ಕುರುಬರಿಗೆ ಒಲಿಯುತ್ತಾ ರಾಜ್ಯಾಧ್ಯಕ್ಷ ಸ್ಥಾನ : KS ಈಶ್ವರಪ್ಪ ಗೆ ಕೊಟ್ಟ ಮಾತು ಉಳಿಸಿಕೊಂಡ್ರಾ ಪ್ರಧಾನಿ ಮೋದಿ ?

ಹಿಂದುಳಿದ ವರ್ಗಗಳ ಮತಬೇಟೆಗೆ ಸಜ್ಜಾಗ್ತಿರೋ ಬಿಜೆಪಿ ಸಿದ್ಧರಾಮಯ್ಯನವರಿಗೆ ಪರ್ಯಾಯವಾಗುವಂತ ಹಿಂದುಳಿದ ವರ್ಗಗಳ ನಾಯಕನ ಆಯ್ಕೆ ಹಾಗೂ ನಾಯಕತ್ವಕ್ಕೆ ಆದ್ಯತೆ ನೀಡಲು ಮುಂದಾಗ್ತಿದೆ ಅನ್ನೋ ಸಂಗತಿ ಮುನ್ನಲೆಗೆ ಬಂದಿದೆ.

ಬೆಂಗಳೂರು : ರಾಜ್ಯದಲ್ಲಿ ಸೋತು ಸುಣ್ಣವಾಗಿರೋ ಬಿಜೆಪಿ ಸದ್ಯ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನ ಎರಡಕ್ಕೂ ನಾಯಕನನ್ನು ಆಯ್ಕೆ ಮಾಡಿದರೇ ಸಾಕು ಅನ್ನೋ ಸ್ಥಿತಿಯಲ್ಲಿದೆ. ಈ ಮಧ್ಯೆಯೇ ಹಿಂದುಳಿದ ವರ್ಗಗಳ ಮತಬೇಟೆಗೆ ಸಜ್ಜಾಗ್ತಿರೋ ಬಿಜೆಪಿ ಸಿದ್ಧರಾಮಯ್ಯನವರಿಗೆ ಪರ್ಯಾಯವಾಗುವಂತ ಹಿಂದುಳಿದ ವರ್ಗಗಳ ನಾಯಕನ ಆಯ್ಕೆ ಹಾಗೂ ನಾಯಕತ್ವಕ್ಕೆ ಆದ್ಯತೆ ನೀಡಲು ಮುಂದಾಗ್ತಿದೆ ಅನ್ನೋ ಸಂಗತಿ ಮುನ್ನಲೆಗೆ ಬಂದಿದೆ.

ಬಿಜೆಪಿ ಕೇವಲ ಬ್ರಾಹ್ಮಣರು ಹಾಗೂ ಲಿಂಗಾಯತ್ ರ ಪಕ್ಷ ಅನ್ನೋ ಹಣೆಪಟ್ಟಿ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ಕಾಂಗ್ರೆಸ್ ಹಿಂದುಳಿದ,ಅಲ್ಪ ಸಂಖ್ಯಾತ ಮತಗಳನ್ನು ಸೆಳೆಯಲು ಸರ್ಕಸ್ ನಡೆಸಿ ಯಶಸ್ವಿಯಾಗಿದೆ. ಹೀಗಾಗಿ ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಎಚ್ಚೆತ್ತುಕೊಂಡಿರೋ ಬಿಜೆಪಿ ಹೈಕಮಾಂಡ್ ರಾಜ್ಯ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವ ಉದ್ದೇಶದಿಂದ ರಾಜ್ಯ ಬಿಜೆಪಿಗೆ ಒಂದಿಷ್ಟು ಮಹತ್ವದ ಟಾಸ್ಕ್ ನೀಡಲಿದೆ ಎಂದು ನೀರಿಕ್ಷಿಸಲಾಗುತ್ತಿದೆ.

KS Eshwarappa Karnataka State BJP President position Has Prime Minister Modi kept his promise to KS Eshwarappa
Image Credit to Original Source

ರಾಜ್ಯದಲ್ಲಿ ಸಿದ್ಧರಾಮಯ್ಯ ಹಿಂದುಳಿದ ವರ್ಗಗಳ ಪ್ರಶ್ನಾತೀತ ನಾಯಕರಾಗಿ ಬೆಳೆದಿದ್ದಾರೆ. ಹೀಗಾಗಿ ಬಿಜೆಪಿಯಿಂದಲೂ ಹಿಂದುಳಿದ ವರ್ಗಗಳ ನಾಯಕರು ಇನ್ನಷ್ಟು ಸಕ್ರಿಯವಾಗ ಬೇಕು‌. ಪಕ್ಷದ ಆದ್ಯತೆ,ಅವಶ್ಯಕತೆ ಹಾಗೂ ಅನಿರ್ವಾಯತೆ ಅರ್ಥ ಮಾಡಿಕೊಂಡು ಹಿಂದುಳಿದ ವರ್ಗಗಳನ್ನು ಬಿಜೆಪಿಯತ್ತ ಸೆಳೆಯಬೇಕು. ಆ ಮೂಲಕ ಹಿಂದುಳಿದ ವರ್ಗದ ನಾಯಕ ರಾಗಿ ಬೆಳೆದಿರುವ ಸಿದ್ದು ಶಕ್ತಿ ಕುಗ್ಗಿಸುವ ಜವಾಬ್ದಾರಿ ನಿರ್ವಹಿಸಬೇಕೆಂದು ಸೂಚನೆ ನೀಡಿದೆ ಎನ್ನಲಾಗ್ತಿದೆ.

ಇದನ್ನೂ  ಓದಿ : ಲೋಕಸಭಾ ಚುನಾವಣೆ 2023 : ಕಾಂಗ್ರೆಸ್‌ನಿಂದ ಉಡುಪಿ – ಚಿಕ್ಕಮಗಳೂರಿಗೆ ಜಯಪ್ರಕಾಶ್‌ ಹೆಗ್ಡೆ, ದಕ್ಷಿಣ ಕನ್ನಡಕ್ಕೆ ಹರೀಶ್‌ ಕುಮಾರ್‌ ಕಣಕ್ಕೆ ?

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಮತ ಸೆಳೆಯಲು ಬಿಜೆಪಿ ಕಾರ್ಯತಂತ್ರ ರೂಪಿಸಿದ್ದು, ಹಿಂದುಳಿದ ವರ್ಗಗಳ ಮನಸ್ಥಿತಿ ಬಗ್ಗೆ ತಿಳಿಯಲು ರಾಜ್ಯದ ಪ್ರಮುಖ ಹಿಂದುಳಿದ ವರ್ಗಗಳ ಮುಖಂಡರನ್ನು ದೆಹಲಿಗೆ ಆಹ್ವಾನಿಸಿದೆ. ರಾಜ್ಯದ ನಾಯಕರುಗಳಾದ ಪಿ.ಸಿ.ಮೋಹನ್, ಶ್ರೀನಿವಾಸ್ ಪೂಜಾರಿ ಹಾಗೂ KS  ಈಶ್ವರಪ್ಪ ದೆಹಲಿಗೆ ತೆರಳಿದ್ದಾರೆ.

ಅಲ್ಲಿ ನಡೆಯೋ ಸಭೆಯಲ್ಲಿ ಹಿಂದುಳಿದ ಮತಗಳ ಸೆಳೆಯಲು ಹಾಗೂ ಸಿದ್ದು ಶಕ್ತಿ ಕುಗ್ಗಿಸಲು ಮಹತ್ವದ ಕಾರ್ಯತಂತ್ರ ಅಲ್ಲದೆ ಹಿಂದುಳಿದ ವರ್ಗಗಳ ನಾಯಕರಿಗೂ ಮಹತ್ವದ ಹುದ್ದೆ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನಲಾಗ್ತಿದೆ. ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಎರಡೂ ಸ್ಥಾನಗಳು ಖಾಲಿ ಇವೆ. ಈ ಪೈಕಿ ಒಂದು ಹುದ್ದೆಯನ್ನು ಹಿಂದುಳಿದ ವರ್ಗಕ್ಕೆ ನೀಡುವ ಬಗ್ಗೆಯೂ ನಿರ್ಧಾರ ಮಾಡುಗ ಸಾಧ್ಯತೆ.

ಇದನ್ನೂ ಓದಿ : ನೀವು ಬಿಪಿಎಲ್‌ ಕಾರ್ಡ್‌ ಹೊಂದಿದ್ದೀರಾ ? ಜೊತೆಗೆ ಕಾರು ಇದ್ಯಾ ? ಹಾಗಾದ್ರೆ ರದ್ದಾಗುತ್ತೆ ನಿಮ್ಮ ರೇಷನ್‌ ಕಾರ್ಡ್‌

ಸದ್ಯ ಶಾಸಕ ಈ ಎರಡೂ ಹುದ್ದೆಯ ರೇಸ್ ನಲ್ಲಿದ್ದಾರೆ. ಆದರೆ ಅವರ ಮೇಲೆ‌ಕೇಳಿಬಂದಿರೋ ಹಗರಣ ಇದಕ್ಕೆ ಮುಳ್ಳಾಗುವ ಸಾಧ್ಯತೆ ಇದೆ. ಇನ್ನೂ ಚುನಾವಣೆ ನಿವೃತ್ತಿ ಘೋಷಿಸಿರುವ ಈಶ್ವರಪ್ಪ ಗೂ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಯಲಿದ್ದು, ಹಿಂದುಳಿದ ವರ್ಗಗಳ ಈಶ್ವರಪ್ಪ ಗೆ ಅಧಿಕಾರ ನೀಡಿದರೇ ಅಧಿಕಾರ ಹಂಚಿಕೆ ಹಾಗೂ ಹಿಂದುಳಿದ ವರ್ಗಗಳನ್ನು ಗುರುತಿಸಿದ ಖ್ಯಾತಿ ಪಕ್ಷಕ್ಕೆ ಸಿಗಲಿದೆ.

KS Eshwarappa Karnataka State BJP President position Has Prime Minister Modi kept his promise to KS Eshwarappa
Image Credit to Original Source

ಹೀಗಾಗಿ ಈಶ್ವರಪ್ಪ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆಯೂ ಇದೆ. ಈಶ್ವರಪ್ಪ ಚುನಾವಣೆಗೆ ನಿಲ್ಲದೇ ಮೋದಿ ಮಾತಿನಂತೆ ತಮ್ಮ ಕ್ಷೇತ್ರವನ್ನು ಬಿಜೆಪಿಯ ಕಾರ್ಯಕರ್ತನಿಗೆ ಬಿಟ್ಟುಕೊಟ್ಟಿದ್ದರು. ಈ ವೇಳೆ ಅವರಿಗೆ ಸೂಕ್ತ ಸ್ಥಾನಮಾನದ ಭರವಸೆ ನೀಡಲಾಗಿತ್ತು. ಹೀಗಾಗಿ ಈಗ ಪುತ್ರ ಕಾಂತೇಶ್ ನಿಗೆ ಹಾವೇರಿಯಿಂದ ಲೋಕಸಭಾ ಟಿಕೇಟ್ ಕೇಳ್ತಿರೋ ಈಶ್ವರಪ್ಪ ಅವರ ಮನವೊಲಿಸಲು ರಾಜ್ಯಾಧ್ಯಕ್ಷ ಸ್ಥಾನ ನೀಡಿ ಸುಮ್ಮನಾಗಿಸುವ ಸ್ಥಾನ ಇದೆ ಎನ್ನಲಾಗ್ತಿದೆ.

ಇದನ್ನೂ ಓದಿ : 10 ಲಕ್ಷ ಮಹಿಳೆಯರಿಗೆ ಇಲ್ಲ ಗೃಹಲಕ್ಷ್ಮೀ ಭಾಗ್ಯ

ವಿಧಾನ ಪರಿಷತ್ ವಿಪಕ್ಷ ನಾಯಕನ ಸ್ಥಾನ ವನ್ನು ಹಿಂದುಳಿದ ವರ್ಗಕ್ಕೆ ನೀಡುವ ಬಗ್ಗೆ ಈಗಾಗಲೇ ನಿರ್ಧಾರವಾಗಿದ್ದು ಪೂಜಾರಿ ವಿಧಾನ ಪರಿಷತ್ ನಲ್ಲಿ ಬಿಜೆಪಿಯ ಹೊಣೆ ಹೊರಲಿದ್ದಾರೆ. ಒಟ್ಟಿನಲ್ಲಿ ಪಂಚರಾಜ್ಯಗಳ ಚುನಾವಣೆ ಬ್ಯುಸಿ ನಡುವೆಯೂ ರಾಜ್ಯದ ಹಿಂದುಳಿದ ವರ್ಗಗಳ ನಾಯಕರ ಕರೆಸಿ ವರಿಷ್ಠರು ಭೇಟಿ ಮಾಡ್ತಿರೋದು ಸಾಕಷ್ಟು ಮಹತ್ವ ಪಡೆದಿದೆ.

KS Eshwarappa Karnataka State BJP President position, Has Prime Minister Modi kept his promise to KS Eshwarappa ?

Comments are closed.