ಮನೆ ಸುಟ್ಟು ಕರಕಲಾಯ್ತು, ನೆರವೂ ಸಿಗುತ್ತಿಲ್ಲ : ಭಾರತ ಪುಟ್ಬಾಲ್‌ ಆಟಗಾರರ ಕಣ್ಣಿರ ಕಥೆ

ಏಷ್ಯನ್‌ ಗೇಮ್ಸ್‌ನಲ್ಲಿ ( Asian Games 2023) ಭಾರತವನ್ನು ಪ್ರತಿನಿಧಿಸಿದ ಪುಟ್ಬಾಲ್‌ ಆಟಗಾರ (indian Football Goalkeeper)  ಧೀರಜ್‌ ಸಿಂಗ್‌ (Dheeraj Singh)‌ ಹಾಗೂ ಚೆಂಗ್ಲೇನ್‌ ಸಿಂಗ್ ಕಣ್ಣಿರ ಕಥೆ.

ಭಾರತದಲ್ಲಿ ಕ್ರೀಡೆಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಕ್ರೀಡಾಪಟುಗಳು ನೆಮ್ಮದಿಯ ಬದುಕು ಕಾಣುತ್ತಿದ್ದಾರೆ ಅಂತ ಭಾವಿಸಿಕೊಂಡವರೇ ಹೆಚ್ಚು. ಆದ್ರೆ ಸ್ಟೋರಿ ಮಾತ್ರ ಎಂತವರ ಕಣ್ಣಲ್ಲೂ ನೀರು ತರಿಸುತ್ತದೆ. ಮನೆ ಕಳೆದುಕೊಂಡ ನೋವಲ್ಲೇ ಏಷ್ಯನ್‌ ಗೇಮ್ಸ್‌ನಲ್ಲಿ ( Asian Games 2023) ಭಾರತವನ್ನು ಪ್ರತಿನಿಧಿಸಿದ ಪುಟ್ಬಾಲ್‌ ಆಟಗಾರ (indian Football Goalkeeper)  ಧೀರಜ್‌ ಸಿಂಗ್‌ (Dheeraj Singh) ಹಾಗೂ ಮತ್ತೋರ್ವ ಆಟಗಾರ ಚೆಂಗ್ಲೇನ್‌ ಸಿಂಗ್ ಕಣ್ಣೀರ  ಕಥೆ.

ಮಣಿಪುರದ ಧೀರಜ್‌ ಸಿಂಗ್‌ ಭಾರತ ಪುಟ್ಬಾಲ್‌ ತಂಡದ ಗೋಲ್‌ ಕೀಪರ್.‌ ಚೆಂಗ್ಲೇನ್‌ ಸಿಂಗ್ ಕೂಡ ಭಾರತ ಪುಟ್ಪಾಲ್‌ ಆಟಗಾರ. ಚೆಂಗ್ಲೇನ್‌ ಸಿಂಗ್ ಸದ್ಯ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಆದ್ರೆ ಏಷ್ಯನ್‌ ಗೇಮ್ಸ್‌ನಲ್ಲಿ ಭಾಗಿಯಾಗುವ ಕೆಲವೇ ದಿನಗಳ ಹಿಂದೆ ಇವರ ಮನೆ ಸುಟ್ಟು ಕರಕಲಾಗಿತ್ತು.

Indian football player Dheeraj Singh Tearful story , whose house was burnt down in Manipur violence, participating in Asian Games
Image Credit to Original Source

ಮನೆಯವರಿಗೆ ಉಳಿದುಕೊಳ್ಳೋದಕ್ಕೆ ಯಾವುದೇ ವ್ಯವಸ್ಥೆಯೂ ಇರಲಿಲ್ಲ. ಹೀಗಾಗಿ ಸದ್ಯ ತನ್ನ ಸ್ನೇಹಿತ ಮನೆಯಲ್ಲೇ ಮನೆಯವರನ್ನು ಬಿಟ್ಟು, ಕಣ್ಣೀರಲ್ಲೇ  ಭಾರತದ ಪುಟ್ಬಾಲ್‌ ತಂಡವನ್ನು ಪ್ರತಿನಿಧಿಸಿದ್ದಾರೆ.  ಇನ್ನು ಗೋಲ್ ಕೀಪರ್‌ ಆಗಿರುವ ಧೀರಜ್‌ ಸಿಂಗ್‌ ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಎಫ್‌ಸಿ ಗೋವಾ ತಂಡದ ಪರ ಆಡುತ್ತಿದ್ದಾರೆ.

ಇದನ್ನೂ ಓದಿ : ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ದ ಭಾರತಕ್ಕೆ 8-0 ಗೆಲುವಿನ ಮುನ್ನಡೆ : ರೋಹಿತ್‌ ಸಿಕ್ಸರ್‌ ಆರ್ಭಟಕ್ಕೆ ಪಾಕ್‌ ತತ್ತರ

ಹೀಗಾಗಿ ಧೀರಜ್‌ ಸಿಂಗ್‌ ಸದ್ಯ ಗೋವಾದಲ್ಲಿ ಅಭ್ಯಾಸವನ್ನು ನಡೆಸುತ್ತಿದ್ದಾರೆ. ಭಾರತ ದೇಶವನ್ನು ಪ್ರತಿನಿಧಿಸುತ್ತಿರುವ ನಮಗೆ ದೇಶದ ಸೇವೆಯ ಜೊತೆಗೆ ಕುಟುಂಬವನ್ನು ಕಾಪಾಡುವ ಜವಾಬ್ದಾರಿಯೂ ಇದೆ. ಕುಟುಂಬವನ್ನು ರಕ್ಷಿಸಿ ಎಂದು ಭಾರತ ಪುಟ್ಬಾಲ್‌ ತಂಡದ ಗೋಲ್‌ ಕೀಪರ್‌ ಧೀರಜ್‌ ಸಿಂಗ್‌ ಮನವಿ ಮಾಡಿಕೊಂಡಿದ್ದಾರೆ.

Indian football player Dheeraj Singh Tearful story , whose house was burnt down in Manipur violence, participating in Asian Games
Image Credit to Original Source

ಕಣ್ಣೆದುರಲ್ಲೇ ಸುಟ್ಟು ಕರಕಲಾಯ್ರು ಧೀರಜ್‌ ಸಿಂಗ್‌ ಮನೆ

ಮೇ ಕೊನೆಯ ವಾರದಲ್ಲಿ ಧೀರಜ್‌ ಸಿಂಗ್‌ ಮನೆಯಲ್ಲಿದ್ದರು. ಅದೇ ಹೊತ್ತಲ್ಲೇ ಮಣಿಪುರ ಗಲಭೆ ಮಿತಿಮೀರಿತ್ತು. ನಿತ್ಯವೂ ಗುಂಡಿನ ಸದ್ದು, ಧೀರಜ್‌ ಸಿಂಗ್‌ ಕಣ್ಣೆದುರಲ್ಲೇ ಕಟ್ಟಡಗಳು ಬೆಂಕಿಗೆ ಆಹುತಿಯಾಗಿದ್ದವು. ಧೀರಜ್‌ ಸಿಂಗ್‌ ಅವರ ಮನೆಯೂ ಕಣ್ಣೆದುರಲ್ಲೇ ಬೆಂಕಿಯ ಕೆನ್ನಾಲಗೆಗೆ ಸುಟ್ಟು ಕರಕಲಾಗಿದೆ.

ಇದನ್ನೂ ಓದಿ : ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯ : 3.5 ಕೋಟಿ Realtime ವೀಕ್ಷಣೆ : ಜಾಗತಿಕ ಸ್ಟ್ರೀಮಿಂಗ್‌ ದಾಖಲೆ ಬರೆದ ಡಿಸ್ನಿ ಹಾಟ್‌ಸ್ಟಾರ್‌

ಆದರೆ ಮಣಿಪುರದ ಪರಿಸ್ಥಿತಿ ಸುಧಾರಿಸಲೇ ಇಲ್ಲ. ಮಣಿಪುರದ ಬಡ ಮಕ್ಕಳಿಗೆ ಪುಟ್ಬಾಲ್‌ ತರಬೇತಿ ನೀಡುವ ಸಲುವಾಗಿ ಆರಂಭಿಸಿದ್ದ ಟರ್ಫ್‌ ಕೂಡ ಬೆಂಕಿಗೆ ಆಹುತಿಯಾಗಿದೆ. ಮನೆ ನಿರ್ಮಾಣ ಮಾಡುವುದಕ್ಕೆ ಧೀರಜ್‌ ಸಿಂಗ್‌ ಇಂದ ಸಾಧ್ಯವಾಗಲೇ ಇಲ್ಲ. ಕಳೆದ ಐದು ತಿಂಗಳಿನಿಂದಲೂ ಸಹಾಯಕ್ಕಾಗಿ ಮನವಿ ಮಾಡುತ್ತಿದ್ದಾರೆ.

ಮನೆ ಕಳೆದುಕೊಂಡ ನೋವಲ್ಲೇ ಜೀವನ ಸಾಗಿಸುತ್ತಿದ್ದ ಧೀರಜ್‌ ಸಿಂಗ್‌ಗೆ ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ಕರೆ ಬಂದಿತ್ತು. ಹೀಗಾಗಿ ಭಾರತ ತಂಡದ ಮತ್ತೋರ್ವ ಆಟಗಾರ, ಧೀರಜ್‌ ಸಿಂಗ್‌ ಮನೆಯಲ್ಲಿ ತನ್ನ ಕುಟುಂಬದವರನ್ನು ಇರಿಸಿ ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದರು.

Indian football player Dheeraj Singh Tearful story , whose house was burnt down in Manipur violence, participating in Asian Games

Comments are closed.