸಲ್ಲಿಸುತ್ತಿರುವುದರಿಂದಾಗಿ ಸರ್ವರ್‌ ಸಮಸ್ಯೆ ಉಂಟಾಗುತ್ತಿದೆ. ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ಅಸಾಧ್ಯವಾದವರು, ಕೆಇಬಿ ಕಚೇರಿಗಳಿಗೆ ತೆರಳಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಗೃಹಜ್ಯೋತಿ ಯೋಜನೆಗೆ ಯಾವುದೇ ಡೆಡ್‌ಲೈನ್‌ ಇಲ್ಲ. ಹೀಗಾಗಿ ಎಲ್ಲಾ ಗ್ರಾಹಕರು ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಪ್ರತೀ ಗ್ರಾಹಕರು ತಮ್ಮ 12 ತಿಂಗಳ ವಿದ್ಯುತ್‌ ಬಳಕೆಯ ಸರಾಸರಿ ಆಧಾರದಲ್ಲಿ ಉಚಿತ ವಿದ್ಯುತ್‌ ನೀಡಲಾಗುತ್ತಿದ್ದು, ಸರಾಸರಿ ಬಳಕೆಗೆ ಶೇ.10 ರಷ್ಟನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ : Gruha Jyothi Scheme News‌ : ಗೃಹ ಜ್ಯೋತಿ ಯೋಜನೆ : ಇಂದಿನಿಂದ ರಾಜ್ಯದಲ್ಲಿ ಉಚಿತ ವಿದ್ಯುತ್ ಯೋಜನೆ ಆರಂಭ : ಅರ್ಜಿ ಸಲ್ಲಿಸಿದವರು ಇಂದೇ ಸಲ್ಲಿಸಿ

ಇದನ್ನೂ ಓದಿ : Karnataka Rain Alert : ಜುಲೈ 5 ರ ವರೆಗೆ ಕರಾವಳಿಯಲ್ಲಿ ಮಳೆಯ ಆರ್ಭಟ : ಯೆಲ್ಲೋ, ಆರೆಂಜ್‌ ಅಲರ್ಟ್‌ ಘೋಷಣೆ

ರಾಜ್ಯದಲ್ಲಿ ಒಟ್ಟು 214 ಕೋಟಿ ಗ್ರಾಹಕರಿದ್ದು, ಈ ಪೈಕಿ ಇದುವರೆಗೆ ಒಟ್ಟು 85,91,005 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಉಳಿದಂತೆ 1,28,995 ಗ್ರಾಹಕರು ಅರ್ಜಿಯನ್ನು ಸಲ್ಲಿಸಲು ಬಾಕಿ ಇದೆ. ಜೂನ್‌ 18 ರಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಆರಂಭವಾಗಿದ್ದು, ಉಳಿದ ಗ್ರಾಹಕರು ಅರ್ಜಿಯನ್ನು ಸಲ್ಲಿಸಲು ಕನಿಷ್ಠ 15 ಕಾಲಾವಕಾಶ ಬೇಕಾಗುತ್ತದೆ.

KJ George: Gruha Jyothi Scheme is effective from today, but this month’s bill must be paid: Minister KJ George

Comments are closed.