Covid vaccines :ಕೋವಿಡ್​ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ: ಮತ್ತೆರಡು ಲಸಿಕೆಗಳಿಗೆ ಕೇಂದ್ರದಿಂದ ಅನುಮೋದನೆ

Covid vaccines :ಒಮಿಕ್ರಾನ್​ ಆತಂಕ ಶುರುವಾದಾಗಿನಿಂದ ದೇಶದಲ್ಲಿ ಕೊರೊನಾ ಎರಡನೆ ಅಲೆಯ ಸಂದರ್ಭದಲ್ಲಿ ಉಂಟಾಗಿದ್ದ ಹೀನಾಯ ಪರಿಸ್ಥಿತಿ ಮರುಕಳಿಸ ಬಾರದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ನಾನಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್​ ಡೋಸ್​ ಹಾಗೂ ಮಕ್ಕಳಿಗೆ ಕೊರೊನಾ ಲಸಿಕೆ ಹೀಗೆ ನಾನಾ ಮಹತ್ವದ ಘೋಷಣೆಯನ್ನು ಮಾಡಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಗುಡ್​ ನ್ಯೂಸ್​ನ್ನು ದೇಶದ ಜನತೆಗೆ ನೀಡಿದೆ.


ದೇಶದಲ್ಲಿನ ಕೋವಿಡ್​ ವಿರುದ್ಧದ ಹೋರಾಟಕ್ಕೆ ಇದೀಗ ಹೊಸ 2 ಅಸ್ತ್ರಗಳು ಸೇರ್ಪಡೆಯಾಗಿವೆ..ಮತ್ತೆರಡು ಹೊಸ ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಅನುಮೋದನೆ ನೀಡಿದೆ. ಈ ಮೂಲಕ ಭಾರತದ ಕೊರೊನಾ ಲಸಿಕೆಗಳ ಬತ್ತಳಿಕೆಗೆ ಕೊವಾವ್ಯಾಕ್ಸ್​ ಹಾಗೂ ಕಾರ್ಬೆವ್ಯಾಕ್ಸ್​ ಸೇರ್ಪಡೆಯಾದಂತಾಗಿದೆ. ಇದರ ಜೊತೆಯಲ್ಲಿ ಆ್ಯಂಟಿ ವೈರಲ್​ ಡ್ರಗ್​ ಮೊಲ್ನುಪಿರವಿರ್​ಗೂ ಕೇಂದ್ರ ಆರೋಗ್ಯ ಸಚಿವಾಲಯ ಹಸಿರು ನಿಶಾನೆ ತೋರಿದೆ. 18 ವರ್ಷ ಮೇಲ್ಪಟ್ಟ ವಯಸ್ಕರಿಗೆ ಈ ಲಸಿಕೆಗಳು ಹಾಗೂ ಔಷಧವನ್ನು ಬಳಕೆ ಮಾಡಲಾಗಿದೆ.

ಈ ವಿಚಾರವಾಗಿ ಟ್ವೀಟ್​ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಶುಭಾಶಯಗಳು ಭಾರತ..!, ಕೋವಿಡ್​ 19 ವಿರುದ್ಧದ ಭಾರತದ ಹೋರಾಟಕ್ಕೆ ಇನ್ನಷ್ಟು ಬಲ ನೀಡುವ ಸಲುವಾಗಿ ಸಿಡಿಎಸ್​ಸಿಓ ಒಂದೇ ದಿನದಲ್ಲಿ ಮೂರು ಅನುಮೋದನೆಗಳನ್ನು ನೀಡಿದೆ. ಕಾರ್ಬೆವ್ಯಾಕ್ಸ್​ ಲಸಿಕೆ, ಕೊವಾವ್ಯಾಕ್ಸ್​ ಲಸಿಕೆ ಹಾಗೂ ಆ್ಯಂಟಿ ವೈರಲ್​ ಡ್ರಗ್​ ಮಾಲ್ನುಪಿರವಿರ್​​ಗಳನ್ನು ತುರ್ತು ಪರಿಸ್ಥಿತಿಗಳಲ್ಲಿ ನಿರ್ಬಂದಿತ ಬಳಕೆಗೆ ಅನುಮೋದನೆ ನೀಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಒಂದೇ ದಿನದಲ್ಲಿ ಎರಡು ಲಸಿಕೆಗಳಿಗೆ ಅನುಮೋದನೆ ನೀಡುವ ಮೂಲಕ ದೇಶದಲ್ಲಿ ಒಟ್ಟು 8 ಕೊರೊನಾ ಲಸಿಕೆಗಳಿಗೆ ತುರ್ತು ಅನುಮೋದನೆ ಸಿಕ್ಕಂತಾಗಿದೆ. ಸೀರಂ ಇನ್​ಸ್ಟಿಟ್ಯೂಟ್​​ನ ಕೋವಿಶೀಲ್ಡ್​, ಭಾರತ್​ ಬಯೋಟೆಕ್​ನ ಕೊವ್ಯಾಕ್ಸಿನ್​, ರಷ್ಯಾದ ಸ್ಪುಟ್ನಿಕ್​ ವಿ, ಅಮೆರಿಕದ ಮಾಡೆರ್ನಾ, ಜಾನ್ಸ್​ನ್​ & ಜಾನ್ಸನ್​ ಕೊರೊನಾ ಲಸಿಕೆ ಹಾಗೂ ಜೈಡಸ್​​​ ಕ್ಯಾಡಿಲಾದ ZyCoV-D ಲಸಿಕೆಗಳಿಗೆ ಈ ಹಿಂದೆಯೇ ಅನುಮೋದನೆ ದೊರಕಿದೆ. ಇದೀಗ ಈ ಸಾಲಿಗೆ ಕೊವಾವ್ಯಾಕ್ಸ್​ ಹಾಗೂ ಕಾರ್ಬೆವ್ಯಾಕ್ಸ್​ ಕೂಡ ಸೇರ್ಪಡೆಯಾಗಿದೆ.

ಇದನ್ನು ಓದಿ : Kids register Covid vaccine: ಜನವರಿಯಿಂದ ಮಕ್ಕಳಿಗೆ ಕೊರೊನಾ ಲಸಿಕೆ ನೋಂದಣಿಗೆ ಅನುಮತಿ..!

ಇದನ್ನೂ ಓದಿ: Madhuban Mein Radhika song : ಸನ್ನಿ ಕಿಚ್ಚು ಹಚ್ಚೋ ಹಾಡಿಗೆ ಬ್ರೇಕ್: ವಿವಾದಾತ್ಮಕ ಹಾಡು ಹಿಂಪಡೆದ ಸರೆಗಮ

2 more Covid vaccines Covovax and Corbevax, and anti-viral drug Molnupiravir cleared for use in India

Comments are closed.