Priyank Kharge : ಸುನೀಲ್ ಕುಮಾರ್ ಅವರೇ ಸ್ವಲ್ಪ ಕಾಮನ್ ಸೆನ್ಸ್ ಯೂಸ್ ಮಾಡಿ ಸ್ವಾಮಿ : ಪ್ರಿಯಾಂಕ ಖರ್ಗೆ

ನಾನು ಸಿ.ಎಂ ಗಿಂತ ಪ್ರಭಾವ ಶಾಲೀನ, ನಿಮ್ಮ ಗೃಹ ಸಚಿವರಿಗಿಂತ ಪ್ರಿಯಾಂಕ ಖರ್ಗೆ(Priyank Kharge) ಶಕ್ತಿ ಶಾಲೀನ, ಆರೋಪಿಗಳು ಅಂತ ಹೇಳ್ತಿದ್ದೀರಲ್ಲ ಅವರ ಜೊತೆ ನಿಮ್ಮ ಬಿಜೆಪಿ ನಾಯಕರೇ ಫೋಟೋ ತೆಗೆಸಿಕೊಂಡಿದ್ದಾರೆ. ನಿಮ್ಮ ಬಿಜೆಪಿ ಎಂಪಿನೇ ಪರೀಕ್ಷಾ ಕೇಂದ್ರ ಮಾಡಿ ಅಂತ ಪತ್ರ ಕೊಡ್ತಾರೆ. ಅವರಿಗೆ ನೋಟೀಸ್ ಕೊಡಿ ಸ್ವಾಮೀ ಎಂದು ಕಾಂಗ್ರೆಸ್ ಮುಖಂಡ ಇಂಧನ ಸಚಿವ ಸುನೀಲ್ ಕುಮಾರ್ ಅವರಿಗೆ ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದ್ದಾರೆ. ಸಚಿವ ಸುನೀಲ್ ಕುಮಾರ್, ಪಿಎಸ್ ಐ ಪರೀಕ್ಷೆ ವಿಚಾರವಾಗಿ ಕಾಂಗ್ರೆಸ್ ನ ಪ್ರಿಯಾಂಕ ಖರ್ಗೆಯವರನ್ನು ತನಿಖೆಗೆ ಒಳಪಡಿಸಿದರೆ ಎಲ್ಲ ಅಕ್ರಮಗಳು ಬಹಿರಂಗವಾಗುತ್ತವೆ ಎಂದು ಹೇಳಿಕೆ ನೀಡಿದ್ದರು.

ತಪ್ಪು, ಅಕ್ರಮ ಮಾಡಿರೋದು ನೀವು, ನಿಮ್ಮ ಪಕ್ಷದವರು. ಹೀಗಿರುವಾಗ ಪ್ರಿಯಾಂಕ ಖರ್ಗೆಗೆ ತನಿಖೆ ಒಳಪಡಿಸಿದರೆ ಎಲ್ಲಾ ಗೊತ್ತಾಗುತ್ತೆ ಅಂತೀರಲ್ಲ, ಹೀಗೆ ಹೇಳಿಕೆ ನೀಡೋಕು ಮೊದಲು ಸ್ವಲ್ಪ ಕಾಮನ್ ಸೆನ್ಸ್ ಯೂಸ್ ಮಾಡಿ ಸ್ವಾಮೀ ಎಂದು ತರಾಟೆಗೆ ತೆಗೆದುಕೊಂಡರು. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಅಂಥಲ್ಲ, ಯಾವ ಪಕ್ಷದವರೇ ಆಗಲಿ ಯುವಕರ ಭವಿಷ್ಯದಲ್ಲಿ ಚೆಲ್ಲಾಟ ಆಡುತ್ತಿದ್ದರೆ ಮೊದಲು ಒದ್ದು ಒಳಗೆಹಾಕಿ ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಪಿಎಸ್ ಐ ಪರೀಕ್ಷಾ ಅಕ್ರಮಕ್ಕೆ ತೆಗೆದುಕೊಂಡಿರುವ ದುಡ್ಡು ಎಲ್ಲೆಲ್ಲಿ ಹೋಗಿದೆ ಅಂತ ಇವರಿಗೆ ಹುಡುಕೋಕೆ ಆಗ್ತಿಲ್ಲ. ಹುಡುಕ್ತಾ ಹೋದರೆ, ವಿಧಾನಸೌಧಕ್ಕೂ ಬರಬೇಕಾಗುತ್ತದೆ. ಬಿಜೆಪಿ ಶಾಸಕರು ಮನೆಗೆ ಹೋಗಬೇಕಾಗುತ್ತೆ. ಇಲಾಖೆ ಅಧಿಕಾರಿಗಳ ಕಚೇರಿಗಳಿಗೂ ಅಲೆಯಬೇಕಾಗುತ್ತದೆ. ಈ ಪ್ರಕರಣ ಕೇವಲ ಕಲ್ಬುರ್ಗಿಗೆ ಮಾತ್ರ ಸೀಮಿತ ಅಲ್ಲ. ಕಲ್ಬುರ್ಗಿಯಿಂದ ಹೊರಗೆ ಬನ್ನಿ ಎಂದು ಆಗ್ರಹಿಸಿದರು.

ಪರೀಕ್ಷೆ ಕೇಂದ್ರಕ್ಕೆ ಅನುಮತಿ ಕೊಡೋರು ಯಾರು, ನಿಮ್ಮ ಪಕ್ಷದವರೇ ತಾನೇ. ಮತ್ತೆ ಹೇಗೆ ಕಾಂಗ್ರೆಸ್ ಪಕ್ಷದ ತಲೆಯಮೇಲೆ ಆರೋಪನ ಇಡೋಕೆ ಬರ್ತೀರಿ. ಇವೆಲ್ಲ ನಿಮ್ಮ ಗೃಹಸಚಿವರ ವ್ಯಾಪ್ತಿಗೆ ಬರುತ್ತದೆ. ಜನವರಿ ತಿಂಗಳಲ್ಲಿ ಅಭ್ಯರ್ಥಿಗಳು ಗೃಹಸಚಿವರು ಭೇಟಿಯಾಗಿರುವ ಮಾಹಿತಿಯನ್ನು ಬಿಜೆಪಿ ಪಕ್ಷವೇ ಟ್ವೀಟ್ ಮಾಡಿದೆ. ಜನವರಿ 25 ನೇ ತಾರೀಖು ಡಿಸಿಗೆ ಮನವಿ ಮಾಡಿದ್ದಾರೆ. ಪಿಎಸ್ಐ ಪರೀಕ್ಷೆಯಲ್ಲಿ ಯಾರು ಉತ್ತೀರ್ಣರಾಗಿಲ್ಲ ಅವರು ಈ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಅಂತ ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ ಶಿವಮೊಗ್ಗದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಖರ್ಗೆ ದಾಖಲೆ ನೀಡಿದರು.

ಮಾನ್ಯ ಮುಖ್ಯಮಂತ್ರಿಗಳೇ, ನಿಮ್ಮ ಪಕ್ಷದವರೇ ಆದ, ಯತ್ನಾಳ್ ಅವರ ಸಲಹೆ ತಗೋಳಿ. ಮೊನ್ನೆ ಯತ್ನಾಳ್ ಅವರು ನಮಗೆ ಒಳ್ಳೆ ಶಕ್ತಿಶಾಲಿ ಗೃಹಸಚಿವರು ಬೇಕು. ಪತ್ರಿಕೆಯಲ್ಲಿ ಜಾಹೀರಾತು ನೀಡಿ ಅಂತ ಒಳ್ಳೆ ಸಲಹೆ ನೀಡಿದ್ದಾರೆ. ದಯಮಾಡಿ ಒಳ್ಳೆ ಗೃಹಸಚಿವರನ್ನು ಇಟ್ಟುಕೊಳ್ಳಿ ಎಂದು ಕಟಕಿಯಾಡಿದರು.

ಇದನ್ನೂ ಓದಿ :Tannirubavi Beach : ತಣ್ಣೀರುಬಾವಿ ಬೀಚ್‌ನಲ್ಲಿ ಅಪಾಯಕ್ಕೆ ಸಿಲುಕಿದ್ದ ಐವರು ವಿದ್ಯಾರ್ಥಿಗಳ ರಕ್ಷಣೆ

ಇದನ್ನೂ ಓದಿ : Emergency Meeting Karnataka : ಕರ್ನಾಟಕದಲ್ಲಿ ಕೋವಿಡ್ 4ನೇ ಅಲೆಯ ಭೀತಿ : ತುರ್ತು ಸಭೆ ಕರೆದ ಸಿಎಂ ಬಸವರಾಜ್‌ ಬೊಮ್ಮಾಯಿ

(Priyank Kharge said sunilkumar please use your commonsense)

Comments are closed.