Kundapur Gold and Silver Workers Association : ಕುಂದಾಪುರ : ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘ ( ರಿ ) ಕುಂದಾಪುರ ಇದರ ನೂತನ ಅಧ್ಯಕ್ಷರಾಗಿ ಬಿ.ಕುಶ ಕುಮಾರ್ (Bannadi Kusha Kumar) ಅವರು ಆಯ್ಕೆಯಾಗಿದ್ದಾರೆ. ಭಾನುವಾರ ಕುಂದಾಪುರದ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ನಡೆದ 16 ನೇ ವಾರ್ಷಿಕೋತ್ಸವ ಹಾಗೂ ಪದಪ್ರಧಾನ ಸಮಾರಂಭದಲ್ಲಿ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘ ( ರಿ ) ಕುಂದಾಪುರ ಇದರ ಅಧ್ಯಕ್ಷರಾದ ರಾಜೇಶ್ ಆಚಾರ್ಯ ಮರವಂತೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಖ್ಯಾತ ರಥಶಿಲ್ಪಿ ರಾಜಗೋಪಾಲ್ ಗೋಪಾಲ್ ಆಚಾರ್ಯ ಕೋಟೇಶ್ವರ ಅವರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಉಜಿರೆ ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ ಕರುಣಾಕರ ಜೈನ್, ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀಧರ ಆಚಾರ್ಯ ವಡೇರಹೋಬಳಿ, ಕುಂದಾಪುರ ಜುವೆಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ನಾಗರಾಜ್ ಶೇಟ್, ಚಿನ್ನ ಬೆಳ್ಳಿ ಕೆಲಸಗಾರರ ಸಂಘ ಉಡುಪಿ ಇದರ ಅಧ್ಯಕ್ಷರಾದ ರವಿಚಂದ್ರ ಮಾರಾಳಿ, ಕುಂದಾಪುರ ಉದಯ ಜುವೆಲ್ಲರ್ಸ್ ಮಾಲಕ ಅಕ್ಷಯ್ ಶೇಟ್ ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಗೌರವಾಧ್ಯಕ್ಷ ರಾಘವೇಂದ್ರ ಆಚಾರ್ಯ ಖಜಾಂಜಿ ಓಂಕಾರ್ ಕೃಷ್ಣಯ್ಯ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಬಿ.ಕುಶ ಕುಮಾರ್ ಉಪಸ್ಥಿತರಿದ್ದರು.

ಚಿನ್ನ – ಬೆಳ್ಳಿ ಕೆಲಸಗಾರರ ಸಂಘದ ನೂತನ ಅಧ್ಯಕ್ಷರಾದ ಬಿ ಕುಶ ಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿ ಕೃಷ್ಣ ಆಚಾರ್ಯ ಕಟ್ಕೆರೆ ಅವರಿಗೆ ಅಧ್ಯಕ್ಷರಾದ ರಾಜೇಶ್ ಆಚಾರ್ಯ ಹಾಗೂ ರಾಘವೇಂದ್ರ ಆಚಾರ್ಯ ಅವರು ಪದಪ್ರಧಾನ ಮಾಡಿದ್ರು. ಸದಸ್ಯರ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ 90% ಅಧಿಕ ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನೆರವೇರಿತು.

ಅಲ್ಲದೇ ಹಿರಿಯ ಚಿನ್ನಬೆಳ್ಳಿ ಕೆಲಸಗಾರರಾದ ಉಮೇಶ್ ಆಚಾರ್ಯ ಕುಂದಾಪುರ, ರಾಧಾಕೃಷ್ಣ ಆಚಾರ್ಯ ಅಮಾಸೆಬೈಲು, ಗುಂಡು ಆಚಾರ್ಯ ಸೈಬ್ರಕಟ್ಟೆ, ಗೋಪಾಲ್ ಕೃಷ್ಣ ಭಟ್ ಕುಂದಾಪುರ, ನಾಗೇಶ್ ಶೇಟ್ ಬಡಾಕೆರೆ ಅವರನ್ನು ಗೌರವಗಳೊಂದಿಗೆ ಸಮ್ಮಾನಿಸಲಾಯಿತು. ಸಂಘದ ಸದಸ್ಯರಿಗೆ ಜೀವವಿಮೆ (INSURANCE) ನೀಡಲಾಯಿತು.
ಇದನ್ನೂ ಓದಿ : ಕೋಟ ಉದ್ಯಮಿ ಮನೆಗೆ ಬಂದ ಆಗಂತುಕರು ! ಪೊಲೀಸರಿಂದ ತನಿಖೆ ಆರಂಭ

ಜೊತೆಗೆ ಸದಸ್ಯರ ಮಕ್ಕಳಿಗೆ ಪುಸ್ತರ ವಿತರಣೆ ಮಾಡಲಾಯಿತು. ಮೃತಪಟ್ಟ ಸಂಘದ ಸದಸ್ಯರೋರ್ವರ ಹೆಣ್ಣುಮಕ್ಕಳಿಗೆ 100000 ಸಾವಿರ ಬಾಂಡ್ ವಿತರಿಸಲಾಯಿತು. ಸಂಘದ ಸದಸ್ಯರಿಗಾಗಿ ನಡೆದ ವಿವಿದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಇದನ್ನೂ ಓದಿ : ಪ್ರಧಾನಿ ವಿಶ್ವಕರ್ಮ ಯೋಜನೆ : ಕುಶಲಕರ್ಮಿಗಳಿಗೆ ಸಿಗುತ್ತೆ 2 ಲಕ್ಷರೂ. ಸಬ್ಸಿಡಿ ಸಾಲ, ಅರ್ಜಿ ಸಲ್ಲಿಸುವುದು ಹೇಗೆ ?

ಸಮಾರಂಭದಲ್ಲಿ ಪಾಲ್ಗೊಂಡವರಿಗಾಗಿ ನಡೆದ ಅದೃಷ್ಟಶಾಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಂಘದ ಮಾಜಿ ಅಧ್ಯಕ್ಷರಾದ ಸುನಿಲ್ ಶೇಟ್ ಸ್ವಾಗತಿಸಿ, ಪದ್ಮನಾಭ ಆಚಾರ್ಯ ಬನ್ನಾಡಿ ಧನ್ಯವಾದ ಸಮರ್ಪಿಸಿದ್ದಾರೆ. ಸಂಘದ ಸದಸ್ಯರಿಂದ ಮಾಯಾಪುರಿ ಹಾಗೂ ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನ ಗೊಂಡಿತು.
ಇದನ್ನೂ ಓದಿ : ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿಸಬಹುದೇ ? ಆದರೆ ಈ ತಪ್ಪುಗಳನ್ನು ಮಾತ್ರ ಮಾಡಲೇ ಬೇಡಿ

ಚಿನ್ನ- ಬೆಳ್ಳಿ ಕೆಲಸಗಾರರ ಸಂಘದ ವಾರ್ಷಿಕೋತ್ಸವ, ಪದಪ್ರಧಾನ ಸಮಾರಂಭ ಹಾಗೂ ಯಕ್ಷಗಾನ ಕಾರ್ಯಕ್ರಮವನ್ನು ವೀಕ್ಷಿಸಲು News Next Kannada ಯೂಟ್ಯೂಬ್ ಚಾನೆಲ್ Subscribe ಮಾಡಿ
Kundapur Gold and Silver Workers Association Bannadi Kusha Kumar as a President