Mangalore 10 People Arrested : ವೈದ್ಯರು, ವಿದ್ಯಾರ್ಥಿಗಳಿಂದ ಡ್ರಗ್ಸ್ ದಂಧೆ : 10 ಮಂದಿಯನ್ನು ಬಂಧಿಸಿದ ಮಂಗಳೂರು ಪೊಲೀಸರು

ಮಂಗಳೂರು:Mangalore 10 People Arrested: ಪ್ರತಿಷ್ಠಿತ ಮೆಡಿಕಲ್ ಕಾಲೇಜಿನ ವೈದ್ಯರು, ವಿದ್ಯಾರ್ಥಿಗಳು ನಡೆಸುತ್ತಿದ್ದ ಗಾಂಜಾದಂಧೆಯನ್ನು ಬೇಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ದಂಧೆಯಲ್ಲಿ ವಿದ್ಯಾರ್ಥಿನಿಯರು ಭಾಗಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಹತ್ತು ಮಂದಿಯನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಹೈಪ್ರೋಫೈಲ್ ಡ್ರಗ್ಸ್ ದಂಧೆಯ ಕರಾಳತೆಯನ್ನು ಅನಾವರಣಗೊಳಿಸಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಮಣಿಪಾಲ, ಅತ್ತಾವರ, ದೇರಳಕಟ್ಟೆಯ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ.ಯು.ಕೆ ಮೂಲದ ಗಾಂಜಾ ಪೆಡ್ಲರ್ ನೀಲ್ ಕಿಶೋರಿಲಾಲ್ ರಾಮ್ ಜೀ (38 ವರ್ಷ), ವೈದ್ಯರಾದ ಡಾ. ಸಮೀರ್(32 ವರ್ಷ), ಮಣಿ‌ಮಾರನ್ ಮುತ್ತು(28 ವರ್ಷ), ವಿದ್ಯಾರ್ಥಿನಿಯರಾದ ಡಾ.ನದಿಯಾ ಸಿರಾಜ್(24 ವರ್ಷ), ಡಾ.ವರ್ಷಿಣಿ ಪ್ರತಿ (26 ವರ್ಷ), ಡಾ.ರಿಯಾ ಚಡ್ಡ(22 ವರ್ಷ), ಡಾ. ಹೀರಾ ಬಸಿನ್(23ವರ್ಷ), ವಿದ್ಯಾರ್ಥಿಗಳಾದ ಡಾ. ಭಾನು ದಹಿಯಾ (27 ವರ್ಷ), ಡಾ.ಕ್ಷಿತಿಜ್ ಗುಪ್ತ (23 ವರ್ಷ), ಸ್ಥಳೀಯ ಮಹಮ್ಮದ್ ರವೂಪ್ ಅಲಿಯಾಸ್ ಗೌಸ್ (34ವರ್ಷ ) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಗಾಂಜಾ ಪೆಡ್ಲರ್ ನೀಲ್ ಕಿಶೋರಿಲಾಲ್ ರಾಮ್ ಜೀ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆಯಲ್ಲಿ ಈ ಸ್ಪೋಟಕ ಮಾಹಿತಿ ಬೆಳಕಿಗೆ ಬಂದಿದೆ. ಪ್ರಮುಖ ಆರೋಪಿ ನೀಡಿರುವ ಮಾಹಿತಿಯ ಆಧಾರದ ಮೇಲೆ ಪೊಲೀಸರು ಇದೀಗ ಇಬ್ಬರು ವೈದ್ಯರು, ನಾಲ್ವರು ವೈದ್ಯಕೀಯ ವಿದ್ಯಾರ್ಥಿನಿಯರು ಹಾಗೂ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 10 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 2 ಕೆ.ಜಿ‌ ಗಾಂಜಾ, ಒಂದು ನಕಲಿ ಪಿಸ್ತೂಲ್, ಡ್ರಾಗರ್ ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ : ಹೆಬ್ರಿ : ಭಕ್ತರಿಗೆ ಗನ್ ತೋರಿಸಿ ಜೀವಬೆದರಿಕೆ, ಮಾನಹಾನಿ : ಚರ್ಚ್ ಧರ್ಮಗುರು ವಿರುದ್ದ ದೂರು, ಪ್ರತಿದೂರು ದಾಖಲು

ಇದನ್ನೂ ಓದಿ : Cooker bomb trial blast case: ತೀರ್ಥಹಳ್ಳಿಯಲ್ಲಿ ದಿಢೀರ್ ದಾಳಿ ನಡೆಸಿದ ಎನ್‌ಐಎ

ಇದನ್ನೂ ಓದಿ : Auto Expo 2023: ಇಂದು ಪ್ರಾರಂಭವಾದ ಆಟೋ ಎಕ್ಸ್ಪೋ 2023; ಭರ್ಜರಿಯಾಗಿ ಅನಾವರಣವಾಗಲಿರುವ ಹೊಸ ಕಾರುಗಳು

Mangalore 10 People Arrested in Doctors and medical students cannabis case

Comments are closed.