ಬ್ಯಾಗಿನಲ್ಲಿ ಕೋಳಿ ಮಾಂಸ ಕೊಂಡೊಯ್ದ ಪ್ರಯಾಣಿಕ: ಕೆಎಸ್‌ಆರ್‌ಟಿಸಿ ಬಸ್ಸನ್ನೇ ಪೊಲೀಸ್‌ ಠಾಣೆಗೆ ಕೊಂಡೊಯ್ಯ ಬಸ್‌ ಚಾಲಕ !

ಕೋಳಿ ಮಾಂಸವನ್ನು ಕೊಂಡೊಯ್ದಿದ್ದಾನೆ. ಇದನ್ನು ಗಮನಿಸಿದ ಕೆಎಸ್‌ಆರ್‌ಟಿಸಿ ಕಂಡಕ್ಟರ್‌ ಮತ್ತು ಚಾಲಕ ಪ್ರಯಾಣಿಕನಿಗೆ ಗದರಿಸಿದ್ದಾರೆ. ಮಾತ್ರವಲ್ಲ ಪ್ರಯಾಣಿಕರಿದ್ದ ಕೆಎಸ್‌ಆರ್‌ಟಿಸಿ ಬಸ್ಸನ್ನು (KSRTC BUS) ಪೊಲೀಸ್‌ ಠಾಣೆಗೆ ಚಲಾಯಿಸಿಕೊಂಡು ಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ (Bantwal) ನಡೆದಿದೆ.

ಬಂಟ್ವಾಳ ( Mangalore News ) : ಪ್ರಯಾಣಿಕನೋರ್ವ ತನ್ನ ಬ್ಯಾಗಿನಲ್ಲಿ ಕೋಳಿ ಮಾಂಸವನ್ನು ಕೊಂಡೊಯ್ದಿದ್ದಾನೆ. ಇದನ್ನು ಗಮನಿಸಿದ ಕೆಎಸ್‌ಆರ್‌ಟಿಸಿ ಕಂಡಕ್ಟರ್‌ ಮತ್ತು ಚಾಲಕ ಪ್ರಯಾಣಿಕನಿಗೆ ಗದರಿಸಿದ್ದಾರೆ. ಮಾತ್ರವಲ್ಲ ಪ್ರಯಾಣಿಕರಿದ್ದ ಕೆಎಸ್‌ಆರ್‌ಟಿಸಿ ಬಸ್ಸನ್ನು (KSRTC BUS) ಪೊಲೀಸ್‌ ಠಾಣೆಗೆ ಚಲಾಯಿಸಿಕೊಂಡು ಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ (Bantwal) ನಡೆದಿದೆ.

ಕೋಳಿ ಮಾಂಸವನ್ನು ಬ್ಯಾಗ್‌ನಲ್ಲಿ ತುಂಬಿಸಿಕೊಂಡು ಹೋದ ಪ್ರಯಾಣಿಕನನ್ನು ಸುರೇಶ್‌ ಎಂದು ಗುರುತಿಸಲಾಗಿದೆ. ಸುರೇಶ್‌ ಬಸನ್ನು ಹತ್ತಿದ ಕೂಡಲೇ ಕಂಡಕ್ಟರ್‌ ಬ್ಯಾಗ್‌ನಲ್ಲಿ ಏನಿದೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಸುರೇಶ್‌ ಬ್ಯಾಗಿನಲ್ಲಿ ಕೋಳಿಯ ಮಾಂಸ ಇರುವುದಾಗಿ ತಿಳಿಸಿದ್ದಾರೆ. ಆದರೆ ಕಂಡಕ್ಟರ್‌ ಬಸ್ಸಿನಲ್ಲಿ ಕೋಳಿ ಮಾಂಸ ಕೊಂಡೊಯ್ಯಲು ಅವಕಾಶವಿಲ್ಲ ಎಂದಿದ್ದಾರೆ.

Mangalore news passenger carrying chicken meat in a bag bus driver took the KSRTC bus to the Bantwal police station
Image Credit to Origianal Source

ಬಸ್ಸಿನ ಕಂಡಕ್ಟರ್‌ ಸುರೇಶ್‌ ಅವರ ಬಳಿಯಲ್ಲಿ ಬಸ್ಸಿನಿಂದ ಇಳಿಯಲು ಸೂಚಿಸಿದ್ದಾರೆ. ಕೆಎಸ್‌ಆರ್‌ಟಿಸಿ ನಿಯಮದ ಅರಿವು ಇಲ್ಲದ ಸುರೇಶ್‌ ಬಸ್ಸಿನಿಂದ ಇಳಿಯಲು ನಿರಾಕರಿಸಿದ್ದಾರೆ. ಈ ವೇಳೆಯಲ್ಲಿ ಪ್ರಯಾಣಿಕ ಸುರೇಶ್‌ ಹಾಗೂ ಬಸ್ಸಿನ ಕಂಡಕ್ಟರ್‌ ಹಾಗೂ ಡ್ರೈವರ್‌ ನಡುವೆ ಮಾತಿನ ಚಕಮಕಿ ನಡೆದಿದೆ.

ಇದನ್ನೂ ಓದಿ : ಪತಿ ತನ್ನ ಪತ್ನಿಯ ಪೋನ್‌ ಸಂಭಾಷಣೆ ರೆಕಾರ್ಡ್‌ ಮಾಡುವುದು ಅಪರಾಧ : ಹೈಕೋರ್ಟ್‌ ಮಹತ್ವದ ತೀರ್ಪು

ಮಾತಿನ ಚಕಮಕಿ ಜೋರಾಗುತ್ತಿದ್ದಂತೆಯೇ ಬಸ್ಸಿನ ಡ್ರೈವರ್‌ ಬಸ್ಸನ್ನು ಪೊಲೀಸ್‌ ಠಾಣೆಗೆ ಚಲಾಯಿಸಿಕೊಂಡು ಬಂದಿದ್ದಾನೆ. ಈ ವೇಳೆಯಲ್ಲಿ ಎಸ್‌ಐ ರಾಮಕೃಷ್ಣ ಅವರು ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಹಾಗೂ ಕಂಡಕ್ಟರ್‌ ಜೊತೆಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಬಸ್ಸಿನಲ್ಲಿ ಯಾವ ಕಾರಣಕ್ಕೆ ಕೋಳಿ ಮಾಂಸ ಸಾಗಾಟಕ್ಕೆ ಅವಕಾಶವಿಲ್ಲ ಎಂದು ಪ್ರಶ್ನಿಸಿದ್ದಾರೆ.

ಕೇವಲ ಕೋಳಿ ಮಾಂಸವನ್ನು ಬಸ್ಸಿನಲ್ಲಿ ಕೊಂಡೊಯ್ದ ಕಾರಣಕ್ಕೆ ಬಸ್ಸನ್ನು ಠಾಣೆಗೆ ಕರೆತಂದಿರುವ ಸಮಂಜಸವೇ ಎಂದು ಪೊಲೀಸ್‌ ಸಬ್‌ಇನ್‌ಸ್ಟೆಕ್ಟರ್‌ ಪ್ರಶ್ನೆ ಮಾಡಿದ್ದಾರೆ. ಈ ಘಟನೆ ಪ್ರಯಾಣಿಕರಲ್ಲಿ ಕೆಲ ಕಾಲ ಆತಂಕವನ್ನು ಮೂಡಿಸಿತ್ತು. ಸರಿಯಾದ ಸಮಯಕ್ಕೆ ನಿಗದಿತ ಸ್ಥಳಕ್ಕೆ ತಲುಪಲಾಗದೇ ಕೆಲವರು ಹಿಡಿಶಾಪ ಹಾಕಿದ್ದಾರೆ.

Mangalore news passenger carrying chicken meat in a bag bus driver took the KSRTC bus to the Bantwal police station
Image Credit to Original Source

ಇದನ್ನೂ ಓದಿ : ನಿಮ್ಮ ಹೆಣ್ಣು ಮಗಳ ಮದುವೆಗೆ ಸಿಗುತ್ತೆ 25 ಲಕ್ಷ ರೂ. : ಪ್ರಧಾನಿ ನರೇಂದ್ರ ಮೋದಿ ಸರಕಾರದಿಂದ ಹೊಸ ಯೋಜನೆ

ಘಟನೆಗೆ ಸಂಬಂಧಿಸಿದಂತೆ ಕೆಎಸ್‌ಆರ್‌ಟಿಸಿ ಬಂಟ್ವಾಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀಶಾ ಭಟ್‌ ಅವರು ಸ್ಪಷ್ಟನೆಯನ್ನು ನೀಡಿದ್ದು, ಬಸ್ಸಿನಲ್ಲಿ ಜೀವಂತ ಮೀನು, ಕೋಳಿ, ಮಾಂಸದ ಉತ್ಪನ್ನಗಳ ಸಾಗಾಟಕ್ಕೆ ಅವಕಾಶವಿಲ್ಲ. ಆದರೆ ಜೀವಂತ ಪ್ರಾಣಿಗಳನ್ನು ಸಾಗಾಟ ಮಾಡಬಹುದು ಎಂದಿದ್ದಾರೆ.

ಮೀನು ಹಾಗೂ ಕೋಳಿಯ ಮಾಂಸದಿಂದ ವಾಸನೆ ಬಂದು ಇತರ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಅಂತಹ ವಸ್ತುಗಳ ಮೇಲೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದಾರೆ. ಆದರೆ ಕೂಲಿ ಕಾರ್ಮಿಕರು ದುಡಿದು ಉಳಿಸಿದ ಹಣದಲ್ಲಿಯೂ ಖರೀದಿಸಿದ ಮೀನು, ಮಾಂಸ ಉತ್ಪನ್ನ ಸಾಗಾಟಕ್ಕೆ ಅವಕಾಶ ನಿರಾಕರಿಸಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Mangalore news passenger carrying chicken meat in a bag bus driver took the KSRTC bus to the Bantwal police station

Comments are closed.