KSRTC Bus Pass :ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿಕಲಚೇತನರಿಗೆ 2022ನೇ ಸಾಲಿಗೆ ವಿಶೇಷ ರಿಯಾಯಿತಿ ದರದಲ್ಲಿ ಪಾಸ್ನ್ನು ಹೊಂದಲು ಅರ್ಜಿ ಆಹ್ವಾನಿಸಿದೆ.ಜನವರಿ 1ನೇ ತಾರೀಖಿನಿಂದ 2022ರ ಡಿಸೆಂಬರ್ 31ರವರೆಗೂ ವಿಕಲಚೇತನರಿಗೆ ಅನ್ವಯವಾಗುವಂತೆ ಈ ಬಸ್ ಪಾಸ್ ಇರಲಿದೆ ಎಂದು ಕರ್ನಾಟಕ ರಸ್ತೆ ಸಾರಿಗೆ ನಿಗಮವು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
2021ನೇ ಸಾಲಿನಲ್ಲಿ ರಿಯಾಯಿತಿ ದರದಲ್ಲಿ ಬಸ್ ಪಾಸ್ ಪಡೆದ ವಿಕಲಚೇತನರಿಗೆ ಇನ್ನೊಂದು ಸಮಾಧಾನಕರ ಸುದ್ದಿಯನ್ನು ಕೆಎಸ್ಆರ್ಟಿಸಿ ನೀಡಿದೆ. ಅದೇನೆಂದರೆ ಡಿಸೆಂಬರ್ 31 -2021ರವರೆಗೆ ಮಾತ್ರ ಅನುಮತಿ ಇರುವ ಈಗಿನ ಪಾಸ್ಗಳನ್ನು ಮುಂದಿನ ವರ್ಷದ ಫೆಬ್ರವರಿ 28ರವರೆಗೂ ಬಳಕೆ ಮಾಡಬಹುದು ಎಂದು ಕೆಎಸ್ಆರ್ಟಿಸಿ ಹೇಳಿದೆ.

ಹೊಸ ಬಸ್ ಪಡೆಯಲು ಇಚ್ಛಿಸುವ ವಿಕಲಚೇತನರು ಸೇವಾಸಿಂಧು ಪೋರ್ಟಲ್ನ ಮುಖಾಂತರ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಸೂಕ್ತ ದಾಖಲೆಗಳ ಸಮೇತ ಅರ್ಜಿ ಸಲ್ಲಿಕೆ ಮಾಡಿದ ವಿಕಲಚೇತನರಿಗೆ 2022ರ ಜನವರಿ 17ರಿಂದ ಬಸ್ ಪಾಸ್ ವಿತರಣೆ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಕೆಎಸ್ಆರ್ಟಿಸಿ ಹೇಳಿದೆ. ಈ ಬಸ್ ಪಾಸ್ ಹೊಂದಲು ವಿಕಲಚೇತನರು 660 ರೂಪಾಯಿ ಶುಲ್ಕ ಪಾವತಿ ಮಾಡಬೇಕಿದೆ. ಇದನ್ನು ನಗದು ಇಲ್ಲವೇ ಡಿಡಿ ರೂಪದಲ್ಲಿ ಪಾವತಿ ಮಾಡಬಹುದಾಗಿದೆ.

ಈಗಾಗಲೇ ಪಾಸ್ಗಳನ್ನು ಹೊಂದಿರುವ ವಿಕಲಚೇತನರು ಆ ಪಾಸ್ಗಳನ್ನು ನವೀಕರಣ ಮಾಡಲು 2022ರ ಫೆಬ್ರವರಿ 28ರವರೆಗೆ ಅವಕಾಶ ನೀಡಲಾಗಿದೆ. ನೂತನ ಪಾಸ್ ವಿತರಣೆ ಮಾಡಲು ನಿರ್ದಿಷ್ಟ ಕಾಲಮಿತಿ ಇರೋದಿಲ್ಲ.ವಿಕಲಚೇತನರು ತಮ್ಮ ಅರ್ಜಿಗಳನ್ನು ಆನ್ಲೈನ್ನಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಜೆಪಿಜಿ ಅಥವಾ ಪಿಡಿಎಫ್ ನಮೂನೆಯಲ್ಲಿ ಆನ್ಲೈನ್ನಲ್ಲಿ ಅಡಕಗೊಳಿಸಬೇಕು ಎಂದು ಕೆಎಸ್ಆರ್ಟಿಸಿ ಸೂಚನೆ ನೀಡಿದೆ.
ಇದನ್ನು ಓದಿ : Madhuban Mein Radhika song : ಸನ್ನಿ ಕಿಚ್ಚು ಹಚ್ಚೋ ಹಾಡಿಗೆ ಬ್ರೇಕ್: ವಿವಾದಾತ್ಮಕ ಹಾಡು ಹಿಂಪಡೆದ ಸರೆಗಮ
ಇದನ್ನೂ ಓದಿ : Mehndi Ceremony Lathi charge : ಮೆಹಂದಿ ಮನೆಗೆ ನುಗ್ಗಿ ಕೋಟ ಪೊಲೀಸರ ದೌರ್ಜನ್ಯ : ಮದುಮಗ, ಮಹಿಳೆಯರ ಮೇಲೆ ಲಾಠಿ ಪ್ರಹಾರ
KSRTC Bus Pass invites applications for bus passes for disabled people