ಆದಿಲ್‌ ದುರಾನಿ ಜೊತೆ ಎರಡನೇ ಮದುವೆ ಆದ ರಾಖಿ ಸಾವಂತ್‌ ಮದುವೆ : ವೈರಲ್‌ ಆಯ್ತು ನಟಿಯ ಮದುವೆ ಪೋಟೋ

ನಟಿ ರಾಖಿ ಸಾವಂತ್ ವಿವಾದವನ್ನು ಇಷ್ಟಪಡುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನಕ್ಕೆ ಸಂಬಂಧಿಸಿದಂತೆ ಪದೇ ಪದೇ ವಿವಾದಕ್ಕೆ ಗುರಿ ಆಗುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಆದಿಲ್ ದುರಾನಿ ಅವರ ಜೊತೆಗಿನ (Adil Durrani – Rakhi Sawant) ವಿವಾಹದ ಪೋಟೋಗಳು ಸಖತ್‌ ಸದ್ದು ಮಾಡುತ್ತಿದ್ದಾರೆ. ಆದಿಲ್ ದುರಾನಿ ಜೊತೆ ಡೇಟಿಂಗ್ ಮಾಡುತ್ತಿದ್ದ ರಾಖಿ, ಕೋರ್ಟ್ ಮದುವೆಯಲ್ಲಿ ಆತನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ.

ವೈರಲ್ ಪೋಟೋಗಳಲ್ಲಿ ರಾಖಿ ಸಾವಂತ್ ಮತ್ತು ಆದಿಲ್‌ ದುರಾನಿ ನ್ಯಾಯಾಲಯದಲ್ಲಿ ನೊಂದಾವಣಿ ವಿವಾಹದ ನಂತರ ಕುತ್ತಿಗೆಗೆ ಹಾರವನ್ನು ಧರಿಸಿರುವುದನ್ನು ಕಾಣಬಹುದು. ಒಂದು ಪೋಟೋದಲ್ಲಿ ದಂಪತಿಗಳು ಮದುವೆಯ ನೊಂದಾವಣಿ ಪತ್ರಗಳಿಗೆ ಸಹಿ ಮಾಡುತ್ತಿರುವುದು ಹಾಗೂ ಇನ್ನೊಂದರಲ್ಲಿ ಅವರ ಕಾಗದ ಪತ್ರಗಳನ್ನು ಕಾಣಬಹುದಾಗಿದೆ. ಇನ್ನು ರಾಖಿ ಸವಂತ್‌ ರಾಣಿ ಬಿಳಿ ಮತ್ತು ಗುಲಾಬಿ ಬಣ್ಣದ ಶರರಾದಲ್ಲಿ ಸುಂದರವಾಗಿ ಕಾಣುತ್ತಿದ್ದರು. ಅವರು ಬಿಳಿ ದುಪ್ಪಟ್ಟಾವನ್ನು ಹಾಕಿಕೊಂಡಿದ್ದರು.. ಮತ್ತೊಂದೆಡೆ, ಆದಿಲ್‌ ದುರಾನಿ ಬೇಸಿಕ್ ಡೆನಿಮ್ ಜೀನ್ಸ್ ಜೊತೆ ಕಪ್ಪು ಶರ್ಟ್ ಧರಿಸಿದ್ದರು.

ಆದರೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಆದಿಲ್ ದುರಾನಿ ಅವರು ಈ ಸುದ್ದಿಯನ್ನು ನಿರಾಕರಿಸಿದರು. ಅಷ್ಟೇ ಅಲ್ಲದೇ ಅವರು ಮದುವೆಯಾಗಿಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಪೋಟೋಗಳು ಅಂತರ್ಜಾಲ ಬಳಕೆದಾರರಿಂದ ವಿವಿಧ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದವು. ಅದರಲ್ಲಿ ಒಬ್ಬರು, “ಅಭಿನಂದನೆಗಳು ರಾಖಿ ಮತ್ತು ಆದಿಲ್, ದೇವರು ನಿಮ್ಮಿಬ್ಬರನ್ನೂ ಆಶೀರ್ವದಿಸಲಿ.” ಎಂದು ಬರೆದರೆ, ಇನ್ನೊಬ್ಬರು, “ರಹಸ್ಯ ಮದುವೆ ಇನ್ನು ಮುಂದೆ ರಹಸ್ಯವಾಗಿಲ್ಲ.”ಎಂದು ಕಾಮೆಂಟ್‌ ಬರೆದಿದ್ದಾರೆ.

ಇದನ್ನೂ ಓದಿ : 10 ಮಿಲಿಯನ್ ವೀವ್ಸ್ ಸಿಗದೆ ಅಜನೀಶ್ ಲೋಕನಾಥ್‌ಗೆ ಬಿಡುಗಡೆ ಭಾಗ್ಯವಿಲ್ಲ ಎಂದ “ಹಾಸ್ಟೆಲ್ ಹುಡುಗರು”

ಇದನ್ನೂ ಓದಿ : ನಟ ಪರಂಬ್ರತ ಚಟರ್ಜಿ ಜೊತೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ರಾಗಿಣಿ ದ್ವಿವೇದಿ

ಇದನ್ನೂ ಓದಿ : ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾದಲ್ಲಿ ಸ್ಟೈಲಿಶ್‌ ಅವತಾರದಲ್ಲಿ ನಟ ಶಿವರಾಜ್‌ಕುಮಾರ್

ನಟಿ ಈ ಮೊದಲು ಮದುವೆಯಾಗಿದ್ದು, ಹಾಗಾಗಿ ಇದು ಅವರ ಮೊದಲ ಮದುವೆಯಲ್ಲ. ನಟಿ ಈ ಹಿಂದೆ ರಿತೇಶ್ ರಾಜ್ ಅವರೊಂದಿಗೆ ಮದುವೆ ಮಾಡಿಕೊಮಡಿದ್ದು, ರಾಖಿ ತನ್ನ ಮೊದಲ ಮದುವೆಯ ಪೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ನಟಿ ತನ್ನ ಮೊದಲ ಗಂಡನ ಮುಖವನ್ನು ಎಲ್ಲೂ ಬಹಿರಂಗಪಡಿಸಿಲ್ಲ. ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 15 ರಲ್ಲಿ, ರಾಖಿ ತನ್ನ ಪತಿ ರಿತೇಶ್ ಅವರನ್ನು ಕರೆತಂದರು. ಆದರೆ ಇದಾದ ನಂತರ ಸ್ವಲ್ಪ ಸಮಯದಲ್ಲಿ ಇಬ್ಬರೂ ಬೇರ್ಪಟ್ಟಿದ್ದಾರೆ. ಹಾಗೆ ರಾಖಿ ರಿತೇಶ್ ತನ್ನೊಂದಿಗೆ ವಾಸಿಸಲು ಬಯಸುವುದಿಲ್ಲ ಎಂದು ಹೇಳಿ ತಮ್ಮ ಮನೆಯನ್ನು ತೊರೆದರು ಎಂದು ಹೇಳಿದ್ದಾರೆ. ತಾನು ಮೊದಲ ಪತ್ನಿಗೆ ವಿಚ್ಛೇದನ ನೀಡಿಲ್ಲ, ಇದರಿಂದ ಕಾನೂನು ಸಮಸ್ಯೆ ಉಂಟಾಗಿದೆ ಎಂದು ಹೇಳಿದ್ದಾಳೆ.

Adil Durrani – Rakhi Sawant: Rakhi Sawant’s second marriage with Adil Durrani: Actress’s wedding photo went viral

Comments are closed.