National Doctors Day 2023: ಇಂದು ರಾಷ್ಟ್ರೀಯ ವೈದ್ಯರ ದಿನ; ಈ ದಿನದ ಮಹತ್ವ ಮತ್ತು ವಿಶೇಷತೆ

ರೋಗ ಯಾವುದೇ ಇರಲಿ, ಸಣ್ಣ ಜ್ವರ ಅಥವಾ ಶೀತ ಇರಲಿ ಅಥವಾ ಯಾವುದೋ ದೊಡ್ಡ ಖಾಯಿಲೆಯೇ ಇರಲಿ. ರೋಗಿಯ ಪಾಲಿಗೆ ವೈದ್ಯರೆಂದರೆ ದೇವರೇ ಸರಿ. ರೋಗ ಗುಣಪಡಿಸಿ, ರೋಗಿಯನ್ನು ಆರೋಗ್ಯವಂತನನ್ನಾಗಿ ಮಾಡುವುದು ವೈದ್ಯರೇ. ಕರೋನಾದಂತಹ ಸಾಂಕ್ರಾಮಿಕ ರೋಗಗಳ ಸಮಯದಲ್ಲಿ ವೈದ್ಯರು ಯೋಧರಂತೆ ಜನರನ್ನು ಕಾಪಾಡಿದ್ದು ನಮಗೆ ತಿಳಿದಿದೆ. ವೈದ್ಯ ವೃತ್ತಿ ಇದು ಕೇವಲ ವೃತ್ತಿಯಲ್ಲ, ಇದು ಸೇವೆ. ದೇಶದ ಎಲ್ಲ ವೈದ್ಯರ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡ ಪ್ರತಿ ವರ್ಷ ಜುಲೈ 1ರಂದು ‘ರಾಷ್ಟ್ರೀಯ ವೈದ್ಯರ ದಿನ (National Doctors Day 2023)’ ಆಚರಿಸಲಾಗುತ್ತದೆ. ಭಾರತದಲ್ಲಿ ಪ್ರತಿ ವರ್ಷ ಡಾ. ಬಿಧಾನ್‌ ಚಂದ್ರ ರಾಯ್‌ ಅವರ ವೈದ್ಯ ಲೋಕಕ್ಕೆ ನೀಡಿರುವ ಕೊಡುಗೆಯ ನೆನಪಿಗಾಗಿ ‘ರಾಷ್ಟ್ರೀಯ ವೈದ್ಯರ ದಿನ’ ಇದನ್ನು ಆಚರಿಸಲಾಗುತ್ತದೆ (Happy National Doctors Day)

ರಾಷ್ಟ್ರೀಯ ವೈದ್ಯರ ದಿನಾಚರಣೆಯ ಇತಿಹಾಸ
ಪ್ರತಿ ವರ್ಷ ರಾಷ್ಟ್ರೀಯ ವೈದ್ಯದ ದಿನವನ್ನು ಬಂಗಾಳದ ಮಾಜಿ ಮುಖ್ಯಮಂತ್ರಿಗಳಾದ ಡಾ. ಬಿ.ಸಿ.ರಾಯ್‌ ಎಂದೇ ಖ್ಯಾತರಾದ ಡಾ. ಬಿಧಾನ್‌ ಚಂದ್ರ ರಾಯ್‌ ಅವರ ಜನ್ಮ ದಿನದ ನೆನಪಿಗಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆ ಕಲ್ಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಅದಕ್ಕಾಗಿ ಅವರಿಗೆ 4 ಫೆಬ್ರವರಿ 1961 ರಂದು ಭಾರತ ರತ್ನ ನೀಡಲಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಅವರು ನೀಡಿರುವ ಕೊಡುಗೆಯನ್ನು ಸ್ಮರಿಸುವ ಸಲುವಾಗಿ 1991 ರಿಂದ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತಿದೆ. ಡಾ. ಬಿ.ಸಿ. ರಾಯ್‌ ಅವರ ಜನ್ಮ ಮತ್ತು ಮರಣವು ಜುಲೈ 1 ಆಗಿರುವುದು ವಿಶೇಷವಾಗಿದೆ.

ಈ ದಿನದ ಮಹತ್ವ
ತಮ್ಮ ರೋಗಿಗಳ ಜೀವ ಉಳಿಸಲು ಹಗಲಿರುಳು ಶ್ರಮಿಸುವ ದೇಶದ ಎಲ್ಲ ವೈದ್ಯರನ್ನು ಗೌರವಿಸುವುದೇ ಈ ವಿಶೇಷ ದಿನವನ್ನು ಆಚರಿಸುವ ಹಿಂದಿನ ಕಾರಣ. ಕೊರೊನಾ ಕಾಲದಲ್ಲಿ ವೈದ್ಯರು ವಹಿಸಿದ ಪಾತ್ರ ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಈ ವಿಶೇಷ ದಿನವನ್ನು ಆಚರಿಸುವ ಹಿಂದಿನ ಕಾರಣವೆಂದರೆ ಅವರನ್ನು ಗೌರವಿಸುವುದು. ಇತರರಿಗೆ ಸೇವೆ ಸಲ್ಲಿಸಲು ಅವರನ್ನು ಪ್ರೇರೇಪಿಸುವುದು. ವೈದ್ಯರ ಬಗ್ಗೆ ನಮ್ಮ ಗೌರವವನ್ನು ತೋರಿಸಲು ಇದಕ್ಕಿಂತ ವಿಶೇಷವಾದ ದಿನ ಇನ್ನೊಂದಿಲ್ಲ.

ಇದನ್ನೂ ಓದಿ: Bangalore Mysore Expressway : ಮೈಸೂರು – ಬೆಂಗಳೂರು ಹೆದ್ದಾರಿಯಲ್ಲಿ 2 ಕಡೆ ಟೋಲ್ ಆರಂಭ : ಪ್ರಯಾಣಿಕರಿಗೆ ಮತ್ತೆ ಬರೆ

ಇದನ್ನೂ ಓದಿ: Kids Mental Health : ನಿಮ್ಮ ಮಗು ತಿನ್ನುವ ಅಸ್ವಸ್ಥತೆಯಿಂದ ಬಳಲುತ್ತಿದೆಯೇ? ಈ ಕಾರಣಕ್ಕಾಗಿಯೇ ಗಮನಿಸಿ

(National Doctors Day 2023 history significance Importance in news next kannada)

Comments are closed.