Kannada Flag Fire : ಕನ್ನಡ ಬಾವುಟಕ್ಕೆ ಬೆಂಕಿ: ಕೆರಳಿದ ಕರವೇ, ದಚ್ಚು, ಜಗ್ಗೇಶ್ ಆಕ್ರೋಶ

ಬೆಳಗಾವಿಯಲ್ಲಿನ ಕನ್ನಡಿಗರು ಹಾಗೂ ಮರಾಠಿಗರ ( MES ) ನಡುವಿನ ಸಮರ ಸದ್ಯಕ್ಕೆ ಕೊನೆಯಾಗುವ‌ಂತೆ ತೋರುತ್ತಿಲ್ಲ. ಕನ್ನಡದ ಬಗ್ಗೆ ಅಸಡ್ಡೆ ತೋರಿದ್ದಕ್ಕೆ ಪ್ರತಿಭಟನೆಗೆ ಮುಂದಾಗಿದ್ದಕ್ಕೆ ಎಂಇಎಸ್ ಮುಖಂಡನ‌ ಮುಖಕ್ಕೆ ಕನ್ನಡಿಗರು ಮಸಿ ಬಳಿದಿದ್ದರೇ ಅತ್ತ ಶಿವಸೇನೆ ಕನ್ನಡದ ಬಾವುಟ ಸುಡುವ (Kannada Flag Fire) ಮೂಲಕ ಉದ್ಧಟತನ ತೋರಿದ್ದು ಶಿವಸೇನೆಯ ಪುಂಡಾಟಕ್ಕೆ ಕರ್ನಾಟಕದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಸ್ಯಾಂಡಲ್ ವುಡ್ ನಟರು (Actor Darshan) ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಎರಡು ದಿನಗಳ ಹಿಂದೆ ಎಂಇಎಸ್ ಮುಖಂಡನ ಮುಖಕ್ಕೆ ಮಸಿ ಬಳಿಯಲಾಗಿತ್ತು. ಇದನ್ನು ಖಂಡಿಸಿ ಎಂಇಎಸ್ ಕಾರ್ಯಕರ್ತರು ಬೆಳಗಾವಿ ಬಂದ್ ಗೆ ಕರೆ ನೀಡಿದ್ದರು. ಆದರೆ ಬಂದ್ ಯಶಸ್ವಿಯಾಗಲಿಲ್ಲ. ಆದರೂ ಹಟ ಬಿಡದ ಎಂಇಎಸ್ ಕನ್ನಡಿಗರ ವಿರುದ್ಧ ತನ್ನ ಪಿತೂರಿ ಮುಂದುವರೆಸಿದ್ದು ಶಿವಸೇನೆಯ ಸಹಕಾರದೊಂದಿಗೆ ಕನ್ನಡದ ಬಾವುಟಕ್ಕೆ ಬೆಂಕಿ‌ ಹಚ್ಚಿದೆ. ಕೊಲ್ಲಾಪುರದಲ್ಲಿ ಈ ಘಟನೆ ನಡೆದಿದ್ದು ಕನ್ನಡದ ಗೂಂಡಾಗಳಿಗೆ ದಿಕ್ಕಾರ ಎಂದು ಕೂಗಿ ಬಾವುಟಕ್ಕೆ ಬೆಂಕಿ ಹಚ್ಚಿದೆ.ಕನ್ನಡದ ಬಾವುಟಕ್ಕೆ ಶಿವಸೇನೆ ಬೆಂಕಿ ಹಚ್ಚಿದ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ ರಾಯಚೂರಿನಲ್ಲಿ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.

ಅಲ್ಲದೇ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲೂ ಕರವೇ ಕಾರ್ಯಕರ್ತರು ಬೆಳಗಾವಿ ಎಂಇಎಸ್ ಹಾಗೂ ಶಿವಸೇನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಉದ್ಧವ್ ಠಾಕ್ರೆ ಪ್ರತಿಕೃತಿ ದಹಿಸಿದ್ದಾರೆ. ಇನ್ನು ಶಿವಸೇನೆ ಉದ್ಧಟತನ ಹಾಗೂ ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟ ವಿಚಾರಕ್ಕೆ ಸ್ಯಾಂಡಲ್ ವುಡ್ ನಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಬಗ್ಗೆ ಟ್ವೀಟ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಹಿರಿಯ ನಟ ಜಗ್ಗೇಶ್, ಕನ್ನಡ ಬಾವುಟಕ್ಕೆ ಅಪಮಾನಿಸಿದವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ. ಅಲ್ಲದೇ ತಮ್ಮ ಟ್ವೀಟ್ ಗೆ ಸಿಎಂ ಬೊಮ್ಮಾಯಿಯವರನ್ನು ಟ್ಯಾಗ್ ಮಾಡಿದ್ದಾರೆ. ಅಲ್ಲದೇ ಕನ್ನಡಕ್ಕಾಗಿ ಹೋರಾಡಿದ ಸೈನಿಕರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಕೊನೆಗೆ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂದಿದ್ದಾರೆ.

ಕೇವಲ ನಟ ಜಗ್ಗೇಶ್ ಮಾತ್ರವಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳು ವಂತೆ ಒತ್ತಾಯಿಸಿದ್ದಾರೆ. ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆತಕ್ಕ ಶಿಕ್ಷೆಯಾಗಲೇಬೇಕು. ನಿಜವಾಗಿ ಕನ್ನಡದ ಸೇವಕರನ್ನು ಬಿಡುಗಡೆ ಮಾಡಿ ಎಂದಿದ್ದಾರೆ.

ಇದನ್ನೂ ಓದಿ : Children trafficked to Bengaluru: ಒಂದೇ ವರ್ಷದಲ್ಲಿ 244 ಮಕ್ಕಳ ಸಾಗಣೆ ಪ್ರಕರಣ ಭೇದಿಸಿದ ಪೊಲೀಸರು

ಇದನ್ನೂ ಓದಿ : Omicron Treatment : ಹಳೆ ತಪ್ಪಿನಿಂದ ಪಾಠ ಕಲಿತ ಬಿಬಿಎಂಪಿ : ನಗರದಲ್ಲಿ ಓಮೈಕ್ರಾನ್ ಚಿಕಿತ್ಸೆಗೆ ಆಸ್ಪತ್ರೆಗಳು ಸಿದ್ಧ

( MES who set fire to Kannada flag : Actor Darshan Jaggesh Prajwal Devraj is outraged)

Comments are closed.