Fire at migrant facility Centre: ಮೆಕ್ಸಿಕೋದ ವಲಸಿಗರ ಸೌಲಭ್ಯ ಕೇಂದ್ರದಲ್ಲಿ ಭಾರೀ ಬೆಂಕಿ: 39 ಮಂದಿ ಸಾವು

ಮೆಕ್ಸಿಕೊ ಸಿಟಿ: (Fire at migrant facility Centre) ಅಮೆರಿಕದ ಗಡಿಗೆ ಸಮೀಪವಿರುವ ಉತ್ತರ ಮೆಕ್ಸಿಕೊದಲ್ಲಿರುವ ವಲಸೆ ಬಂಧನ ಕೇಂದ್ರದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, 39 ಮಂದಿ ವಲಸಿಗರು ಬೆಂಕಿಯಲ್ಲಿ ಬೆಂದು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಸೋಮವಾರ ತಡರಾತ್ರಿ ಸಂಭವಿಸಿದ ಬೆಂಕಿ ಅವಘಡಲ್ಲಿ ಮೂವತ್ತೊಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 29 ಮಂದಿ ಗಾಯಗೊಂಡಿದ್ದಾರೆ

ಅಮೆರಿಕದ ಗಡಿಗೆ ಸಮೀಪವಿರುವ ಉತ್ತರ ಮೆಕ್ಸಿಕೊದಲ್ಲಿರುವ ವಲಸಿಗರ ಸೌಲಭ್ಯ ಕೇಂದ್ರದಲ್ಲಿ ಬೆಂಕಿ ಅವಘಡ (Fire at migrant facility Centre) ಸಂಭವಿಸಿದ್ದು, 39 ಮಂದಿ ಸಾವನ್ನಪ್ಪಿ, 29 ಮಂದಿ ಗಾಯಗೊಂಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳಗಳು, ಆಂಬುಲೆನ್ಸ್‌ ಗಳು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣಗಳು ತಿಳಿದುಬಂದಿಲ್ಲವಾದರೂ ಮೇಲ್ನೋಟಕ್ಕೆ ಶಾರ್ಟ್‌ ಸರ್ಕ್ಯೂಟ್‌ ಸಂಭವಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಮವಾರ ತಡರಾತ್ರಿ ಸಂಭವಿಸಿದ ಬೆಂಕಿ(Fire at migrant facility Centre)ಯಲ್ಲಿ ಮೂವತ್ತೊಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 29 ಮಂದಿ ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ವಲಸೆ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರು ಪ್ರಕರಣದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ಅಧಿಕಾರ ಹೊಂದಿಲ್ಲದ ಕಾರಣ ಅನಾಮಧೇಯತೆಯ ಸ್ಥಿತಿಯ ಕುರಿತು ಮಾತನಾಡಿದರು. ಮಾಧ್ಯಮ ವರದಿಗಳ ಪ್ರಕಾರ, ಮೆಕ್ಸಿಕೊದ ಅಟಾರ್ನಿ ಜನರಲ್ ಕಚೇರಿಯು ಘಟನೆಯ ಕುರಿತು ವಿಚಾರಣೆಯನ್ನು ಪ್ರಾರಂಭಿಸಿದ್ದು, ಘಟನಾ ಸ್ಥಳದಲ್ಲಿ ತನಿಖಾಧಿಕಾರಿಗಳನ್ನು ನಿಯೋಜಿಸಿದೆ. ಸಿಯುಡಾಡ್ ಜುವಾರೆಜ್ ಯುನೈಟೆಡ್ ಸ್ಟೇಟ್ಸ್ಗೆ ಪ್ರವೇಶಿಸುವ ವಲಸಿಗರಿಗೆ ಒಂದು ಪ್ರಮುಖ ಕ್ರಾಸಿಂಗ್ ಪಾಯಿಂಟ್ ಆಗಿದೆ.

ಇದನ್ನೂ ಓದಿ : ಐಸ್ ಕ್ರೀಂ ಗೋದಾಮಿಗೆ ಆಕಸ್ಮಿಕ ಬೆಂಕಿ : ಕೋಟ್ಯಾಂತರ ರೂಪಾಯಿ ನಷ್ಟ

ಇದನ್ನೂ ಓದಿ : Nashville school shooting: ನ್ಯಾಶ್ವಿಲ್ಲೆ ಶಾಲೆಯಲ್ಲಿ ಗುಂಡಿನ ದಾಳಿ : ಮೂವರು ಮಕ್ಕಳು ಸೇರಿದಂತೆ ಆರು ಮಂದಿ ಸಾವು

ಇದನ್ನೂ ಓದಿ : BJP worker killed: ಬಿಜೆಪಿ ಕಾರ್ಯಕರ್ತನ ಮೇಲೆ ಬಾಂಬ್ ಎಸೆದು ಕೊಲೆ : ಭಯಾನಕ ವೀಡಿಯೊ ವೈರಲ್

Fire at migrant facility center: Massive fire at migrant facility center in Mexico: 39 dead

Comments are closed.