Udupi power cut: ಉಡುಪಿ: ಮಾ. 24 ರಂದು ಜಿಲ್ಲೆಯಲ್ಲಿ ವಿದ್ಯುತ್‌ ವ್ಯತ್ಯಯ: ಮೆಸ್ಕಾಂ ಪ್ರಕಟಣೆ

ಉಡುಪಿ : (Udupi power cut) ಜಿಲ್ಲಾ ವ್ಯಾಪ್ತಿಯ ವಿದ್ಯುತ್‌ ಉಪಕೇಂದ್ರ ಹಿರಿಯಡಕದಲ್ಲಿ ವಾರ್ಷಿಕ ವಿದ್ಯುತ್‌ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವ ಕಾರಣದಿಂದ ಮಾರ್ಚ್‌ 24 ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್‌ ಪೂರೈಕಯಲ್ಲಿ ವ್ಯತ್ಯಯವಾಗಲಿರುವುದಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

110/33/11 ಕೆವಿ ಹಿರಿಯಡ್ಕ ವಿದ್ಯುತ್‌ ಉಪಕೇಂದ್ರದಲ್ಲಿ 110 ಕೆವಿ ಬಸ್‌ ಬಾರ್‌ ಮತ್ತು ಇದಕ್ಕೆ ಸಂಬಂಧಿಸಿದ ಉಪಕರಣಗಳ ವಾರ್ಷಿಕ ನಿರ್ವಹಣೆಯ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ಹಿರಿಯಡ್ಕ ವಿದ್ಯುತ್‌ ಉಪಕೇಂದ್ರದಿಂದ ವಿದ್ಯುತ್‌ ಪಡೆಯುವ 110 ಕೆವಿ ಮಧುವನ, ಕುಂದಾಪುರ ಮತ್ತು ನಾವುಂದ ವಿದ್ಯುತ್‌ ಉಪಕೇಂದ್ರಗಳಿಗೆ ವಿದ್ಯುತ್‌ ಅಡಚಣೆಯಾಗಲಿದೆ.

110 ಕೆವಿ ವಿದ್ಯುತ್‌ ಉಪಕೇಂದ್ರ ಹಿರಿಯಡಕದಿಂದ ಹೊರಡುವ 133 ಕೆವಿ ಮಾರ್ಗಗಳಾದ ಹೆಬ್ರಿ, ಮಾಹೆ, ಪರ್ಕಳ ಮತ್ತು ಎಣ್ಣೆಹೊಳೆ ಹಾಗೂ 11 ಕೆವಿ ಹಿರಿಯಡಕ, ಬಜೆ, ಪೇರ್ಡೂರು, ಮಾಣೈ, ಹಿರೆಬೆಟ್ಟು ಮಾರ್ಗಗಳಲ್ಲಿ ವಿದ್ಯುತ್‌ ಅಡಚಣೆಯಾಗಲಿದೆ. ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ನಿರ್ವಹಣಾ ಕಾರ್ಯ ನಡೆಯಲಿದ್ದು, ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ : Karnataka assembly election : ಅಬಕಾರಿ ಅಕ್ರಮ ತಡೆಗೆ ವಿಶೇಷ ತಂಡ

ಇದನ್ನೂ ಓದಿ : Karnataka weather : ಕರಾವಳಿ ಸೇರಿ‌ ರಾಜ್ಯದ ಹಲವೆಡೆ 5 ದಿನ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ಇದನ್ನೂ ಓದಿ : ಕರಾವಳಿ ಪ್ರದೇಶದಲ್ಲಿ ತಾಪಮಾನ ಹೆಚ್ಚಳ: ಶಾಲೆಗಳಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಸೂಚನೆ

Udupi power cut: Udupi: Mon. Power outage in district on 24th: Mescom announcement

Comments are closed.