Malini Mallya : ಕೋಟ ಶಿವರಾಮ ಕಾರಂತರ ಆಪ್ತ ಸಹಾಯಕಿ, ಕಾದಂಬರಿಗಾರ್ತಿ ಮಾಲಿನಿ ಮಲ್ಯ ವಿಧಿವಶ

ಸಾಲಿಗ್ರಾಮ : ಕವಿ, ಸಾಹಿತಿ ಕೋಟ ಡಾ.ಶಿವರಾಮ ಕಾರಂತರ (Kota Shivarama Karanth) ಆಪ್ತ ಸಹಾಯಕಿಯಾಗಿದ್ದ ಕಾದಂಬರಿಗಾರ್ತಿ ಮಾಲಿನಿ ಮಲ್ಯ (Malini Mallya Passed away) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅವರು ಸಾಲಿಗ್ರಾಮದ ಕೋಟ ಡಾ.ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಅಧ್ಯಕ್ಷರಾಗಿದ್ದರು. ದೀರ್ಘ ಕಾಲದಿಂದಲೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಕರೆದೊಯ್ದು ಚಿಕಿತ್ಸೆಯನ್ನು ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಉಡುಪಿ ಜಿಲ್ಲೆಯ ಸಾಲಿಗ್ರಾಮದ ನಿವಾಸಿಯಾಗಿರುವ ಮಾಲಿನಿ ಮಲ್ಯ (Malini Mallya Passed away) ಅವರು ಭಾರತೀಯ ಜೀವವಿಮಾ ನಿಗಮದ ನಿವೃತ್ತ ಉದ್ಯೋಗಿಯಾಗಿದ್ದರು. ಡಾ.ಶಿವರಾಮ ಕಾರಂತರ (Kota Shivarama Karanth) ಬದುಕು ಬರಹಗಳನ್ನು ಕನ್ನಡದ ಓದುಗರಿಗೆ ಉಣಬಡಿಸಿದ ಮಾಲಿನಿ ಮಲ್ಯ ಅವರು ಸಾಹಿತ್ಯ ಲೋಕಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಸಾಲಿಗ್ರಾಮದಲ್ಲಿ ಕಾರಂತ ಸ್ಮೃತಿ ಭವನವನ್ನು ನಿರ್ಮಿಸಿ ಕಾರಂತರ ಕುರಿತಾದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದರು. ಶಿವರಾಮ ಕಾರಂತರ ಕೊನೆಯ ದಿನಗಳವರೆಗೂ ಕೂಡ ಜೊತೆಗಿದ್ದ ಮಾಲಿನಿ ಮಲ್ಯ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಿದ್ದಾರೆ.

ನಾ ಕಂಡ ಕಾರಂತರು, ಗೊಂದಲಪುರದ ನಿಂದಲರು, ದಾಂಪತ್ಯ ಗೀತೆ, ಶಿವರಾಮ ಕಾರಂತರ ಕಿನ್ನರ ಲೋಕ ಚಿಣ್ಣರ ಲೋಕದಲ್ಲಿ ಕಾರಂತರು ಭಾಗ 1 ಮತ್ತು 2, ಸಾಹಿತ್ಯೇತರ ಕಾರಂತರು, ಕಾರಂತರ ಉವಾಚ, ಶಿವರಾಮ ಕಾರಂತರ ವಾಙ್ಮಯ ವೃತ್ತಾಂತ, ಶಿವರಾಮ ಕಾರಂತರ ಕೃತಿ ಕೈಪಿಡಿ, ಶಿವರಾಮ ಕಾರಂತರ ಲೇಖನಗಳು, ಪಕ್ಷಿಗಳ ಅದ್ಬುತ ಲೋಕ, ಬಾಲಪ್ರಪಂಚ -3 ಕೃತಿಗಳನ್ನು ರಚಿಸಿದ್ದಾರೆ. ಮಾಲಿನಿ ಮಲ್ಯ (Malini Mallya) ಅವರ ಸಾಹಿತ್ಯದ ಸಾಧನೆಗಾಗಿ ಬೆಂಗಳೂರಿನ ಶಾಶ್ವತಿ ಸಂಸ್ಥೆಯಿಂದ ಸದೋದಿತ ಸಾಹಿತ್ಯ ಪ್ರಶಸ್ತಿ ಲಭಿಸಿದೆ.

ಇದನ್ನೂ ಓದಿ : ಭದ್ರಗಿರಿಯಿಂದ ಮಾಬುಕಳ ವರೆಗೆ ಸರ್ವಿಸ್‌ ರಸ್ತೆಗೆ ಆಗ್ರಹ : ಬ್ರಹ್ಮಾವರದಲ್ಲಿ ಬೃಹತ್‌ ಪ್ರತಿಭಟನೆ

ಇದನ್ನೂ ಓದಿ : ದೇಗುಲದ ಪ್ರಸಾದ ಕವರ್‌ ನಲ್ಲಿ ಪತ್ತೆಯಾಯ್ತು ಕಂತೆ ಕಂತೆ ಹಣ

ಇದನ್ನೂ ಓದಿ : Adhaar Pan linking: ಬಿಗ್‌ ರಿಲೀಫ್‌ : ಪ್ಯಾನ್ – ಆಧಾರ್ ಲಿಂಕ್ ಅವಧಿ ವಿಸ್ತರಿಸಿದ ಕೆಂದ್ರ ಸರಕಾರ

ಇದನ್ನೂ ಓದಿ : Rama Navami 2023 : ರಾಮನವಮಿ ಹಿಂದಿನ ಇತಿಹಾಸ, ಮಹತ್ವ ಹಾಗೂ ಆಚರಣೆಗಳು

Comments are closed.