Oppo Reno8 Series : 4K ಅಲ್ಟ್ರಾ HDR ಕ್ಯಾಮರಾ ವಿಶೇಷತೆಯೊಂದಿಗೆ ಇಂದು ಬಿಡುಗಡೆಯಾಗಲಿರುವ Oppo Reno8 ಮತ್ತು Reno Pro ಸ್ಮಾರ್ಟ್‌ಫೋನ್‌ಗಳು!

ಓಪ್ಪೊ ಸ್ಮಾರ್ಟ್‌ಫೋನ್‌ಗಳ (Oppo Smartphones) ಲೋಕದಲ್ಲಿ ತನ್ನದೇ ವಿಶಿಷ್ಟ ಸ್ಥಾನ ಗುರುತಿಸಿಕೊಂಡಿದೆ. ಕ್ಯಾಮರಾ(Camera) ವನ್ನೇ ಕೇಂದ್ರವಾಗಿಸಿಕೊಂಡು ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವ ಕಂಪನಿಯಾಗದೆ. ಇಂತಹ ಜನಪ್ರಿಯ ಬ್ರಾಂಡ್‌ ಕಂಪನಿ ಜುಲೈ 18 ರಂದು ಭಾರತದ ಮಾರುಕಟ್ಟೆಯಲ್ಲಿ ಓಪ್ಪೋ Reno8 ಮತ್ತು Reno8 Pro, ಪ್ಯಾಡ್‌ ಏರ್‌ ಟ್ಯಾಬ್ಲೆಟ್‌ ಮತ್ತು ಇನ್ಕೊ X2 ಇಯರ್‌ ಬಡ್‌ಗಳನ್ನು (Oppo Reno8 Series) ಬಿಡುಗಡೆಗೊಳಿಸಲು ಸಜ್ಜಾಗಿದೆ.

ಈಗ ಬಿಡುಗಡೆಯಾಗಲಿರುವ ಓಪ್ಪೋ ರೆನೊ8 ಸರಣಿಯ(Oppo Reno8 Series) ಎಂದಿನಂತೆ ಕ್ಯಾಮರಾ ಕೇಂದ್ರೀಕೃತ ಸ್ಮಾರ್ಟ್‌ಫೋನ್‌ ಆಗಿದೆ. ಮುಂಬಲಿರುವ ಫೋನ್‌ ಮಾರ್ಸಿಸಿಲಿಕಾನ್‌ X ಇಮೇಜಿಂಗ್‌ NPU ಹೊಂದಿದೆ. ಪ್ರಬಲ ವೈಶಿಷ್ಟದೊಂದಿಗೆ ಹಿಂಬದಿಯ ಮೂರು ಕ್ಯಾಮಾರಾಗಳಿಂದ ಈ ಫೋನ್‌ ಸಂಯೋಜಿಸಲ್ಪಟ್ಟಿದೆ. ‌‌

ಹೊಸದಾದ ಓಪ್ಪೋ ರೆನೊ 8 ಪ್ರೋ ಉತ್ತಮ ಛಾಯಾಗ್ರಹಣಕ್ಕಾಗಿ ಸುಧಾರಿತ ಸಂವೇದಕಗಳಿಂದ ನಿರ್ಮಿತವಾಗಿದೆ ಎನ್ನಲಾಗುತ್ತಿದೆ. ಇದರಲ್ಲಿ ಹೊಂದಿಸಲಾದ ಕ್ಯಾಮರಾಗಳು 4K ಅಲ್ಟ್ರಾ HDR ಗುಣಮಟ್ಟವನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ. ಇದು ಇನ್ನಷ್ಟು ರಿಯಲಿಸ್ಟಕ್‌ ಮತ್ತು ಲೈಫ್‌–ಲೈಕ್‌ ಚಿತ್ರಗಳನ್ನು ನೀಡುತ್ತದೆ. ಟೀಸರ್‌ನಲ್ಲಿ ಈ ಬಗ್ಗೆ ಸುಳಿವು ನೀಡಿ ಕೂತೂಹಲವನ್ನು ಹೆಚ್ಚಿಸಿವೆ ಮತ್ತು ಹೊಸ ವೈಶಿಷ್ಟ್ಯಗಳನ್ನು ನಿರೀಕ್ಷಿಸಿಬಹುದು ಎಂಬುದನ್ನು ತೋರಿಸಿದೆ.

ಹೊಸ ವೈಶಿಷ್ಟ್ಯಗಳಿಂದ ಬಿಡುಗಡೆಗೆ ಸಜ್ಜಾದ ಓಪ್ಪೋ ಪ್ಯಾಡ್‌ ಏರ್‌ ಟ್ಯಾಬ್ಲೆಟ್‌ ಮತ್ತು ಇನ್ಕೋ X2 ಇಯರ್‌ ಬಡ್‌:

ಓಪ್ಪೋ ಪ್ಯಾಡ್‌ ಏರ್‌ ಟ್ಯಾಬ್ಲೆಟ್‌ :
ಓಪ್ಪೋ Reno8 ಸರಣಿಯ ಹೊರತಾಗಿ, ಓಪ್ಪೋ ಪ್ಯಾಡ್‌ ಏರ್‌ ಟ್ಯಾಬ್ಲೆಟ್ ಜೊತೆಗೆ ಲಾಂಚ್ ಆಗಲಿದೆ. ಮುಂಬರುವ ಓಪ್ಪೋ ಟ್ಯಾಬ್ಲೆಟ್ ದೊಡ್ಡದಾದ 10.36-ಇಂಚಿನ ಡಿಸ್ಪ್ಲೇ, ಹಿಂಭಾಗದಲ್ಲಿ ಶಕ್ತಿಶಾಲಿ ಕ್ಯಾಮೆರಾ ಮತ್ತು 12GB ವರೆಗಿನ RAM ನೀಡುತ್ತದೆ ಎನ್ನಲಾಗಿದೆ. ಹೊಸ ಓಪ್ಪೋ ಪ್ಯಾಡ್‌ ಏರ್‌ ಶಿಯೋಮಿ, ರಿಯಲ್‌ಮಿ ಮತ್ತು ಸ್ಯಾಮ್‌ಸಂಗ್‌ ಗಳಿಗೆ ಸ್ಪರ್ಧೆ ನೀಡುವ ಗುರಿ ಹೊಂದಿದೆ ಎಂದು ಹೇಳಲಾಗುತ್ತಿದೆ.

ಓಪ್ಪೋ ಇನ್ಕೋ X2 ಇಯರ್‌ ಬಡ್‌ :
ಓಪ್ಪೋ ರೆನೋ8 ಸರಣಿಯ ಸ್ಮಾರ್ಟ್‌ಫೋನ್‌ ಜೊತೆಗೆ ಓಪ್ಪೋ ಇನ್ಕೋ X2 (Oppo Enco X2) ಇಯರ್‌ಬಡ್‌ಗಳು ಸಹ ಇಂದು ಬಿಡುಗಡೆಗೆ ಸಜ್ಜಾಗಿದೆ. ಮುಂಬರಲಿರುವ ಇಯರ್‌ಬಡ್‌ಗಳು ಶಕ್ತಿಶಾಲಿ ಬಾಸ್, ಸುಧಾರಿತ ಸಂಪರ್ಕ ಮತ್ತು ಉತ್ತಮ ಸೌಕರ್ಯವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇದು ಮೊದಲನೆ ತಲೆಮಾರಿನ ಓಪ್ಪೋ ಇನ್ಕೋ X ನ ಉತ್ತರಾಧಿಕಾರಿಯಾಗಿಲಿದೆ, ಮುಂಬರುವ Oppo ಎನ್ಕೋ X2 ಬಳಕೆದಾರರಿಗೆ ಉತ್ತಮ ಆಡಿಯೊ ಅನುಭವವನ್ನು ನೀಡಲಿದೆ.

ಇಂದು ಬಿಡುಗಡೆಯಾಗಲಿರುವ ಓಪ್ಪೋ ರೆನೋ 8 ಸರಣಿ ಸ್ಮಾರ್ಟ್‌ಫೋನ್‌ಗಳು, ಪ್ಯಾಡ್‌ ಏರ್‌ ಟ್ಯಾಬ್ಲೆಟ್‌ ಮತ್ತು ಇಯರ್‌ ಬಡ್‌ಗಳ ಲಭ್ಯತೆ ಮತ್ತು ಬೆಲೆಗಳು ಬಿಡುಗಡೆ ಸಮಾರಂಭದಲ್ಲಿ ಬಹಿರಂಗಗೊಳ್ಳಲಿದೆ.

ಇದನ್ನೂ ಓದಿ : Charger for Smartphone ನೀವು ಆಯ್ದುಕೊಂಡ ಚಾರ್ಜರ್‌ ನಿಮ್ಮ ಮೊಬೈಲ್‌ಗೆ ಹೇಳಿಮಾಡಿಸಿದಂತಿದೆಯೇ?

ಇದನ್ನೂ ಓದಿ : Samsung Galaxy M Series: ಸ್ಯಾಮಸಂಗ್ ನಿಂದ ಎಂ ಸಿರೀಸ್ ಫೋನ್ ಬಿಡುಗಡೆ; ಈ ಫೋನಿನ ವೈಶಿಷ್ಟ್ಯಗಳೇನು ಗೊತ್ತಾ!

(Oppo Reno8 series, pad air tab, and enco x2 earbud Launching today)

Comments are closed.