mask mandatory : ಸಿಎಂ ನೇತೃತ್ವದಲ್ಲಿ ತಜ್ಞರ ಸಭೆ : ರಾಜ್ಯದಲ್ಲಿ ಮತ್ತೆ ಮಾಸ್ಕ್​ ಕಡ್ಡಾಯ

ಬೆಂಗಳೂರು :mask mandatory : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಎ 2 ತಳಿ ಕೊರೊನಾ ವೈರಸ್​ ಕಾಣಿಸಿಕೊಂಡ ಬಳಿಕ ಆತಂಕ ಹೆಚ್ಚಾಗಿದೆ. ಕೊರೊನಾ 4ನೇ ಅಲೆಯು ಕರ್ನಾಟಕಕ್ಕೂ ಬಂದಪ್ಪಳಿಸಬಹುದು ಎಂಬ ಭಯದ ನಡುವೆಯೇ ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ತಜ್ಞರ ಸಭೆ ನಡೆಸಲಾಯ್ತು. ಸಿಎಂ ಗೃಹ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬೊಮ್ಮಾಯಿ ತಜ್ಞರ ಬಳಿ ಕೊರೊನಾ ನಾಲ್ಕನೇ ಅಲೆ ಸಂಭಾವ್ಯದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.


ವಿದೇಶಗಳಲ್ಲಿ ಕೊರೊನಾ ನಾಲ್ಕನೆ ಅಲೆಯ ಭೀಕರತೆ ಹಾಗೂ ಪರಿಣಾಮಗಳನ್ನು ಅಧ್ಯಯನ ಮಾಡಿರುವ ತಜ್ಞರು ಕೊರೊನಾ ನಾಲ್ಕನೇ ಅಲೆಯಲ್ಲಿ ಸೋಂಕಿನ ಸಂಖ್ಯೆ ಜಾಸ್ತಿ ಇದ್ದರೂ ಸಹ ಆಸ್ಪತ್ರೆ ದಾಖಲಾಗುವವರ ಸಂಖ್ಯೆ ಕಡಿಮೆ ಇರುತ್ತದೆ. ಕೊರೊನಾ ನಾಲ್ಕನೇ ಅಲೆಯು ಅಷ್ಟೊಂದು ಪರಿಣಾಮಕಾರಿಯಲ್ಲ. ಹಾಗಂತ ನಿರ್ಲಕ್ಷ್ಯ ಕೂಡ ಸಲ್ಲದು. ಹೀಗಾಗಿ ಮುಂಜಾಗ್ರತಾ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳುವ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.


ಸಿಎಂ ನೇತೃತ್ವದ ಸಭೆ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್​, ಕೋವಿಡ್​ ನಾಲ್ಕನೇ ಅಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆ ನಡೆಸಲಾಯ್ತು. 60 ವರ್ಷ ದಾಟಿದ ವೃದ್ಧರು ಹಾಗೂ ಕಾಯಿಲೆಯಿಂದ ಬಳಲುತ್ತಿರುವವರಿಗೆ ಬೂಸ್ಟರ್​ ಡೋಸ್​ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಇನ್ಮುಂದೆ ಮಾಸ್ಕ್​ನ್ನು ಕಡ್ಡಾಯವಾಗಿ ಧರಿಸಬೇಕು. ಮಾಸ್ಕ್​​ ಧರಿಸದೇ ಇರುವವರಿಗೆ ದಂಡ ವಿಧಿಸುವ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಆದರೆ ಮಾಸ್ಕ್​ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಎಂದು ಹೇಳಿದರು.


ಬೆಂಗಳೂರಿನಲ್ಲಿ ಕೊರೊನಾ 1.9 ಪ್ರತಿಶತ ಏರಿಕೆ ಕಂಡಿದೆ. ಕೊರೊನಾ ಲಸಿಕೆ ಪಡೆದವರೂ ಕೊರೊನಾ ಸೋಂಕಿಗೆ ಒಳಗಾಗುತ್ತಾರೆ. ಇಡೀ ವಿಶ್ವದಲ್ಲಿ ಮತ್ತೆ ಕೊರೊನಾ ಸೋಂಕು ಉಲ್ಬಣಿಸುತ್ತಿದೆ. ಹೀಗಾಗಿ ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಶೀಘ್ರದಲ್ಲಿಯೇ ಕೊರೊನಾ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.

ಇದನ್ನು ಓದಿ :Groom Arrest : ತಾಳಿ ಕಟ್ಟುವ ವೇಳೆಯಲ್ಲೇ ಅತ್ಯಾಚಾರ ಕೇಸ್‌ನಲ್ಲಿ ವರ ಅರೆಸ್ಟ್‌

ಇದನ್ನೂ ಓದಿ : PSI exam postponed : ತನಿಖೆ ಪೂರ್ಣಗೊಳ್ಳುವವರೆಗೂ ಪಿಎಸ್​ಐ ಪರೀಕ್ಷೆ ನಡೆಯುವುದಿಲ್ಲ : ಪ್ರವೀಣ್​ ಸೂದ್​

mask mandatory in the state again no penalties currently

Comments are closed.