ಲೋಕಸಭಾ ಚುನಾವಣೆ 2023 : ಕಾಂಗ್ರೆಸ್‌ನಿಂದ ಉಡುಪಿ – ಚಿಕ್ಕಮಗಳೂರಿಗೆ ಜಯಪ್ರಕಾಶ್‌ ಹೆಗ್ಡೆ, ದಕ್ಷಿಣ ಕನ್ನಡಕ್ಕೆ ಹರೀಶ್‌ ಕುಮಾರ್‌ ಕಣಕ್ಕೆ ?

ಕಾಂಗ್ರೆಸ್‌ ಪಕ್ಷದಿಂದ ಉಡುಪಿ - ಚಿಕ್ಕಮಗಳೂರು (Udupi Chikmagalur Lok Sabha constituency) ಹಾಗೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ (Dakshin Kannada Lok Sabha constituency) ಅಚ್ಚರಿಯ ಹೆಸರುಗಳು ಕೇಳಿಬಂದಿದ್ದು, ಬಿಜೆಪಿ ಸೇರಿದ್ದ ಕೆ.ಜಯಪ್ರಕಾಶ್‌ ಹೆಗ್ಡೆ (K Jayaprakash Hegde ) ಅವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಫ್ಲ್ಯಾನ್‌ ಮಾಡಿಕೊಂಡಿದೆ.

ಮಂಗಳೂರು / ಉಡುಪಿ : ಲೋಕಸಭಾ ಚುನಾವಣೆಗೆ (Lok Sabha Election 2024) ದಿನಗಣನೆ ಆರಂಭವಾಗಿದೆ. ಕಾಂಗ್ರೆಸ್ ತನ್ನ ಪಕ್ಷದ ಅಭ್ಯರ್ಥಿಗಳ ಆಯ್ಕೆಗಾಗಿ ಕಸರತ್ತು ನಡೆಸುತ್ತಿದೆ. ಈ ನಡುವಲ್ಲೇ ಕಾಂಗ್ರೆಸ್‌ ಪಕ್ಷದಿಂದ ಉಡುಪಿ – ಚಿಕ್ಕಮಗಳೂರು (Udupi Chikmagalur Lok Sabha constituency) ಹಾಗೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ (Dakshin Kannada Lok Sabha constituency) ಅಚ್ಚರಿಯ ಹೆಸರುಗಳು ಕೇಳಿಬಂದಿದ್ದು, ಬಿಜೆಪಿ ಸೇರಿದ್ದ ಕೆ.ಜಯಪ್ರಕಾಶ್‌ ಹೆಗ್ಡೆ (K Jayaprakash Hegde ) ಅವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಫ್ಲ್ಯಾನ್‌ ಮಾಡಿಕೊಂಡಿದೆ.

ವಿಧಾನಸಭಾ ಚುನಾವಣೆಯಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ ಕೇವಲ 2ಸ್ಥಾನಗಳಲ್ಲಿ ಗೆಲುವು ಸಾಧಿಸಲು ಮಾತ್ರವೇ ಸಾಧ್ಯವಾಗಿತ್ತು. ಇದರ ಬೆನ್ಲಲ್ಲೇ ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್‌ ಪಕ್ಷ ತೆರೆ ಮರೆಯಲ್ಲೇ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಪ್ರಮುಖವಾಗಿ ಜಾತೀ ಲೆಕ್ಕಾಚಾರವನ್ನು ಮುಂದಿಟ್ಟು, ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಮಾಸ್ಟರ ಫ್ಲ್ಯಾನ್‌ ರೂಪಿಸಿಕೊಂಡಿದ್ದಾರೆ.

Lok Sabha Election 2024 Jayaprakash Hegde from Congress for Udupi-Chikkamagaluru, Harish Kumar for Dakshina Kannada
Image Credit to Original Source

ಕರಾವಳಿ ಭಾಗದ ಪ್ರತಿಷ್ಠಿತ ಕ್ಷೇತ್ರ ಎನಿಸಿಕೊಂಡಿರುವ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್‌ ಹೆಗ್ಡೆ ಅವರು ಕಣಕ್ಕೆ ಇಳಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇನ್ನೊಂದೆಡೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ (MLC Harish Kumar) ಅವರ ಹೆಸರು ಮುಂಚೂಣಿಯಲ್ಲಿದೆ.‌

ಇದನ್ನೂ ಓದಿ : ಹಾದಿ ಬೀದಿಯಲ್ಲಿ ಪಕ್ಷದ ವಿಚಾರ ಚರ್ಚೆ ಬೇಡ: ರಾಜ್ಯ ಕಾಂಗ್ರೆಸ್ಸಿಗರಿಗೆ ಹೈಕಮಾಂಡ್ ಚಾಟಿ

ಕೆ.ಜಯಪ್ರಕಾಶ್‌ ಹೆಗ್ಡೆ ಅವರು ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರರಾಗಿ ಮೆರೆದಿದ್ದರು. ಒಂದು ಬಾರಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಸಂಸತ್‌ ಪ್ರವೇಶಿಸಿದ್ದರು. ಕರ್ನಾಟಕ ರಾಜ್ಯ ಸರಕಾರದ ಸಚಿವರಾಗಿ, ಸದ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾಂಗ್ರೆಸ್‌ ಪಕ್ಷದ ಜೊತೆಗೆ ಮುನಿಸಿಕೊಂಡು ಬಿಜೆಪಿ ಸೇರಿದ್ದ ಮಾಜಿ ಸಚಿವ ಕೆ.ಜಯಪ್ರಕಾಶ್‌ ಹೆಗ್ಡೆ ಅವರು ಇದೀಗ ಮತ್ತೆ ಕಾಂಗ್ರೆಸ್‌ ಸೇರ್ಪಡೆ ಆಗಲಿದ್ದಾರೆ ಅನ್ನೋ ಮಾತುಗಳಿ ಬಂದಿದೆ. ಈಗಾಗಲೇ ಕೆ.ಜಯಪ್ರಕಾಶ್‌ ಹೆಗ್ಡೆ ಅವರ ಜೊತೆಗೆ ಹಲವು ಸುತ್ತಿನ ಮಾತುಕತೆಯನ್ನು ನಡೆಸಿದ್ದರು.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಚುನಾವಣೆಗೆ ಇದೀಗ ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ. ಅಲ್ಲದೇ ಎಂಎಲ್ಸಿ ಹರೀಶ್ ಕುಮಾರ್ ಅವರ ಹೆಸರು ಹೈಕಮಾಂಡ್ ನ ಗಂಭೀರ ಪರಿಶೀಲನೆಯಲ್ಲಿ ಇದೆ ಎಂದು ತಿಳಿದುಬಂದಿದೆ. ಹರೀಶ್ ಕುಮಾರ್ ವಿಧಾನ ಪರಿಷತ್ತು ಸದಸ್ಯರಾಗಿ ಹಣಕಾಸಿನ ವಿಚಾರದಲ್ಲಿ ಸದನಲ್ಲಿ ಜನ ಸಾಮಾನ್ಯರ ಪರ ಪ್ರಶ್ನೆಗಳನ್ನು ಕೇಳಿದ್ದರು.

ಇದನ್ನೂ ಓದಿ : ಶೋಭಾ ಕರಂದ್ಲಾಜೆ ಬಿಜೆಪಿ ರಾಜ್ಯಾಧ್ಯಕ್ಷೆ, ಯತ್ನಾಳ್‌ ಪ್ರತಿಪಕ್ಷ ನಾಯಕ : ಲಿಂಗಾಯಿತರ ಮುನಿಸು, ಇಬ್ಬಾಗವಾಗುತ್ತಾ ಬಿಜೆಪಿ

ಹೈಕಮಾಂಡ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಕಣಕ್ಕೆ ಇಳಿಸಲಿದೆ ಎನ್ನಲಾಗುತ್ತಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಲ್ಲವ ಮತ್ತು ಬಂಟರ ನಡುವೆ ಪೈಪೋಟಿಯಿದೆ. ಉಡುಪಿ ಜಿಲ್ಲೆಯಿಂದ ಬಂಟ ಅಭ್ಯರ್ಥಿಗೆ ಟಿಕೆಟ್‌ ನೀಡಿದ್ರೆ, ದಕ್ಷಿಣ ಕನ್ನಡ ಜಿಲ್ಲೆಯಿಂದ ಬಿಲ್ಲವ ಅಭ್ಯರ್ಥಿ ಕಣಕ್ಕೆ ಇಳಿಯವುದು ಖಚಿತ.

Lok Sabha Election 2024 Jayaprakash Hegde from Congress for Udupi-Chikkamagaluru, Harish Kumar for Dakshina Kannada
Image Credit to Original Source

ಹೀಗಾಗಿ ಉಡುಪಿ – ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಕೆ. ಜಯಪ್ರಕಾಶ್‌ ಹೆಗ್ಡೆ ಅವರಿಗೆ ಟಿಕೆಟ್‌ ನೀಡಿದ್ರೆ ಬಂಟ ಸಮುದಾಯಕ್ಕೆ ಬೆಂಬಲ ನೀಡಿದಂತೆ ಆಗಲಿದೆ. ಒಂದೊಮ್ಮೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಹರೀಶ್‌ ಕುಮಾರ್‌ ಕಣಕ್ಕೆ ಇಳಿಯಲಿದ್ದಾರೆ

ಉಡುಪಿ ಲೋಕಸಭಾ ಕ್ಷೇತ್ರದಿಂದ ಕೆ.ಜಯಪ್ರಕಾಶ್‌ ಹೆಗ್ಡೆ ಅವರ ಜೊತೆಗೆ ಕಾಂಗ್ರೆಸ್‌ ಪಕ್ಷದಿಂದ ವಿನಯ ಕುಮಾರ್‌ ಸೊರಕೆ ಹೆಸರು ಕೇಳಿಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಹರೀಶ್‌ ಕುಮಾರ್‌ ಮಾತ್ರವಲ್ಲದೇ ಬಂಟ ಸಮುದಾಯ ಮಂಜುನಾಥ ಭಂಡಾರಿ ಅವರ ಹೆಸರು ಮುಂಚೂಣಿಯಲ್ಲಿದೆ. ಒಂದೊಮ್ಮೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಮಂಜುನಾಥ್‌ ಭಂಡಾರಿ ಅವರು ಕಣಕ್ಕೆ ಇಳಿದ್ರೆ ಉಡುಪಿಯಿಂದ ವಿನಯ ಕುಮಾರ್‌ ಸೊರಕೆ ಸ್ಪರ್ಧಿಸುವುದು ಗ್ಯಾರಂಟಿ.

ಇದನ್ನೂ ಓದಿ : ಡಿಕೆ ಶಿವಕುಮಾರ್ ಗೆ ಮತ್ತೆ ಸಿಬಿಐ ಸಂಕಷ್ಟ: ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸದ್ಯ ಶೋಭಾ ಕರಂದ್ಲಾಜೆ ಹಾಗೂ ದಕ್ಷಿಣ ಕನ್ನಡದಿಂದ ನಳಿನ್‌ ಕುಮಾರ್‌ ಕಟೀಲು ಸಂಸದರಾಗಿ ಆಯ್ಕೆಯಾಗಿದ್ದರು. ಇದೀಗ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆ ಅವರೇ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುವುದು ಖಚಿತ. ಆದರೆ ಪಕ್ಷದ ಕಾರ್ಯಕರ್ತರ ವಿರೋಧ, ಅಭಿವೃದ್ದಿಯಲ್ಲಿನ ಹಿನ್ನಡೆ ಶೋಭಾ ಕರಂದ್ಲಾಜೆ ಮುಗುವಾಗುವ ಸಾಧ್ಯತೆಯಿದೆ.

ಶೋಭಾ ಕರಂದ್ಲಾಜೆ ಉಡುಪಿ – ಚಿಕ್ಕಮಗಳೂರು ಜಿಲ್ಲೆಯಿಂದ ಸ್ಪರ್ಧೆ ಮಾಡದೇ ಇದ್ರೆ, ಪ್ರಮೋದ್‌ ಮಧ್ವರಾಜ್‌ ಅವರು ಕಣಕ್ಕೆ ಇಳಿಯವುದು ಖಚಿತ. ಇನ್ನು ನಳೀನ್‌ ಕುಮಾರ್‌ ಕಟೀಲ್‌ ಸ್ಥಾನ ಕೂಡ ಭದ್ರವಾಗಿದೆ. ಆದರೆ ಬಿಜೆಪಿಯಿಂದ ಹಲವು ಹೆಸರುಗಳು ಕೇಳಿಬರುತ್ತಿವೆ.

Lok Sabha Election 2024: Jayaprakash Hegde from Congress for Udupi-Chikkamagaluru, Harish Kumar for Dakshina Kannada ?

Comments are closed.