Tourist Spots in Mysore : ಮೈಸೂರು ದಸರಾ ನೋಡ್ಲಿಕ್ಕೆ ಹೋಗ್ತಾ ಇದ್ರೆ ಈ ಸ್ಥಳಗಳನ್ನು ನೋಡ್ಕೊಂಡು ಬನ್ನಿ

‘ಮೈಸೂರು ದಸರಾ ಎಷ್ಟೊಂದು ಸುಂದರ’ ಅನ್ನುವಂತೆ ಅರಮನೆ ನಗರಿ ಮೈಸೂರ್‌ನ ದಸರಾ (Mysore Dasara) ಬಹಳ ವಿಶೇಷವಾದದ್ದು. ಮೈಸೂರಿನ ದಸರಾ ಉತ್ಸವ ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿನ ಕಟ್ಟಡಗಳಲ್ಲಿ ರಾಜರ ಕಾಲದ ಪರಂಪರೆಯನ್ನು ನೋಡಬಹುದಾಗಿದೆ. 10 ದಿನಗಳ ಕಾಲ ನಡೆಯುವ ದಸರಾ ವೈಭವ ವರ್ಣಿಸಲು ಸಾಧ್ಯವೇ ಇಲ್ಲ. ಮೈಸೂರಿನ ಅರಮನೆಯಷ್ಟೇ ಅಲ್ಲ ಅದರ ಸುತ್ತ ಮುತ್ತ ಇರುವ ಸ್ಥಳಗಳು (Tourist Spots in Mysore) ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ವಿಶ್ವ ವಿಖ್ಯಾತ ಮೈಸೂರು ದಸರಾ ನೋಡಲು ಹೋಗುವುದಾದರೆ ಇಲ್ಲಿ ಹೇಳಿರುವ ಸ್ಥಳಗಳನ್ನು ನೋಡಿಕೊಂಡು ಬನ್ನಿ. ಈ ವರ್ಷದ ದಸರಾ ಪರಿವಾರದವರ ಜೊತೆ ಟ್ರಿಪ್‌ ಹೋಗುವುದರ ಮೂಲಕ ಸಂತೋಷದಿಂದ ಆಚರಿಸಿ.

ಮೈಸೂರು ದಸರಾ ವೀಕ್ಷಿಸುವುದರ ಜೊತೆಗೆ ಅದರ ಸುತ್ತಮುತ್ತಲಿನ ಸ್ಥಳಗಳನ್ನು ವೀಕ್ಷಿಸಬಹುದು. ಅಂತಹ ಸ್ಥಳಗಳ ಪಟ್ಟಿ ಇಲ್ಲಿದೆ :

ಮೈಸೂರು ಅರಮನೆ :
ಐತಿಹಾಸಿಕ ಮೈಸೂರಿನ ಅರಮನೆಯು ಅದರ ವಾಸ್ತುಶಿಲ್ಪದಿಂದಲೇ ಗುರುತಿಸಿಕೊಂಡಿದೆ. ಇದು ರಾಜರ ಕಾಲದ ಗತವೈಭವವನ್ನು ನೆನಪಿಸುತ್ತದೆ. ವಾಸ್ತುಶಿಲ್ಪದ ಬಗ್ಗೆ ಆಸಕ್ತಿ ಇರುವವರಿಗೆ ಇದು ಯೋಗ್ಯವಾದ ಸ್ಥಳ. ಸಂಜೆಯ ಹೊತ್ತಿನಲ್ಲಿ ಬೆಳಗುವ ದೀಪಗಳು ಮನಮೋಹಕವಾಗಿರುತ್ತದೆ.

ಚಾಮುಂಡಿ ಬೆಟ್ಟ :
ಮೈಸೂರಿನಿಂದ 13 ಕಿಲೋಮೀಟರ್‌ ದೂರದಲ್ಲಿ, 3300 ಅಡಿ ಎತ್ತರದಲ್ಲಿದೆ ಚಾಮುಂಡಿ ಬೆಟ್ಟ. ಚಾಮುಂಡಿ ದೇವತೆ ನೆಲೆಸಿರುವ ಪವಿತ್ರ ಚಾಮುಂಡೇಶ್ವರಿ ದೇವಸ್ಥಾನವು ಈ ಬೆಟ್ಟದ ಮೇಲಿದೆ. ಈ ದೇವಾಲಯವು ಮೈಸೂರಿನ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ.

ಲಲಿತ ಮಹಲ್‌ :
ಮೈಸೂರಿನ ಎರಡನೇ ಅತಿದೊಡ್ಡ ಅರಮನೆ ಲಲಿತ ಮಹಲ್‌. ಇದು ಚಾಮುಂಡಿ ಬೆಟ್ಟದ ಸಮೀಪವಿದೆ. ಇದನ್ನು ಬ್ರಿಟೀಷ್‌ ವೈಸ್‌ರಾಯ್‌ನ ವಿಶೇಷ ವಿಶ್ರಾಂತಿ ಸ್ಥಳವಾಗಿ ನಿರ್ಮಿಸಲಾಗಿತ್ತು. ಇದು ಶ್ವೇತವರ್ಣದಲ್ಲಿದ್ದು ಲಂಡನ್‌ನ ಸೈಂಟ್‌ ಪಾಲ್ಸ್‌ ಕ್ಯಾಥೆಡ್ರಲ್‌ ಅನ್ನು ಹೋಲುತ್ತದೆ. 1974 ರಲ್ಲಿ ಇದನ್ನು ಪಾರಂಪರಿಕ ಹೋಟೆಲ್‌ ಆಗಿ ಪರಿವರ್ತಿಸಲಾಗಿದೆ. ಪ್ರಸ್ತುತ ಇದು ಕರ್ನಾಟಕ ಸರ್ಕಾರದ ನಿರ್ವಹಣೆಯಲ್ಲಿದೆ.

ರೈಲ್ವೆ ಮ್ಯೂಸಿಯಮ್‌ :
ಮೈಸೂರಿನ ಮತ್ತೊಂದು ಆಕರ್ಷಣೀಯ ಸ್ಥಳವೆಂದರೆ ರೈಲ್ವೆ ಮ್ಯೂಸಿಯಂ. ಇದರಲ್ಲಿ ಭಾರತೀಯ ರೈಲ್ವೆಯ ಅಭಿವೃದ್ಧಿಯಲ್ಲಿನ ವಿವಿಧ ಹಂತಗಳನ್ನು ಚಿತ್ರಿಸುವ ಛಾಯಚಿತ್ರಗಳಿವೆ. ಜೊತೆಗೆ ಹಿಂದಿನ ಕಾಲದ ಇಂಜಿನ್‌ಗಳ ಪ್ರದರ್ಶನವೂ ಇದೆ. ಇದು ರೈಲು ಗಾಡಿಗಳ ಬಗ್ಗೆ ಕುತೂಹಲವಿರು ಮಕ್ಕಳು ನೋಡಲೇ ಬೇಕಾದ ಸ್ಥಳವಾಗಿದೆ.

ಇದನ್ನೂ ಓದಿ : Mysuru Dasara 2022 : ಪ್ರಧಾನಿ ಮೋದಿ ಮೈಸೂರು ದಸರಾಗೆ ವಿಸಿಟ್​ ನೀಡುವ ಬಗ್ಗೆ ಎಸ್​.ಟಿ ಸೋಮಶೇಖರ್​ ಸ್ಪಷ್ಟನೆ

ಇದನ್ನೂ ಓದಿ : Mysore Dasara 2022 : ಮೈಸೂರು ದಸರಾ : ಅರಮನೆ ನಗರಿಯಲ್ಲಿ 124 ಕಿ.ಮೀ ದೀಪಾಲಂಕಾರ

(Tourist Spots in Mysore, visit these places on the occasion of Dasara)

Comments are closed.