M.S.Prabhakar no more: ಕನ್ನಡದ ಖ್ಯಾತ ಸಾಹಿತಿ ‘ಕಾಮರೂಪಿ ಎಂ.ಎಸ್.ಪ್ರಭಾಕರ್ ಇನ್ನು ನೆನಪು ಮಾತ್ರ..!

ಕೋಲಾರ: M.S.Prabhakar no more: ಕುದುರೆ ಮೊಟ್ಟೆ ಕಾದಂಬರಿಯಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರುವಾಸಿಯಾಗಿದ್ದ ಖ್ಯಾತ ಸಾಹಿತಿ ಎಂ.ಎಸ್.ಪ್ರಭಾಕರ್ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಇವರು ಕಾಮರೂಪಿ ಎಂದೇ ಗುರುತಿಸಿಕೊಂಡಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಇಂದು ಕೋಲಾರದ ಕರಾಠಿಪಾಳ್ಯದಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

1936ರಲ್ಲಿ ಜನಿಸಿದ್ದ ಎಂ.ಎಸ್. ಪ್ರಭಾಕರ್ ಅವರ ಪೂರ್ಣ ಹೆಸರು ಮೋಟನಹಳ್ಳಿ ಸೂರಪ್ಪ ಪ್ರಭಾಕರ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಇವರು 1962ರಿಂದ 1965ರವರೆಗೆ ಗುವಾಹಟಿ ಯೂನಿವರ್ಸಿಟಿಯಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. 1975ರಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾಗಿದ್ದ ಸಂದರ್ಭದಲ್ಲಿ ಗುವಾಹಟಿಯಿಂದ ಮುಂಬೈಗೆ ಅವರು ಆಗಮಿಸಿದರು. ಅಲ್ಲಿ ಎಕಾನಮಿಕ್ ಆಂಡ್ ಪೊಲಿಟಿಕಲ್ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿ 7 ವರ್ಷಗಳ ಕಾಲ ಅಂದರೆ 1983ರವರೆಗೆ ಕರ್ತವ್ಯ ನಿರ್ವಹಿಸಿದ್ದರು. ಬಳಿಕ 1983ರಲ್ಲಿ ದಿ ಹಿಂದೂ ಪತ್ರಿಕೆಯಲ್ಲಿ ಅಸ್ಸಾಂನ ವಿಶೇಷ ವರದಿಗಾರರಾಗಿದ್ದರು. ಅಸ್ಸಾಂ ರಾಜಕಾರಣ, ಸಾಂಸ್ಕøತಿಕ ಕಾರ್ಯಕ್ರಮ, ಮಾನವೀಯ ಸಂವೇದನೆ ಮೊದಲಾದ ವಿಚಾರಗಳ ಬಗ್ಗೆ ವರದಿ ಮಾಡುತ್ತಿದ್ದರು. ಬಳಿಕ ದಿ ಹಿಂದೂ ಆಡಳಿತ ಮಂಡಳಿ ಅವರನ್ನು ವರದಿಗಾರಿಕೆಗೆ ದಕ್ಷಿಣ ಆಫ್ರಿಕಾಗೆ ವರ್ಗಾವಣೆ ಮಾಡಿತ್ತು. ಹೀಗಾಗಿ ದಕ್ಷಿಣ ಭಾರತದಲ್ಲೂ 10 ವರ್ಷಗಳ ಕಾಲ ವಿಶೇಷ ವರದಿಗಾರರಾಗಿ ಸೇವೆ ಸಲ್ಲಿಸಿದ್ದ ಇವರು 2022ರಲ್ಲಿ ಕರ್ತವ್ಯದಿಂದ ನಿವೃತ್ತಿ ಹೊಂದಿದರು. ಅಂದಹಾಗೆ ದಿ ಹಿಂದೂ ಪತ್ರಿಕೆ ಮೂಲಕ ನೆಲ್ಸನ್ ಮಂಡೇಲಾ ಅವರನ್ನು ಸಂದರ್ಶನ ಮಾಡಿದ ಏಕೈಕ ಕನ್ನಡ ಪತ್ರಕರ್ತ ಎಂಬ ಹೆಗ್ಗಳಿಕೆ ಇವರದ್ದು.

ಇದನ್ನೂ ಓದಿ: Kangana Ranaut: ತನ್ನ ಪ್ರೇಮಕಥೆಯಲ್ಲಿ ‘ಪ್ರೀತಿ’ಯೇ ಇರಲಿಲ್ಲ ಅನ್ನೋದನ್ನು ಯಾವ ಹೆಣ್ಣು ಕೂಡಾ ಸಹಿಸಲ್ಲ; ನಟಿ ಕಂಗನಾ ಹೀಗಂದಿದ್ಯಾಕೆ..?

ಆಂಗ್ಲ ಹಾಗೂ ತೆಲುಗು ಭಾಷೆಯಲ್ಲಿ ಪರಿಣಿತಿ ಹೊಂದಿದ್ದ ಇವರು ತಮ್ಮ ಓದು, ಬರಹ ಜೊತೆಗೆ ವೃತ್ತಿ ಜೀವನದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ, ಇಂಗ್ಲೀಷ್ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿದ್ದರೂ ಮಾತೃಭಾಷೆ ಕನ್ನಡ ಮೇಲೆ ಇವರಿಗೆ ಅಪಾರ ಒಲವಿತ್ತು. ಹೀಗಾಗಿ ಸೃಜನಶೀಲ ಬರವಣಿಗೆಗೆ ಇವರು ಆಯ್ದುಕೊಂಡ ಭಾಷೆ ಕನ್ನಡವಾಗಿತ್ತು. ಒಂದು ತೊಲ ಪುನುಗು ಮತ್ತು ಇತರ ಕಥೆಗಳು ಇವರು ರಚಿಸಿದ ಕಥಾ ಸಂಕಲನ. ಇನ್ನುಳಿದಂತೆ ಕುದುರೆ ಮೊಟ್ಟೆ, ಅಂಜಿಕಿನ್ಯಾತಕಯ್ಯಾ ಮೊದಲಾದ ಕಾದಂಬರಿಗಳು ಹಾಗೂ ಸಾಹಿತ್ಯ ಕೃತಿಗಳನ್ನು ಇವರು ಬರೆದಿದ್ದಾರೆ. ಅಲ್ಲದೇ ಲುಕಿಂಗ್ ಬ್ಯಾಕ್ ಇನ್ ಟೂ ದಿ ಫ್ಯೂಚರ್, ಐಡೆಂಟೆಟಿ & ಇನ್ಸರ್ಜೆನ್ಸಿ ಇನ್ ನಾರ್ತ್ ಈಸ್ಟ್ ಇಂಡಿಯಾ ಎಂಬ ಪುಸ್ತಕದಲ್ಲಿ ಇವರು ಈಶಾನ್ಯ ಭಾರತದ ಸಮಸ್ಯೆಗಳ ಬಗ್ಗೆ ಬರೆದಿದ್ದಾರೆ. ಇವರ ಸಾಧನೆಗೆ 2018ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಸಂದಿದೆ. ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಕಾಮರೂಪಿ ಎಂ.ಎಸ್.ಪ್ರಭಾಕರ್ ಅವರು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದೇಹದಾನ ಮಾಡಿದ್ದಾರೆ.

ಇದನ್ನೂ ಓದಿ: Kalasa Banduri project : ಕಳಸಾ ಬಂಡೂರಿ ವಿಸ್ತೃತ ಯೋಜನೆಗೆ ಅನುಮತಿ ನೀಡಿದ ಕೇಂದ್ರ ಸರಕಾರ

M.S.Prabhakar no more: Kannada’s famous writer Kamarupi M.S.Prabhakar is no more

Comments are closed.