Vallabhaneni Janardhan: ತೆಲುಗು ಚಿತ್ರರಂಗದ ಹಿರಿಯ ಕಲಾವಿದ ವಲ್ಲಭನೇನಿ ಜನಾರ್ಧನ್‌ ಇನ್ನಿಲ್ಲ

ಹೈದರಾಬಾದ್:‌ (Vallabhaneni Janardhan) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತೆಲುಗು ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ಹಾಗೂ ನಿರ್ದೇಶಕ ವಲ್ಲಭನೇನಿ ಜನಾರ್ಧನ್‌ ಅವರು ತಮ್ಮ 63ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜನಾರ್ಧನ್‌ ಅವರನ್ನು ಹೈದರಾಬಾದ್‌ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

2022ರಲ್ಲಿ ತೆಲುಗು ಚಿತ್ರರಂಗಕ್ಕೆ ಬಾರಿ ನಷ್ಟವನ್ನುಂಟುಮಾಡಿದೆ. ಅನೇಕ ಮಂದಿ ಹಿರಿಯ ಕಲಾವಿದರು ಈ ವರ್ಷ ಟಾಲಿವುಡ್‌ ಚಿತ್ರರಂಗವನ್ನು ಅಗಲಿದ್ದಾರೆ. ಸೂಪರ್‌ ಸ್ಟಾರ್‌ ಕೃಷ್ಣ ಅವರ ನಂತರ ಕೈಕಾಲ ಸತ್ಯನಾರಾಯಣ ಹಾಗೇ ನಂತರದಲ್ಲಿ ಚಲಪತಿ ರಾವ್‌ ಅವರು ಕೊನೆಯುಸಿರೆಳೆದಿದ್ದಾರೆ. ಇದರ ಬೆನ್ನಲ್ಲೇ ಇಂದು ಜನಾರ್ಧನ್‌ (Vallabhaneni Janardhan) ಅವರು ತಮ್ಮ63ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇವರ ಅಗಲಿಕೆಗೆ ಟಾಲಿವುಡ್‌ ನ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸಂತಾಪವನ್ನು ಸೂಚಿಸಿದ್ದಾರೆ.

ಇವರು ನಟರಾಗಿ, ನಿರ್ಮಾಪಕರಾಗಿ, ಹಾಗೇ ನಿರ್ದೇಶಕರಾಗಿಯೂ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಇಳೀ ವಯಸ್ಸಿನಲ್ಲೇ ಅವರು ಸಿನಿಮಾದ ಬಗ್ಗೆ ಅಪಾರವಾದ ಆಸಕ್ತಿಯನ್ನು ಹೊಂದಿದ್ದು, ಇವರಿಗೆ ಹಲವು ದಶಕಗಳ ಅನುಭವ ಇತ್ತು.

ಇವರ ನಿರ್ಮಾಣದ ಮೊದಲ ಸಿನಿಮಾ ಅರ್ಧದಲ್ಲೇ ನಿಂತಿದ್ದು, ಬಳಿಕ ಕನ್ನಡದ ಮಾನಸ ಸರೋವರ ಸಿನಿಮಾವನ್ನು ತೆಲುಗಿಗೆ ರಿಮೇಕ್‌ ಮಾಡುವುದರ ಮೂಲಕ 1983ರಲ್ಲಿ ದೊಡ್ಡ ಗೆಲುವನ್ನು ಕಂಡುಕೊಂಡರು. 1991ರಲ್ಲಿ ಚಿರಂಜೀವಿ ನಟನೆಯ ‘ಗ್ಯಾಂಗ್​ ಲೀಡರ್​’ ಸಿನಿಮಾದಲ್ಲಿ ನೆಗೆಟಿವ್​​ ಪಾತ್ರ ಮಾಡುವ ಮೂಲಕ ಹೆಚ್ಚು ಜನಪ್ರಿಯತೆ ಪಡೆದ ಇವರು, ಬಾಲಕೃಷ್ಣ, ವೆಂಕಟೇಶ್, ನಾಗಾರ್ಜುನ ಮುಂತಾದ ಸ್ಟಾರ್​ ಕಲಾವಿದರ ಜೊತೆಗೂ ನಟಿಸಿದ್ದಾರೆ. ಅಲ್ಲದೇ ಧಾರಾವಾಹಿಯಲ್ಲೂ ಕೂಡ ನಟಿಸಿ ಜನಪ್ರೀಯತೆ ಗಳಿಸಿದ್ದರು​. ಅಲ್ಲದೇ ಇವರ ನಿರ್ಮಾಣದಲ್ಲಿ ಮೂಡಿಬಂದಂತಹ ಹಲವು ಸಿನಿಮಾಗಳು ಸೂಪರ್‌ ಹಿಟ್‌ ಆಗಿದ್ದು, ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಜನಾರ್ಧನ್‌ ಅವರು ಬಣ್ಣ ಹಚ್ಚಿದ್ದಾರೆ.

ವಲ್ಲಭನೇನಿ ಜನಾರ್ಧನ್‌ ಅವರಿಗೆ ಇಬ್ಬರು ಮಕ್ಕಳಿದ್ದು, ಪುತ್ರಿ ಅಭಿನಯ ಫ್ಯಾಷನ್‌ ಡಿಸೈನರ್‌ ಆಗಿ ಕಾರ್ಯ ನಿರ್ಹಿಸುತ್ತಿದ್ದು, ಪುತ್ರ ಸಾಫ್ಟ್‌ ವೇರ್‌ ಇಂಜಿನಿಯರ್‌ ಅಗಿ ಕೆಲಸ ಮಾಡುತ್ತಿದ್ದಾರೆ.ಜನಾರ್ಧನ್‌ ಅವರ ಸಾವಿಗೆ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ನೋವು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ : Kangana Ranaut: ತನ್ನ ಪ್ರೇಮಕಥೆಯಲ್ಲಿ ‘ಪ್ರೀತಿ’ಯೇ ಇರಲಿಲ್ಲ ಅನ್ನೋದನ್ನು ಯಾವ ಹೆಣ್ಣು ಕೂಡಾ ಸಹಿಸಲ್ಲ; ನಟಿ ಕಂಗನಾ ಹೀಗಂದಿದ್ಯಾಕೆ..?

ಇದನ್ನೂ ಓದಿ : Shree Balaji Photo Studio Movie : ಸ್ಯಾಂಡಲ್‌ವುಡ್‌ ನಲ್ಲಿ ಸದ್ದು ಮಾಡುತ್ತಿದೆ “ಶ್ರೀ ಬಾಲಾಜಿ ಸ್ಟುಡಿಯೋ” ಅನ್ನೋ ಪೋಟೋಗ್ರಾಫರ್‌ ಕಥೆಯ ಸಿನಿಮಾ

Janardhan was seriously ill and admitted to a private hospital in Hyderabad. Today he died in the hospital after the treatment failed.

Comments are closed.