Gujarat Titans : ಟಾಟಾ ಐಪಿಎಲ್‌ 2022ರ ಫ್ಲೇ ಆಫ್‌ ಪ್ರವೇಶಿಸಿದ ಗುಜರಾತ್‌ ಟೈಟಾನ್ಸ್‌

ಪುಣೆ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (Tata IPL 2022) ಕನ್ನಡಿಗ ಕೆ.ಎಲ್.ರಾಹುಲ್‌ ನೇತೃತ್ವದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants)ತಂಡದ ವಿರುದ್ದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಗುಜರಾತ್‌ ಟೈಟಾನ್ಸ್‌ (Gujarat Titans) ತಂಡ ಮೊದಲ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸಿದೆ. ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು 62 ರನ್‌ ಅಂತರದಿಂದ ಸೋಲಿಸುವ ಮೂಲಕ ಹಾರ್ದಿಕ್‌ ಪಾಂಡ್ಯ ಪಡೆ 18 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿ ಹೊರ ಹೊಮ್ಮಿದೆ.

ಗುಜರಾತ್‌ ಟೈಟಾನ್ಸ್‌ ತಂಡ ಒಟ್ಟು 12 ಪಂದ್ಯಗಳಲ್ಲಿ 9 ಪಂದ್ಯಗಳನ್ನು ಜಯಿಸಿದ್ದು, ಕೇವಲ 3 ಪಂದ್ಯಗಳಲ್ಲಿ ಮಾತ್ರವೇ ಸೋಲನ್ನು ಕಂಡಿದೆ. ಈ ಮೂಲಕ ಒಟ್ಟು 18 ಅಂಕಗಳನ್ನು ಪಡೆದು ಅಗ್ರಸ್ಥಾನಿಯಾಗಿ ಹೊರಹೊಮ್ಮಿದೆ. ಅಲ್ಲದೇ ಲೀಗ್‌ ಹಂತದಲ್ಲಿ ಗುಜರಾತ್‌ ತಂಡ ಇನ್ನೂ ಎರಡು ಪಂದ್ಯಗಳನ್ನು ಆಡಬೇಕಾಗಿದೆ. ಇನ್ನೊಂದೆಡೆಯಲ್ಲಿ ಕೆ.ಎಲ್.ರಾಹುಲ್‌ ನಾಯಕತ್ವದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ 12 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಜಯಿಸಿದ್ದು, ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. ಈ ಮೂಲಕ ಲಕ್ನೋ ತಂಡ ಎರಡನೇ ಸ್ಥಾನದಲ್ಲಿದ್ದು, ಉಳಿದ ಎರಡು ಪಂದ್ಯಗಳ ಪೈಕಿ ಒಂದು ಪಂದ್ಯವನ್ನು ಜಯಿಸಿದ್ರೂ ಕೂಡ ಪ್ಲೆ ಆಫ್‌ ಪ್ರವೇಶಿಸಲಿದೆ.

ರಾಜಸ್ಥಾನ ರಾಯಲ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ತಲಾ 14 ಅಂಕಗಳನ್ನು ಪಡೆದುಕೊಂಡಿವೆ. ಆದರೆ ರಾಜಸ್ಥಾನ ತಂಡ ರನ್‌ ರೇಟ್‌ ಆಧಾರದಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್‌, ಸನ್‌ ರೈಸಸ್‌ ಹೈದ್ರಾಬಾದ್‌, ಕೋಲ್ಕತ್ತಾ ನೈಟ್‌ ರೈಡರ್ಸ್‌ ಹಾಗೂ ಪಂಜಾಬ್‌ ಕಿಂಗ್‌ ತಂಡಗಳು ತಲಾ 10 ಅಂಕಗಳನ್ನು ಪಡೆದುಕೊಂಡಿದ್ದು, ಪ್ಲೇ ಆಫ್‌ ಹಾದಿ ಅಷ್ಟು ಸುಲಭವಲ್ಲ. ಇನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಕೊನೆಯ ಸ್ಥಾನದಲ್ಲಿವೆ.

Gujarat Titans : ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ದ ಭರ್ಜರಿ ಗೆಲುವು ಕಂಡ ಗುಜರಾತ್‌

ಪುಣೆಯಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಗುಜರಾತ್‌ ಟೈಟಾನ್ಸ್‌ ತಂಡಕ್ಕೆ ಮೊಶಿನ್‌ ಖಾನ್‌ ಆರಂಭಿಕ ಆಘಾತ ನೀಡಿದ್ರು. ವೃದ್ದಿಮಾನ್‌ ಸಾಹ ಅವರನ್ನು ಮೋಶನ್‌ ಖಾನ್‌ ಬಲಿ ಪಡೆದ್ರೆ, ನಂತರದಲ್ಲಿ ಆವೇಶ್‌ ಖಾನ್‌ ಸತತ ವಾಗಿ ವೇಡ್‌ ಹಾಗೂ ಹಾರ್ದಿಕ್‌ ಪಾಂಡ್ಯ ಅವರಿಗೆ ಫೆವಿಲಿಯನ್‌ ಹಾದಿ ತೋರಿಸಿದ್ದಾರೆ. ಆದರೆ ಒಂದೆಡೆಯಲ್ಲಿ ಶುಭಮನ್‌ ಗಿಲ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. 49 ಎಸೆತಗಳಲ್ಲಿ 63 ರನ್‌ ಸಿಡಿಸಿದ್ದಾರೆ. ಜೊತೆಗೆ ಡೇವಿಡ್‌ ಮಿಲ್ಲರ್‌ ೨೬ ಹಾಗೂ ರಾಹುಲ್‌ ತಿವಾಟಿಯಾ ಅವರ 22 ರನ್‌ ನೆರವಿನಿಂದ ಗುಜರಾತ್‌ ಲಯನ್ಸ್‌ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ೧೪೪ರನ್‌ ಗಳಿಸಿತ್ತು. ಲಕ್ನೋ ಪರ ಆವೇಶ್‌ ಖಾನ್‌ 2 ಹಾಗೂ ಹೋಲ್ಡರ್‌ ಹಾಗೂ ಮೋಶಿನ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡಿದ್ದಾರೆ.

ಗುಜರಾತ್‌ ತಂಡ ನೀಡಿದ್ದ 144 ಗುರಿಯನ್ನು ಬೆನ್ನತ್ತಲು ಹೊರಟಿದ್ದ ಲಕ್ನೋ ತಂಡ ಹೀನಾಯ ಸೋಲನ್ನು ಕಂಡಿದೆ. ಆರಂಭಿಕರಾದ ಕ್ವಿಂಟಾನ್‌ ಡಿಕಾಕ್‌ 11 ಹಾಗೂ ನಾಯಕ ರಾಹುಲ್‌ ಕೇವಲ 8 ರನ್‌ಗಳಿಸಿ ಔಟಾದ್ರು. ನಂತರ ಬಂದ ದೀಪಕ್‌ ಹೂಡ ಒಂದೆಡೆಯಲ್ಲಿ ಇನ್ನಿಂಗ್ಸ್‌ ಕಟ್ಟಲು ಒದ್ದಾಡುತ್ತಿದ್ರೆ, ಇನ್ನೊಂದೆಡೆಯಲ್ಲಿ ಕರಣ್‌ ಶರ್ಮಾ, ಕೃನಾಲ್‌ ಪಾಂಡ್ಯ, ಆಯುಶ್‌ ಬಡೋನಿ, ಮಾರ್ಕಸ್‌ ಸ್ಟೊಯಿನೀಸ್‌, ಜೇಸನ್‌ ಹೋಲ್ಡರ್‌, ಮೋಶಿನ್‌ ಖಾನ್‌ ಎರಡಂಕಿ ರನ್‌ ಗಳಿಸುವ ಮೊದಲೇ ವಿಕೆಟ್‌ ಒಪ್ಪಿಸಿದ್ದಾರೆ. ನಂತರ ಬಂದ ಚಾಮೀರ ಶೂನ್ಯಕ್ಕೆ ಔಟಾದ್ರು. ಅಂತಿಮ ಹಂತದಲ್ಲಿ ಆವೇಶ್‌ ಖಾನ್‌ ಸ್ಪೋಟಕ ಆಟಕ್ಕೆ ಮುಂದಾದ್ರು. ರಶೀದ್‌ ಖಾನ್‌ ಬೌಲಿಂಗ್‌ನಲ್ಲಿ ಸತತ ಎರಡು ಸಿಕ್ಸರ್‌ ಸಿಡಿಸಿದ್ದಾರೆ. ಆದರೆ ನಂತದ ಬೌಲ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ. ಈ ಮೂಲಕ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ 14.5 ಓವರ್‌ಗಳಲ್ಲಿ 82 ರನ್‌ ಗಳಿಗೆ ಆಲೌಟ್‌ ಆಗಿದೆ. ಗುಜರಾತ್‌ ಪರ ರಶೀದ್‌ ಖಾನ್‌ 4, ಸಾಯಿ ಕಿಶೋರ್‌ ಹಾಗೂ ಯಶ್‌ ದುಲ್‌ ತಲಾ ಎರಡು ವಿಕೆಟ್‌ ಪಡೆದುಕೊಂಡ್ರೆ, ಶಮಿ ಒಂದು ವಿಕೆಟ್‌ ಕಬಳಿಸಿದ್ದಾರೆ.

ಇದನ್ನೂ ಓದಿ : ಐಪಿಎಲ್ 2022ರಿಂದ ಮುಂಬೈ ಇಂಡಿಯನ್ಸ್ ಖ್ಯಾತ ಆಟಗಾರ ಸೂರ್ಯ ಕುಮಾರ್‌ ಯಾದವ್‌ ಔಟ್‌

ಇದನ್ನೂ ಓದಿ : ಡೆಲ್ಲಿ ಕ್ಯಾಪಿಟಲ್ಸ್ ಓಪನರ್ ಪೃಥ್ವಿ ಶಾ ಆಸ್ಪತ್ರೆಗೆ ದಾಖಲು

LSG all out for 88 runs, Gujarat Titans first team enter playoff in IPL 2022

Comments are closed.