ಮೂಡದ ಒಮ್ಮತ : ರಾಜ್ಯದಲ್ಲಿ ಮೆಡಿಕಲ್ ಶಾಪ್ ಸಂಪೂರ್ಣ ಬಂದ್
ಆದರೆ ಕರ್ನಾಟಕದಲ್ಲಿ ಮಾತ್ರ ಮೆಡಿಕಲ್ ಮೆಡಿಕಲ್ ಶಾಪ್ ಗಳು ಬಂದ್ ಗೆ ಪೂರ್ಣ ಪ್ರಮಾಣದ ಬೆಂಬಲ ವ್ಯಕ್ತವಾಗಿಲ್ಲ. ಅಲ್ಲಲ್ಲಿ ಮೆಡಿಕಲ್ ಶಾಪ್ ಗಳು ಓಪನ್ ಆಗಿದ್ದು, ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ದೇಶಾದ್ಯಂತ ಆನ್‌ಲೈನ್ ಇ-ಫಾರ್ಮಸಿಗಳ ಅಕ್ರಮ ದರ ಸಮರ ಹಾಗೂ ನಿಯಮ ಉಲ್ಲಂಘನೆಗಳ ವಿರುದ್ಧ ಅಖಿಲ ಭಾರತ ರಸಾಯನಶಾಸ್ತ್ರಜ್ಞರು ಮತ್ತು ಔಷಧವ್ಯಾಪಾರಿಗಳ ಸಂಘಟನೆ 24 ಗಂಟೆಗಳ ಬೃಹತ್ ಬಂದ್‌ಗೆ ಕರೆ ನೀಡಿದೆ.ಈ ಹಿನ್ನೆಲೆಯಲ್ಲಿ ಇಂದು ಇಡೀ ದೇಶದ 12 ಲಕ್ಷಕ್ಕೂ ಅಧಿಕ ಮೆಡಿಕಲ್ ಶಾಪ್‌ಗಳು ಇಂದು ಬೀಗ ಹಾಕಿವೆ.
ಆದರೆ ಕರ್ನಾಟಕದಲ್ಲಿ ಮಾತ್ರ ಮೆಡಿಕಲ್ ಮೆಡಿಕಲ್ ಶಾಪ್ ಗಳು ಬಂದ್ ಗೆ ಪೂರ್ಣ ಪ್ರಮಾಣದ ಬೆಂಬಲ ವ್ಯಕ್ತವಾಗಿಲ್ಲ. ಅಲ್ಲಲ್ಲಿ ಮೆಡಿಕಲ್ ಶಾಪ್ ಗಳು ಓಪನ್ ಆಗಿದ್ದು, ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ರಾಜ್ಯದ ಎರಡು ಪ್ರಮುಖ ಸಂಘಟನೆಗಳ ನಡುವೆ ಉಂಟಾದ ಆಂತರಿಕ ಕಿತ್ತಾಟದಿಂದ ಒಮ್ಮತ ಮೂಡದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದು ಮೆಡಿಕಲ್ ಮೆಡಿಕಲ್ ಶಾಪ್ ಗಳು ಕಾರ್ಯನಿರ್ವಹಿಸುತ್ತಿಲ್ಲ. ರಾಷ್ಟ್ರೀಯ ಸಂಘಟನೆಯಾದ AIOCD ನೀಡಿದ್ದ ಬಂದ್ ಕರೆಗೆ ಕರ್ನಾಟಕ ರಸಾಯನಶಾಸ್ತ್ರಜ್ಞರು ಮತ್ತು ಔಷಧವ್ಯಾಪಾರಿಗಳ ಸಂಘ KCDA ಸಂಪೂರ್ಣ ಬೆಂಬಲ ನೀಡಿದೆ.
ಆದರೆ ಕರ್ನಾಟಕ ಫಾರ್ಮಸಿಸ್ಟ್ಸ್ ಮತ್ತು ಡ್ರಗ್ಗಿಸ್ಟ್ಸ್ ಅಸೋಸಿಯೇಷನ್ KPRDO ಬಂದ್‌ಗೆ ಬೆಂಬಲ ನೀಡಲು ನಿರಾಕರಿಸಿರವುದೇ ಈ ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ಇಂದು ಬಹುತೇಕ ಮೆಡಿಕಲ್ ಶಾಪ್ ಗಳು ಕಾರ್ಯನಿರ್ವಹಿಸುತ್ತಿವೆ.
ಪ್ರಮುಖ ಔಷಧಿ ಸಂಘಟನೆಗಳ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಕೊನೆಯ ಕ್ಷಣದಲ್ಲಿ ಕೆಲ ಔಷಧಿ ಮಳಿಗೆಗಳು ನಿಂದ ಹಿಂದೆ ಸರಿದಿವೆ. ಆದರೆ ಈ ಆಂತರಿಕ ಕಚ್ಚಾಟದಿಂದಾಗಿ ಸಾರ್ವಜನಿಕರಿಗೆ ಲಾಭವೇ ಆಗಿದೆ. ಇದು ಭಾಗಶಃ ಔಷಧಿ ಮಳಿಗೆಗಳು ತೆರೆದಿರುವುದರಿಂದ ಸಾರ್ವಜನಿಕ ಸೇವೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. ಹೀಗಾಗಿ ಔಷಧಿ ಮಳಿಗೆಗಳ ಬಂದ್ ಯಶಸ್ವಿಯಾಗುವುದು ಡೌಟೇ ಆಗಿದೆ .



