KSRTC Bus Accident : ಕಬ್ಬಿನ ಗದ್ದೆಗೆ ನುಗಿದ ಕೆಎಸ್‌ಆರ್‌ಟಿಸಿ ಬಸ್‌ : ಪ್ರಯಾಣಿಕರು ಅಪಾಯದಿಂದ ಪಾರು

ಬೆಳಗಾವಿ : (KSRTC Bus Accident)ರಸ್ತೆಯಲ್ಲಿ ಚಲಿಸುತ್ತಿದ್ದ ಕೆಎಸ್ಆರ್ ಟಿಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಕಬ್ಬಿನ ಗದ್ದೆಗೆ ನುಗ್ಗಿದ ಘಟನೆ ಬೆಳಗಾವಿಯ ಯರಗಟ್ಟಿ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ ನಡೆದಿದೆ. ಬಸ್ಸಿನಲ್ಲಿ ಸುಮಾರು 3oಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದ, ಎಲ್ಲರೂ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

(KSRTC Bus Accident)ಬೆಳಗಾವಿ ಜಿಲ್ಲೆಯ ಸೋಮಾಪುರ ಗ್ರಾಮದಿಂದ ಹೊರಟ ಬಸ್ ತಲ್ಲೂರ ಗ್ರಾಮಕ್ಕೆ ಚಲಿಸುತ್ತಿತ್ತು. ಈ ವೇಳೆಯಲ್ಲಿ ಬಸ್ಸಿನ ಬ್ರೇಕ್ ಫೇಲ್ ಆಗಿದೆ. ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ಗೆ ಢಿಕ್ಕಿ ಹೊಡೆದ ಬಸ್ ತಲ್ಲೂರು ಗ್ರಾಮದ ಪಕಾಲಿ ಎಂಬರಿಗೆ ಸೇರಿದ ಕಬ್ಬಿನ ಗದ್ದೆಗೆ ನುಗ್ಗಿದೆ. ಬಸ್ ಚಾಲಕ ಸೇರಿದಂತೆ ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ಯರಹಟ್ಟಿ ತಾಲೂಕಿನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.

ಇದನ್ನೂ ಓದಿ : Bihar Accident :ಪೊಲೀಸ್ ವಾಹನಕ್ಕೆ ಬೈಕ್ ಢಿಕ್ಕಿ, ಮೂವರು ಸಾವು, ಓರ್ವ ಸಜೀವ ದಹನ

ಇದನ್ನೂ ಓದಿ : Aircraft Crashed MiG-29K : ವಿಮಾನ ಅಪಘಾತ; ಗೋವಾದಲ್ಲಿ MiG-29K ಯುದ್ಧ ವಿಮಾನ ಪತನ

ಇದನ್ನೂ ಓದಿ : Himanta Biswa:ಘೇಂಡಾಮೃಗಕ್ಕೆ ಟ್ರಕ್‌ ಢಿಕ್ಕಿ : ವಿಡಿಯೋ ವೈರಲ್‌

ಮೇಲ್ನೋಟಕ್ಕೆ ಬಸ್ಸಿನ ಬ್ರೇಕ್ ಫೇಲ್ ಆಗಿ ಈ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ. ಆದರೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಬಸ್ ಚಾಲಕ ಬಸ್ಸನ್ನು ಕಬ್ಬಿನ ಗದ್ದೆಗೆ ನುಗ್ಗಿಸಿರುವುದರಿಂದ ಬಾರೀ ದುರಂತವೊಂದು ತಪ್ಪಿದಂತಾಗಿದೆ. ಆದರೆ ಕಬ್ಬಿನ ಬೆಳೆಗೆ ಹಾನಿ ಉಂಟಾಗಿದೆ. ಬಸ್ಸಿನಲ್ಲಿ ತಾಂತ್ರಿಕ ದೋಷ ಮೊದಲೇ ಇತ್ತಾ, ಇಲ್ಲಾ ಬಸ್ ಪ್ರಯಾಣದ ವೇಳೆಯಲ್ಲಿ ಬ್ರೇಕ್ ಫೇಲ್ ಆಗಿದ್ಯಾ ಅನ್ನೋದು ತನಿಖೆಯ ನಂತರವಷ್ಟೇ ತಿಳಿದು ಬರಬೇಕಾಗಿದೆ.

KSRTC bus entered a sugarcane field: Passengers escaped unharmed

Comments are closed.