ಕೋಟೇಶ್ವರದಲ್ಲಿ ಹೆದ್ದಾರಿಗೆ ಉರುಳಿ ಬಿತ್ತು ಬೃಹತ್ ನೀರಿನ ಓವರ್ ಹೆಡ್ : ಸತತ 9 ಗಂಟೆಗಳ ಕಾರ್ಯಾಚರಣೆ ಸಕ್ಸಸ್ ಆಯ್ತು: Live Video

ಕುಂದಾಪುರ : ನಿರುಪಯುಕ್ತವಾಗಿದ್ದ ನೀರಿನ ಬೃಹತ್ ಟ್ಯಾಂಕ್ (huge Overhead tank spilled) ವೊಂದನ್ನು ಸತತ 9 ಗಂಟೆಗಳ ಕಾರ್ಯಾಚರಣೆಯ ಮೂಲಕ ತೆರವುಗೊಳಿಸಲಾಗಿದೆ. ರಸ್ತೆಯ ಪಕ್ಕದಲ್ಲಿ ಕಳೆದ ಹದಿನೈದು ವರ್ಷಗಳಿಂದ ಉಪಯೋಗವಿಲ್ಲ ಟ್ಯಾಂಕ್ ಕೊನೆಗೂ ಹೆದ್ದಾರಿಗೆ ಉರುಳಿ ಬಿದ್ದಿದೆ. ಅಪಾಯವನ್ನು ಆಹ್ವಾನಿಸುತ್ತಿದ್ದ ಟ್ಯಾಂಕ್ ತೆರವಿನಿಂದಾಗಿ ಈ ಭಾಗದ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮ ಪಂಚಾಯತ್ ಎದುರಿನಲ್ಲಿರುವ ಗ್ರಾಮಕರಣಿಕರ ಕಚೇರಿಯ ಹಿಂಭಾಗದಲ್ಲಿ ಕುಡಿಯುವ ನೀರಿನ ಯೋಜನೆಯ ಅಡಿಯಲ್ಲಿ 1986ರಲ್ಲಿ ನೀರಿನ ಬೃಹತ್ ಟ್ಯಾಂಕ್ ನ್ನು ನಿರ್ಮಾಣ ಮಾಡಲಾಗಿತ್ತು. ಈ ಟ್ಯಾಂಕ್‌ 2 ಲಕ್ಷ ಲೀಟರ್ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿತ್ತು. ಸಾಕಷ್ಟು ವರ್ಷಗಳ ಕಾಲ ಜನರಿಗೆ ಕುಡಿಯುವ ನೀರನ್ನು ಒದಗಿಸುತ್ತಿದ್ದ ಓವರ್ ಹೆಡ್ ಟ್ಯಾಂಕ್ ಕಳೆದ ಹದಿನೈದು ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪಿತ್ತು. ಹೀಗಾಗಿ ಈ ಟ್ಯಾಂಕ್ ಮೂಲಕ ನೀರು ಸರಬರಾಜು ಮಾಡುವುದನ್ನು ಗ್ರಾಮ ಪಂಚಾಯತ್ ನಿಲ್ಲಿಸಿತ್ತು. ರಾಷ್ಟ್ರೀಯ ಹೆದ್ದಾರಿಗೆ ಈ ಟ್ಯಾಂಕ್ ಹೊಂದಿಕೊಂಡು ಇರುವುದರಿಂದಾಗಿ ಅಪಾಯವನ್ನು ಆಹ್ವಾನಿಸುತ್ತಿತ್ತು.

ಈ ಹಿನ್ನೆಲೆಯಲ್ಲಿ ಕೋಟೇಶ್ವರ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಓವರ್ ಹೆಡ್ ಟ್ಯಾಂಕ್ ತೆರವು ಕುರಿತು ನಿರ್ಣಯಕೈಗೊಳ್ಳಲಾಗಿತ್ತು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನೀಡಿದ ಸಾಮರ್ಥ್ಯ ವರದಿಯ ಆಧಾರದ ಹಿನ್ನೆಲೆಯಲ್ಲಿ ಟ್ಯಾಂಕ್ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು. ಪೊಲೀಸ್ ಇಲಾಖೆ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಆರೋಗ್ಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮೆಸ್ಕಾಂ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಸತತ ಒಂಬತ್ತು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಟ್ಯಾಂಕ್ ತೆರವು ಮಾಡಲಾಗಿತ್ತು.

https://www.youtube.com/watch?v=T4igvtZv2oU

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಟ್ಯಾಂಕ್ ನಿರ್ಮಾಣಗೊಂಡಿದ್ದು, ಇನ್ನೊಂದು ಕಡೆಯಲ್ಲಿ ಕೋಟೇಶ್ವರ ಪೇಟೆ ವರೆಗೂ ವ್ಯಾಪಿಸಿತ್ತು. ಒಂದೊಮ್ಮೆ ಟ್ಯಾಂಕ್ ಉರುಳಿ ಬಿದ್ರೆ ಸಾಕಷ್ಟು ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಈ ಹಿನ್ನೆಲೆಯಲ್ಲಿ ಟ್ಯಾಂಕ್ ಸುತ್ತಮುತ್ತಲಿನ 150 ಮೀಟರ್ ವ್ಯಾಪ್ತಿಯಲ್ಲಿನ ಅಂಗಡಿ ಮುಂಗಟ್ಟುಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಮುಚ್ಚಲಾಗಿತ್ತು. ಬೆಳಿಗ್ಗೆ 7 ಗಂಟೆಯಿಂದಲೇ ತಂಡ ಕ್ರೇನ್, ರೋಪ್ ಸಹಾಯದಿಂದ ಕಾರ್ಯಾಚರಣೆಯನ್ನು ನಡೆಸಲಾಯಿತು. ಇನ್ನು ರಾಷ್ಟ್ರೀಯ ಹೆದ್ದಾರಿ ಒಂದು ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ಒಂದೇ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಇದನ್ನೂ ಓದಿ : Uttar Pradesh : ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದ ಬಾಲಕಿ ; ಕೊಲ್ಲಲು ಮುಂದಾದ ತಾಯಿ ಮತ್ತು ಸಹೋದರಿ

ಇದನ್ನೂ ಓದಿ : ಉಜ್ಜಯಿನಿಯಲ್ಲಿ ʼಮಹಾಕಾಲ ಲೋಕʼ : ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ

huge Overhead tank spilled onto the highway in Koteshwara, 9 consecutive successful operations

Comments are closed.