milk products rate : ಇಂದಿನಿಂದ ನಂದಿನಿ ಮೊಸರು, ಮಜ್ಜಿಗೆ ದರ ಹೆಚ್ಚಳ : ಶೀಘ್ರದಲ್ಲೇ ಬೆಲೆ ಇಳಿಕೆಗೆ ಸಿಎಂ ಅಭಯ

ಬೆಂಗಳೂರು : milk products rate :ಕೇಂದ್ರ ಸರ್ಕಾರವು ಹಾಲಿನ ಉತ್ಪನ್ನಗಳ ಮೇಲೆ ಶೇಕಡಾ 5ರಷ್ಟು ಸರಕು ಸೇವಾ ತೆರಿಗೆ ವಿಧಿಸಿರುವ ಪರಿಣಾಮವಾಗಿ ಇಂದಿನಿಂದ ರಾಜ್ಯದಲ್ಲಿ ನಂದಿನಿ ಹಾಲು ಹೊರತುಪಡಿಸಿ, ನಂದಿನಿ ಮೊಸರು, ಮಜ್ಜಿಗೆ ಹಾಗೂ ಸಿಹಿ ಲಸ್ಸಿಗಳ ಬೆಲೆಯಲ್ಲಿ ಏರಿಕೆ ಕಂಡಿದೆ. ಸೋಮವಾರದಿಂದ ಪರಿಷ್ಕೃತ ದರ ರಾಜ್ಯದಲ್ಲಿ ಜಾರಿಗೆ ಬರುವಂತೆ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳ ಆದೇಶ ಹೊರಡಿಸಿದೆ.‘
ಇಂದಿನಿಂದ ಏರಿಕೆಯಾದ ನಂದಿನಿ ಹಾಲಿನ ಉತ್ಪನ್ನಗಳ ವಿವರ ಈ ಕೆಳಗಿನಂತಿದೆ :


ಉತ್ಪನ್ನ ಪ್ರಮಾಣ ಹಿಂದಿನ ದರ (ರೂ.) ಪರಿಷ್ಕೃತ ದರ (ರೂ.)
ಮೊಸರು 200 ಗ್ರಾಂ 10 12
ಮೊಸರು 500 ಗ್ರಾಂ 22 24
ಮೊಸರು 1000 ಗ್ರಾಂ 43 46
ಮಜ್ಜಿಗೆ 200 ಮಿ.ಲೀ 7 8
ಮಜ್ಜಿಗೆ ಟೆಟ್ರಾ ಪ್ಯಾಕ್ 200ಮಿ.ಲೀ 10 11
ಮಜ್ಜಿಗೆ ಪೆಟ್‌ ಬಾಟಲ್‌ 200 ಮಿ.ಲೀ 12 13
ಲಸ್ಸಿ ಸ್ಯಾಚೆಟ್‌ 200 ಮಿ.ಲೀ 10 11
ಲಸ್ಸಿ ಟೆಟ್ರಾ ಪ್ಯಾಕ್‌ 200 ಮಿ.ಲೀ 20 21
ಲಸ್ಸಿ ಟೆಟ್ರಾ ಪ್ಯಾಕ್‌ ಮ್ಯಾಂಗೊ 200 ಮಿ.ಲೀ 25 27
ಲಸ್ಸಿ ಪೆಟ್‌ ಬಾಟಲ್‌ 200 ಮಿ.ಲೀ 15 16

ಕೇಂದ್ರ ಸರ್ಕಾರವು ಜಿಎಸ್​ಟಿ ವಿಧಿಸಿದ ಬಳಿಕ ದರ ಪರಿಷ್ಕರಣೆಯಾಗಿದ್ದು ಈಗಾಗಲೆ ಹಳೆ ಬೆಲೆಯ ಮುದ್ರಣ ಹೊಂದಿರುವ ಸ್ಯಾಚೆಟ್​ಗಳ ಮೇಲೆ ಇಂಕ್​​ಜೆಟ್​ ಮೂಲಕ ಪರಿಷ್ಕೃತ ದರ ಮುದ್ರಿಸಲಾಗುತ್ತದೆ. ಆ ಬಳಿಕವೇ ಮಾರುಕಟ್ಟೆಗೆ ಉತ್ಪನ್ನಗಳನ್ನು ಕಳಿಸಲಾಗುತ್ತದೆ ಎಂದು ಕೆಎಂಎಫ್​ ಹೇಳಿದೆ.

ಇನ್ನು ನಂದಿನಿ ಉತ್ಪನ್ನಗಳ ದರ ಏರಿಕೆ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ದರ ಹೆಚ್ಚಳ ಕುರಿತಂತೆ ಮಾಹಿತಿಯನ್ನು ಕಲೆ ಹಾಕಲಾಗಿದೆ. ಬೆಲೆ ಇಳಿಕೆ ಮಾಡುವ ಬಗ್ಗೆ ಕೆಎಂಎಫ್​ಗೆ ಸೂಚನೆ ನೀಡಲಾಗುವುದು ಎಂದು ಹೇಳಿದ್ದಾರೆ.

ಇದನ್ನು ಓದಿ : woman kills husband : ಜೀನ್ಸ್​ ಪ್ಯಾಂಟ್​ ಧರಿಸಿದ್ದನ್ನು ವಿರೋಧಿಸಿದ್ದಕ್ಕೆ ಪತಿಯನ್ನೇ ಕೊಂದ ಪತ್ನಿ

ಇದನ್ನೂ ಓದಿ : bomb threat message : ಡಿ.ಕೆ ಶಿವಕುಮಾರ್​ ಮಾಲೀಕತ್ವದ ಖಾಸಗಿ ಶಾಲೆಗೆ ಬಾಂಬ್​ ಬೆದರಿಕೆ ಸಂದೇಶ

milk products rate will be reduced cm given assurance

Comments are closed.