Amala Paul:ಮಣಿರತ್ನಂ (Maniratham) ಚಿತ್ರದ ಆಫರ್‌ ರಿಜೆಕ್ಟ್‌ ಮಾಡಿದ್ದೇಕೆ “ಹೆಬ್ಬುಲಿ” ನಟಿ ಅಮಲಾ ಪೌಲ್‌

ಖ್ಯಾತ ನಿರ್ದೇಶಕ ಮಣಿರತ್ನಂ(Maniratham) ಸಿನಿಮಾರಂಗದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದವರು. ಸಿನಿರಂಗದಲ್ಲಿ ಮಣಿರತ್ನಂರವರ ಜೊತೆ ಕೆಲಸ ಮಾಡಲು ಅನೇಕ ನಟ-ನಟಿಯರು ತಂತ್ರಜ್ಞರು ಹಾತೊರೆಯುತ್ತಾರೆ. ಆದರೆ “ಹೆಬ್ಬುಲಿ” ನಟಿ ಅಮಲಾ ಪೌಲ್‌(Amala Paul) ಮಾತ್ರ ಮಣಿರತ್ನಂ ಅವರ ಆಫರ್‌ ಅನ್ನು ತಿರಸ್ಕರಿಸಿದ್ದಾರೆ.

ಅಮಲಾ ಪೌಲ್‌ ಸತತ ಎರಡು ಬಾರಿ ಅವಕಾಶವನ್ನು ನಿರಾಕರಿಸಿದ್ದಾರೆ. (Maniratham)ಮಣಿರತ್ನಂ ನಿರ್ದೇಶನದ (Ponniyin Selvan) “ಪೊನ್ನಿಯಿನ್‌ ಸೆಲ್ವನ್”‌ ಚಿತ್ರದಲ್ಲಿ ನಟಿಸುವಂತೆ ಅಮಲ್‌ ಪೌಲ್‌ (Amala Paul) ರವರಿಗೆ ಅವಕಾಶವನ್ನು ನೀಡಲಾಗಿತ್ತು. ಆದರೆ ಅವರು ಈ ಚಿತ್ರದಲ್ಲಿ ನಟಿಸಲು ನಿರಕಾರಿಸಿದ್ದಾರೆ.

“ಪೊನ್ನಿಯಿನ್‌ ಸೆಲ್ವನ್”‌ (Ponniyin Selvan) ಬಹು ತಾರಾಗಣವಿದೆ. ಚಿಯಾನ್‌ ವಿಕ್ರಮ್‌, ಕಾರ್ತಿ, ಐಶ್ವೃಯಾ ರೈ ಬಚ್ಚನ್‌, ಪ್ರಕಾಶ್‌ ರಾಜ್‌, ಜಯಂ ರವಿ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.(Amala Paul) ಅಮಲಾ ಪೌಲ್‌ ಅವರಿಗೆ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚುವಂತೆ ಅವಕಾಶ ನೀಡಲಾಗಿತ್ತು. ಅಲ್ಲದೇ ಆಡಿಷನ್‌ನಲ್ಲಿ ಕೂಡ ಭಾಗವಹಿಸಿ ಸೆಲೆಕ್ಟ್‌ ಆಗಿದ್ದರು. “ಪೊನ್ನಿಯಿನ್‌ ಸೆಲ್ವನ್”‌ ಚಿತ್ರವು ಸೆಟ್ಟೇರುವುದು ತಡವಾದ್ದರಿಂದ ಅಮಲಾ‌ ಪೌಲ್ ಚಿತ್ರತಂಡದಿಂದ ಹೊರ ಉಳಿದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅಮಲಾ ಪೌಲ್‌, ನಾನು ಮಣಿರತಂ ರವರ ಅಭಿಮಾನಿ. ಮೊದಲ ಬಾರಿಗೆ ಈ ಚಿತ್ರವು ಸಟ್ಟೇರದೇ ಇರುವುದು ನನಗೆ ಬೇಸರವಾಗಿತ್ತು. 2021ರಲ್ಲಿ ಅದೇ ಸಿನಿಮಾಕ್ಕಾಗಿ ನನಗೆ ಮತ್ತೆ ಕರೆ ಮಾಡಿದ್ದರು. ಆಗ ನಾನು ಚಿತ್ರದಲ್ಲಿ ನಟಿಸಲು ಆಸಕ್ತಿ ಹೊಂದಿರಲಿಲ್ಲ. ಅಂತಹ ಅವಕಾಶ ತಪ್ಪಿ ಹೋಗಿದ್ದಕ್ಕೆ ಹೆಚ್ಚೇನು ಬೇಸರವಾಗಿಲ್ಲ ಎಂದು ಹೇಳಿದ್ದರು.

“ಪೊನ್ನಿಯಿನ್‌ ಸೆಲ್ವನ್”‌ (Ponniyin Selvan)ಸಿನಿಮಾವು ಕಲ್ಕಿ ಕೃಷ್ಣಮೂರ್ತಿ ರವರು ಬರೆದ ಕಾದಂಬರಿಯನ್ನು ಆಧರಿಸಿದ ಚಿತ್ರವಾಗಿದೆ. ಈ ಸಿನಿಮಾವು ದೊಡ್ಡ ಮಟ್ಟದ ಬಜೆಟ್ ನ ಸಿನಿಮಾವಾಗಿ ಮೂಡಿಬಂದಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೇಲರ್‌ ರೀಲಿಸ್‌ ಆಗಿದ್ದು ಎಲ್ಲ ಪ್ರಮುಖ ಪಾತ್ರಗಳ ಬಗ್ಗೆಯೂ ಪರಿಚಯಿಸಿದೆ. ಈ ಸಿನಿಮಾವು ಸೆಪ್ಟೆಂಬರ್‌ 30 ರಂದು ತೆರೆಕಾಣಲಿದೆ.

ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ 160 ಕೋಟಿ ಕಲೆಕ್ಷನ್ ಬಾಚಿದ ಬ್ರಹ್ಮಾಸ್ತ್ರ

ಇದನ್ನೂ ಓದಿ: ಪುನೀತ್‌ ರಾಜ್ ಕುಮಾರ್‌ ಗೆ ಸೈಮಾ ಅತ್ಯುತ್ತಮ ನಾಯಕ ನಟ ಪ್ರಶಸ್ತಿ

ಇದನ್ನೂ ಓದಿ: ಟಾಲಿವುಡ್‌ ರೆಬಲ್‌ ಸ್ಟಾರ್‌ ಉಪ್ಪಲಪತ್ತಿ ವೆಂಕಟ ಕೃಷ್ಣಂರಾಜು ನಿಧನ

ಈ ಸಿನಿಮಾವು ಪ್ಯಾನ್‌ ಇಂಡಿಯಾ ಸಿನಿಮಾಗಳಲ್ಲಿ ಒಂದಾಗಲಿದೆ. ತಮಿಳಿನ ಈ ಚಿತ್ರವು ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿಗೆ ಡಬ್‌ ಆಗಿ ರೀಲಿಸ್‌ ಆಗಲಿದೆ. ಈಗಾಗಲೇ ಸಿನಿಮಾದ ಹಾಡುಗಳು ಮತ್ತು ಟ್ರೇಲರ್‌ ಪ್ರೇಕ್ಷಕರ ಗಮನ ಸೆಳೆದಿದೆ.

Amala Paul Maniratham Ponniyin Selvan Offer Reject

Comments are closed.