ಪಿಎಂ ಕಿಸಾನ್ ಯೋಜನೆ : 14ನೇ ಕಂತು ಪಡೆಯಲು ಅರ್ಹರಲ್ಲದ ರೈತರ ಪಟ್ಟಿಯಲ್ಲಿ ನೀವು ಇದ್ದೀರಾ ? ಇಲ್ಲಿ ಪರಿಶೀಲಿಸಿ

ನವದೆಹಲಿ : ಪಿಎಂ ಕಿಸಾನ್ ಯೋಜನೆಯ ಇತ್ತೀಚಿನ ಕಂತುಗಳಿಗಾಗಿ ಸಾವಿರಾರು ಫಲಾನುಭವಿಗಳು ಕಾತರದಿಂದ (PM Kisan 14th Installment News)‌ ಕಾಯುತ್ತಿದ್ದಾರೆ. ಈ ಯೋಜನೆಯ 14 ನೇ ಕಂತನ್ನು ಪ್ರಧಾನಿ ಮೋದಿ ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆದರೆ 14ನೇ ಕಂತಿನ ಬಿಡುಗಡೆಯ ದಿನಾಂಕವನ್ನು ಕೇಂದ್ರ ಸರಕಾರ ಇನ್ನೂ ಖಚಿತಪಡಿಸಿಲ್ಲ. ಆದರೆ, ಮೇ ಅಂತ್ಯದೊಳಗೆ ಯೋಜನೆಯ ಮೊತ್ತ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪಿಎಂ ಕಿಸಾನ್ ಯೋಜನೆಯ 13ನೇ ಕಂತು ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗಿದೆ.

ಪಿಎಂ ಕಿಸಾನ್ ಯೋಜನೆಯ ಭಾಗವಾಗಿ, ಅರ್ಹ ರೈತರಿಗೆ ವಾರ್ಷಿಕ 6 ಸಾವಿರ ರೂ.ಗಳನ್ನು ನೀಡಲಾಗುತ್ತಿದ್ದು, ಈ ಹಣವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ತಲಾ 2 ಸಾವಿರ ರೂ. ಖಾತೆ ವರ್ಗಾಯಿಸುತ್ತಿದೆ. ಹೀಗಾಗಿ ದೇಶದ ರೈತರಿಗೆ ವ್ಯವಸಾಯಕ್ಕೆ ಬೇಕಾದಂತಹ ಆರ್ಥಿಕ ನೆರವು ನೀಡಿದ್ದಂತೆ ಆಗುವುದರ ಜೊತೆಗೆ, ವ್ಯವಸಾಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದಂತೆ ಆಗುತ್ತದೆ.

PM Kisan 14th Installment : ಪ್ರಧಾನ ಮಂತ್ರಿ ಕಿಸಾನ್ ಯೋಜನೆ: 14 ನೇ ಕಂತಿಗೆ ಅರ್ಜಿ ಸಲ್ಲಿಸುವುದು ಹೇಗೆ ?

  • ಮೊದಲು, ಅಧಿಕೃತ ವೆಬ್‌ಸೈಟ್ pmkisan.gov.in ಗೆ ಲಾಗ್ ಇನ್ ಆಗಬೇಕು.
  • ನಂತರ ನೀವು ರೈತರ ವಿಭಾಗಕ್ಕೆ ಹೋಗಬೇಕು
  • ಇದರ ನಂತರ, ನೀವು ಹೊಸ ರೈತ ನೋಂದಣಿ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ
  • ನಂತರ, ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಸಲ್ಲಿಸಬೇಕಾಗುತ್ತದೆ
  • ನಂತರ ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಬೇಕು.
  • ಇದರ ನಂತರ, ನೀವು ಇತರ ಸೂಕ್ತ ವಿವರಗಳನ್ನು ಸಲ್ಲಿಸಬೇಕು
  • ಹೌದು ಆಯ್ಕೆಗಳ ಮೇಲೆ ಕ್ಲಿಕ್ ಮಾಡಿದ ನಂತರ, ನೀವು ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕು
  • ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಹೆಚ್ಚಿನ ಬಳಕೆಗಾಗಿ ಪ್ರಿಂಟ್ ತೆಗೆದುಕೊಳ್ಳಬೇಕು.

ಪ್ರಧಾನ ಮಂತ್ರಿ ಕಿಸಾನ್ ಯೋಜನೆ: ಅರ್ಹ ರೈತರು ಯಾರು ಎನ್ನುವುದನ್ನು ಹೀಗೆ ಪರಿಶೀಲಿಸಿ :
ತಮ್ಮ ಹೆಸರಿನಲ್ಲಿ ಸಾಗುವಳಿ ಭೂಮಿ ಹೊಂದಿರುವ ಜಮೀನು ಹೊಂದಿರುವ ರೈತರು ಯೋಜನೆಯಡಿ ಲಾಭ ಪಡೆಯಲು ಅರ್ಹರಾಗಿರುತ್ತಾರೆ.

ಪ್ರಧಾನ ಮಂತ್ರಿ ಕಿಸಾನ್ ಯೋಜನೆ : ಯಾರು ಅರ್ಹರಲ್ಲ ಎಂದು ಪರಿಶೀಲಿಸಿ :

  • ಸಾಂಸ್ಥಿಕ ಭೂಮಿ ಹೊಂದಿರುವವರು
  • ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ರೈತ ಕುಟುಂಬಗಳು,
  • ರಾಜ್ಯ ಅಥವಾ ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಅಥವಾ ನಿವೃತ್ತ ಅಧಿಕಾರಿಗಳು ಮತ್ತು ನೌಕರರು ರೈತ ಕುಟುಂಬಗಳು
  • ವೈದ್ಯರು, ಎಂಜಿನಿಯರ್‌ಗಳು ಮತ್ತು ವಕೀಲರಂತಹ ವೃತ್ತಿಪರರು
  • 10 ರೂ.ಗಿಂತ ಹೆಚ್ಚಿನ ಮಾಸಿಕ ಪಿಂಚಣಿ ಹೊಂದಿರುವ ನಿವೃತ್ತ ಪಿಂಚಣಿದಾರರು,
  • ಪ್ರಧಾನ ಮಂತ್ರಿ ಕಿಸಾನ್ ಯೋಜನೆ: ನೋಂದಣಿಗೆ ಅಗತ್ಯವಿರುವ ದಾಖಲೆಗಳು
  • ಆದಾಯ ಪ್ರಮಾಣಪತ್ರ
  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ ವಿವರಗಳು
  • ಕಾನೂನು ಆಸ್ತಿ ದಾಖಲೆಗಳು.

ಇದನ್ನೂ ಓದಿ : PM Kissan Yojana : ಯಾವಾಗ ಬಿಡುಗಡೆ ಆಗುತ್ತೆ ಗೊತ್ತಾ ಪಿಎಂ ಕಿಸಾನ್ 14ನೇ ಕಂತು

ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆ : ಇವರು ಸಂಪೂರ್ಣ ಹಣ ವಾಪಾಸ್‌ ಮಾಡಬೇಕು ! ಕಾರಣವೇನು ಗೊತ್ತಾ ?

ಇದನ್ನೂ ಓದಿ : Prime Minister Kisan Yojana : ಪಿಎಂ ಕಿಸಾನ್‌ ಯೋಜನೆಯ 14ನೇ ಕಂತು ಜಮೆ ಆಗಿದ್ಯಾ ? ಚೆಕ್‌ ಮಾಡಲು ಕ್ಲಿಕ್‌ ಮಾಡಿ

PM Kisan 14th Installment News: PM Kisan Scheme: Are you in the list of farmers who are not eligible for 14th installment? Check here

Comments are closed.