Queen Elizabeth II:ಬ್ರಿಟನ್​ ರಾಣಿಯ ಮರಣ ಪ್ರಮಾಣ ಪತ್ರದಲ್ಲಿ ಬಯಲಾಯ್ತು ಸಾವಿನ ನಿಖರ ಕಾರಣ

ಬ್ರಿಟನ್​ : Queen Elizabeth II : ಬ್ರಿಟನ್​ ರಾಣಿ ಎರಡನೇ ಎಲಿಜಬೆತ್​​​ ಸೆಪ್ಟೆಂಬರ್​ 8ರ ಮಧ್ಯಾಹ್ನ 3:10ರ ಸುಮಾರಿಗೆ ನಿಧನರಾಗಿದ್ದು ಎಲ್ಲರಿಗೂ ತಿಳಿದಿರುವ ವಿಚಾರ.ದೀರ್ಘಾವದಿಯ ರಾಣಿಯ ಅಂತ್ಯಕ್ರಿಯೆಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ವಿಶ್ವದ ಅನೇಕ ಗಣ್ಯಾತಿಗಣ್ಯರು ಆಗಮಿಸಿದ್ದರು. ಇದೀಗ ಎರಡನೇ ಎಲಿಜಬೆತ್​​ರ ಮರಣ ಪ್ರಮಾಣ ಪತ್ರ ಬಿಡುಗಡೆಯಾಗಿದ್ದು ರಾಣಿ ಎಲೆಜಬೆತ್​ ವೃದ್ಧಾಪ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಕಾರಣ ನೀಡಲಾಗಿದೆ. 96 ವರ್ಷ ವಯಸ್ಸಿನ ಎರಡನೇ ಎಲಿಜಬೆತ್​​​ ಸ್ಕಾಟಿಷ್​​ ಹೈಲ್ಯಾಂಡ್ಸ್​​ನಲ್ಲಿರುವ ಬಾಲ್ಮೋರಲ್​​ ಕ್ಯಾಸೆಲ್​ ಎಸ್ಟೇಟ್​ನಲ್ಲಿ ನಿಧನರಾಗಿದ್ದಾರೆ.

ಬ್ರಿಟೀಷ್​ ಇತಿಹಾಸದಲ್ಲಿಯೇ ಸುದೀರ್ಘ ಸೇವೆ ಸಲ್ಲಿಸಿದ ರಾಣಿ ಎಂಬ ಖ್ಯಾತಿಗೆ ಎರಡನೇ ಎಲಿಜಬೆತ್​ ಪಾತ್ರರಾಗಿದ್ದಾರೆ, 1952ರಿಂದ 70 ವರ್ಷಗಳ ಕಾಲ ಎರಡನೇ ಎಲಜಬೆತ್​​ ಬ್ರಿಟೀಷ್​ ಮುಖ್ಯಸ್ಥೆಯಾಗಿ ಆಳ್ವಿಕೆ ನಡೆಸಿದ್ದಾರೆ. ಸ್ಕಾಟ್ಲೆಂಡ್​ನ ನ್ಯಾಷನಲ್​ ರೆಕಾರ್ಡ್ಸ್​ ಬಿಡುಗಡೆ ಮಾಡಿದ ಪ್ರಮಾಣ ಪತ್ರದಲ್ಲಿ ಸೆಪ್ಟೆಂಬರ್​ 16ರಂದು ರಾಣಿಯ ಏಕೈಕ ಪುತ್ರಿ ರಾಜಕುಮಾರಿ ಅನ್ನಿ ಎರಡನೇ ಎಲೆಜಬೆತ್​​ರ ಮರಣವನ್ನು ನೋಂದಾಯಿಸಿದ್ದಾರೆ.

ಸೆಪ್ಟೆಂಬರ್​ 13ರಂದು ಬಕಿಂಗ್​​ಹ್ಯಾಮ್​ ಅರಮನೆ ಹೊರಡಿಸಿ ಹೇಳಿಕೆಯಲ್ಲಿ ಅನ್ನಿ ತಾವು ತಮ್ಮ ತಾಯಿಯ ಜೀವನದ ಕೊನೆಯ 24 ಗಂಟೆಗಳ ಕ್ಷಣದಲ್ಲಿ ತಾವು ಅವರೊಂದಿಗೆ ಇದ್ದೆ ಎಂದು ಹೇಳಿದ್ದಾರೆ. ಮರಣ ಪ್ರಮಾಣ ಪತ್ರದಲ್ಲಿ ರಾಣಿ ಎರಡನೇ ಎಲಿಜಬೆತ್​ರ ಮರಣದ ಸ್ಥಳವನ್ನು ಬಾಲ್ಮೋರಲ್​​ ಕ್ಯಾಸಲ್​ ಎಂದು ಹೇಳಿದೆ.ಮರಣ ಪ್ರಮಾಣ ಪತ್ರದಲ್ಲಿ ಉದ್ಯೋಗ ಎಂದು ಬರೆಯಲಾದ ವಿಭಾಗದಲ್ಲಿ ಹರ್​ ಮೆಜೆಸ್ಟಿ ದಿ ಕ್ವೀನ್​ ಎಂದು ನಮೂದಿಸಲಾಗಿದೆ. ರಾಣಿಯು ಇಂಗ್ಲೆಂಡ್‌ನಲ್ಲಿ ಮರಣಹೊಂದಿದ್ದರೆ, ಆಕೆಯ ಮರಣವನ್ನು ನೋಂದಾಯಿಸುವ ಅಗತ್ಯವಿಲ್ಲ, ಏಕೆಂದರೆ ಕಾನೂನು ಸಾರ್ವಭೌಮ ಪ್ರಜೆಗಳಿಗೆ ಮಾತ್ರ ಅನ್ವಯಿಸುತ್ತದೆ.


ಆದರೆ 1836 ರ ಹಿಂದಿನ ಶಾಸನವು ಸ್ಕಾಟ್ಲೆಂಡ್‌ನಲ್ಲಿ ಅನ್ವಯಿಸುವುದಿಲ್ಲ, ಇದು ಇಂಗ್ಲೆಂಡ್ ಮತ್ತು ವೇಲ್ಸ್‌ಗೆ ಪ್ರತ್ಯೇಕ ಕಾನೂನು ವ್ಯವಸ್ಥೆಯನ್ನು ಹೊಂದಿದೆ ಮತ್ತು “ಪ್ರತಿಯೊಬ್ಬ ವ್ಯಕ್ತಿಯ ಸಾವು” ಅನ್ನು ನೋಂದಾಯಿಸಬೇಕು ಎಂದು ಷರತ್ತು ವಿಧಿಸುತ್ತದೆ.

ಇದನ್ನು ಓದಿ : Dhoni vs Gambhir : ಧೋನಿ “ಓರಿಯೊ” ಅಂದ್ರೆ, ನಮ್ಮನೆ ನಾಯಿ ಓರಿಯೊ ಅಂದ್ರಲ್ಲಾ ಗಂಭೀರ್.. ಹೊಟ್ಟೆಕಿಚ್ಚಿನ ಮೊಟ್ಟೆಕೋಳಿಗೆ ಧೋನಿ ಮೇಲೇಕೆ ಇಷ್ಟೊಂದು ಕಿಚ್ಚು?

ಇದನ್ನೂ ಓದಿ : Siraj replaces Jasprit Bumrah: ಗಾಯಾಳು ಜಸ್ಪ್ರೀತ್ ಬುಮ್ರಾ ಬದಲು ಟೀಮ್ ಇಂಡಿಯಾ ಸೇರಿದ ಆರ್‌ಸಿಬಿ ವೇಗಿ ಸಿರಾಜ್

Queen Elizabeth II Died Of Old Age Says Her Death Certificate

Comments are closed.