KSRTC Bus Problems : ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಕಲ್ಪಿಸಲು ಆಗ್ರಹ : ಕುಂದಾಪುರದಲ್ಲಿ ಎಬಿವಿಪಿ ಪ್ರತಿಭಟನೆ

KSRTC Bus Problems : ಕುಂದಾಪುರ : ವಿದ್ಯಾರ್ಥಿಗಳು ಸಂಚಾರಕ್ಕೆ ಸಾರ್ವಜನಿಕ ಸಾರಿಗೆಯನ್ನು ಅವಲಂಭಿಸಿದ್ದಾರೆ. ಆದರೆ ಕುಂದಾಪುರ ಹಾಗೂ ಬೈಂದೂರು ತಾಲೂಕುಗಳ ನಡುವೆ ಕೆಎಸ್‌ಆರ್‌ಟಿಸಿ ಬಸ್ಸು (KSRTC Bus ) ಗಳ ಸಂಖ್ಯೆ ಅಗತ್ಯಕ್ಕಿಂತ ಕಡಿಮೆಯಿದೆ

KSRTC Bus Problems : ಕುಂದಾಪುರ : ವಿದ್ಯಾರ್ಥಿಗಳು ಸಂಚಾರಕ್ಕೆ ಸಾರ್ವಜನಿಕ ಸಾರಿಗೆಯನ್ನು ಅವಲಂಭಿಸಿದ್ದಾರೆ. ಆದರೆ ಕುಂದಾಪುರ ಹಾಗೂ ಬೈಂದೂರು ತಾಲೂಕುಗಳ ನಡುವೆ ಕೆಎಸ್‌ಆರ್‌ಟಿಸಿ ಬಸ್ಸು (KSRTC Bus ) ಗಳ ಸಂಖ್ಯೆ ಅಗತ್ಯಕ್ಕಿಂತ ಕಡಿಮೆಯಿದೆ. ಇನ್ನೂ ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ಕೆಎಸ್‌ಆರ್‌ಟಿಸಿ ಬಸ್‌ ಸೌಕರ್ಯವನ್ನು ಸಮಪರ್ಕವಾಗಿ ಒದಗಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಎಬಿವಿಪಿ (ABVP) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕುಂದಾಪುರದ ನೇತೃತ್ವದಲ್ಲಿ ಕುಂದಾಪುರದ ಶಾಸ್ತ್ರೀ ಸರ್ಕಲ್‌ ಬಳಿಯಲ್ಲಿ ಪ್ರತಿಭಟನೆ ನಡೆಸಿ ವಿದ್ಯಾರ್ಥಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರಾವಳಿ ಭಾಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ ಬಸ್ಸುಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಶಾಲೆಗೆ ತಲುಪಲು ಸಾಧ್ಯವಾಗುತ್ತಿಲ್ಲ ಎಂಬ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ : ಕನ್ನಡದಲ್ಲೇ ಐಎಎಸ್ ಬರೆಯಬೇಕಾ ? ಇಲ್ಲಿದೆ ಸರಳವಾದ ಟಿಪ್ಸ್

ಕುಂದಾಪುರ ಡಿಪೋದಿಂದ ಹೊರಡುವ ಕೆಲವು ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಓಡಾಟ ನಿಲ್ಲಿಸಿದ್ರೆ, ಇನ್ನೂ ಕೆಲವು ಕಡೆಗಳಲ್ಲಿ ಸಮಯ ಬದಲಾವಣೆ ಮಾಡಲಾಗಿದೆ. ಇದರಿಂದಾಗಿ ಬೆಳಗ್ಗೆ ಬಸ್ಸುಗಳಲ್ಲಿ ನೂಕು ನುಗ್ಗಲು ಉಂಟಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಬಸ್ಸುಗಳಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವಶ್ಯಕತೆ ಇರುವ ಮಾರ್ಗಗಳಲ್ಲಿ ಒಂದು ವಾರಗಳ ಒಳಗಾಗಿ ಬಸ್ಸುಗಳನ್ನು ಓಡಿಸಬೇಕು. ಇಲ್ಲವಾದ್ರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.

ಕುಂದಾಪುರ – ಹೆಮ್ಮಾಡಿ- ವಂಡ್ಸೆ – ಕೊಲ್ಲೂರು – ಬೈಂದೂರು ಮಾರ್ಗ. ಕುಂದಾಪುರ – ಉದಯ ನಗರ, ಕುಂದಾಪುರ- ಆಜ್ರಿ- ಸಿದ್ದಾಪುರ- ಉಡುಪಿ, ಕುಂದಾಪುರ ಸಿದ್ದಾಪುರ- ಹೊಸಂಗಡಿ, ಕುಂದಾಪುರ – ಗಂಗೊಳ್ಳಿ, ಕುಂದಾಪುರ – ಮಲ್ಲಿಕಟ್ಟೆ – ನೂಜಾಡಿ, ಕುಂದಾಪುರ – ಮಾವಿನ ಕಟ್ಟೆ – ಗುಲ್ವಾಡಿ – ಕೊಲ್ಲೂರು – ಬೈಂದೂರು ಮಾರ್ಗದಲ್ಲಿ ಬಸ್‌ ಸಂಚಾರ ನಿಲ್ಲಿಸಲಾಗಿದ್ರೆ, ಕೆಲವು ಕಡೆಗಳಲ್ಲಿ ಸಮಯ ಬದಲಾವಣೆ ಮಾಡಲಾಗಿದೆ.

ಇದನ್ನೂ ಓದಿ : Karnataka New Schools : ಹೊಸ ಶಾಲೆಗಳಿಗೆ ಇನ್ನಿಲ್ಲದ ಬೇಡಿಕೆ: ಅನುಮತಿ ಕೋರಿ ಸಲ್ಲಿಕೆಯಾಗಿದೆ ಸಾವಿರಾರು ಅರ್ಜಿ

ಇಷ್ಟೇ ಅಲ್ಲದೇ ಕುಂದಾಪುರ – ಮೂಡುಬಗೆ- ಆಜ್ರಿ – ಕಮಲಶಿಲೆ, ಕುಂದಾಪುರ – ಆಜ್ರಿ – ಸಿದ್ದಾಪುರ, ಕುಂದಾಪುರ – ಬೆಳ್ಳಾಲ- ಮೋರ್ಟ – ಕೆರಾಡಿ, ಕುಂದಾಪುರ – ಗಿಳಿಯಾರು – ಹೆಸ್ಕತ್ತೂರು, ಕುಂದಾಪುರ – ಮಾರಣಕಟ್ಟೆ – ಹಾಲಾಡಿ, ಕುಂದಾಪುರ – ಬೈಂದೂರು ಡಿಗ್ರಿ ಕಾಲೇಜು, ಕುಂದಾಪುರ – ವಾಲ್ಲೂರು – ಕೊಲ್ಲೂರು, ಕುಂದಾಪುರ – ಅರೆಹೊಳೆ – ಯರುಕೋಣೆ – ಕೊಲ್ಲೂರು – ಬೈಂದೂರು- ಗಂಟಿಹೊಳೆ – ಬೋಳಂಬಳ್ಳಿ ಮಾರ್ಗದಲ್ಲಿಯೂ ಇದೇ ಸಮಸ್ಯೆಯಿದೆ.

KSRTC Bus Problems for Students ABVP Protest in Kundapura
Image Credit to Original Source

ಇದನ್ನೂ ಓದಿ : ರಾಜ್ಯ ಸರ್ಕಾರ, ಬಿಬಿಎಂಪಿಯ ಮತ್ತೊಂದು ಎಡವಟ್ಟು: ಶಿಕ್ಷಕರ ಆಯ್ಕೆ ಹೊಣೆ ಸೆಕ್ಯೂರಿಟಿ ಏಜೆನ್ಸಿಗೆ

ಕುಂದಾಪುರ- ಅಮಾಸೆಬೈಲು – ತೊಂಬಟ್ಟು, ಕುಂದಾಪುರ – ನೇರಳೆಕಟ್ಟೆ – ಅಂಪಾರು- ಹಾಲಾಡಿ -ಚೋರಾಡಿ- ಕರ್ಕುಂಜೆ- ಉಡುಪಿ, ಕುಂದಾಪುರ – ಆಲೂರು ಹಾಗೂ ಕುಂದಾಪುರ – ಪಡುಕೋಣೆ ಮಾರ್ಗದಲ್ಲಿಯೂ ಇದೇ ಸಮಸ್ಯೆ ಇದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ಜಿಲ್ಲಾ ಸಂಚಾಲಕ ಗಣೇಶ್ ಪೂಜಾರಿ, ಸಹ ಸಂಚಾಲಕ ದರ್ಶನ್ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸಂಹಿತಾ ಮತ್ತು ಪ್ರಮುಖರಾದ ಆಕಾಶ್, ಅಜಿತ್ ಜೋಗಿ, ಶ್ರೀವತ್ಸ, ನವೀನ್, ರಮೇಶ್, ಲಕ್ಷ್ಮೀಕಾಂತ್, ಶಬರಿ, ರಾಜೇಶ್ವರಿ, ರಶ್ಮಿ, ವಿನಾಯಕ್  ಇತರರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು. ಒಟ್ಟಿನಲ್ಲಿ ಗ್ರಾಮೀಣ ಭಾಗಕ್ಕೆ ವರದಾನ ಆಗಬೇಕಾಗಿದ್ದ ಕೆಎಸ್‌ಆರ್‌ಟಿಸಿ ವಿದ್ಯಾರ್ಥಿಗಳ ಪಾಲಿಗೆ ಶಾಪವಾಗಿ ಪರಿಣಮಿಸಿದೆ.

KSRTC Bus Problems for Students ABVP Protest in Kundapura

Comments are closed.