ಕದ್ರಿ ದೇಗುಲ ಪ್ರವೇಶಿಸಿದ ಅಪರಿಚಿತ ಯುವಕರು : ಬೈಕ್‌, ಮೂವರು ಪೊಲೀಸರ ವಶಕ್ಕೆ

ಮಂಗಳೂರು : ಪುರಾಣ ಪ್ರಸಿದ್ದ ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನ (Kadri Shree Manjunatha Temple) ಉಗ್ರರ ಟಾರ್ಗೆಟ್‌ ಆಗಿತ್ತು ಅನ್ನೋದು ಉಗ್ರ ಶಾರೀಕ್‌ ನಿಂದ ಬಯಲಾಗಿತ್ತು. ಇದೀಗ ಕದ್ರಿ ದೇವಾಲಯಕ್ಕೆ ಮೂವರು ಅಪರಿಚಿತ ಯುವಕರು ಬೈಕಿನೊಂದಿಗೆ ನುಗ್ಗುವ ಮೂಲಕ ಕೆಲ ಕಾಲ ಆತಂಕ ಸೃಷ್ಟಿಸಿದ್ದಾರೆ. ಸದ್ಯ ಸ್ಥಳೀಯರು ಮೂವರು ಯುವಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಸೈಗೋಳಿಯ ನಿವಾಸಿಗಳಾದ ಫಾರೂಕ್‌, ಜಾಫರ್‌ ಹಾಗೂ ಹಸನ್‌ ಶಾಹಿನ್‌ ಎಂಬವರೇ ಪೊಲೀಸರ ವಶದಲ್ಲಿರುವ ಯುವಕರು. ನಿನ್ನೆ ಮೂವರು ಯುವಕರು ಏಕಾಏಕಿಯಾಗಿ ಬೈಕನಲ್ಲಿ ಕದ್ರಿ ದೇವಾಲಯವನ್ನು(Kadri Shree Manjunatha Temple) ಪ್ರವೇಶಿಸಿದ್ದರು. ಮಂಗಳೂರಲ್ಲಿ ಕುಕ್ಕರ್‌ ಬಾಂಬ್‌ ಸ್ಪೋಟಿಸಿದ್ದ ಉಗ್ರ ಶಾರೀಕ್‌ ಪ್ರಮುಖ ಹಿಂದೂ ದೇವಾಲಯವಾಗಿರುವ ಕದ್ರಿ ಮಂಜುನಾಥನ ದೇವಸ್ಥಾನವನ್ನು ಸ್ಪೋಟ ಮಾಡಲು ಸಂಚು ರೂಪಿಸಿದ್ದ ಅನ್ನೋದು ತನಿಖೆಯಿಂದ ಬಯಲಾಗಿತ್ತು. ಹೀಗಾಗಿ ಮೂವರು ಯುವಕರು ದೇವಾಲಯಕ್ಕೆ ನುಗ್ಗಿರುವ ಘಟನೆಯನ್ನು ಮಂಗಳೂರು ನಗರ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಮಂಗಳೂರಿನಲ್ಲಿರುವ ಪ್ರಮುಖ ದೇವಾಲಯಗಳಾಗಿರುವ ಮಂಗಳಾದೇವಿ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ ಕೂಡ ಉಗ್ರರ ಟಾರ್ಗೆಟ್‌ ಆಗಿತ್ತು ಅನ್ನೋದು ಶಾರೀಕ್‌ ಹೇಳಿಕೆಯಿಂದ ಬಯಲಾಗಿತ್ತು. ಅದ್ರಲ್ಲೂ ಕುದ್ರೋಳಿ ಮಂಜುನಾಥ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವದ ಸಂದರ್ಭದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಿದ್ದು, ಇದೇ ವೇಳೆಯಲ್ಲಿ ಸ್ಪೋಟಕ್ಕೆ ಸಂಚರು ನಡೆಸಿದ್ದ ಅನ್ನೋದು ಬಯಲಾಗಿತ್ತು.

ಇದನ್ನೂ ಓದಿ : ಶಿವಮೊಗ್ಗ ಬಸ್‌ ಅಪಘಾತದಲ್ಲಿ ಇಬ್ಬರು ಸಾವು : 30 ಕ್ಕೂ ಅಧಿಕ ಮಂದಿಗೆ ಗಾಯ

ಇದನ್ನೂ ಓದಿ : ಶಾಲಾ ಮಕ್ಕಳ ಮೇಲೆ ಹರಿದ ಕಾರು : 3 ವಿದ್ಯಾರ್ಥಿಗಳ ಸಾವು, ಮೂವರು ಗಂಭೀರ

mangaluru Three muslim youths entered to Kadri Shree Manjunatha Temple with bike

Comments are closed.